-->
ಯಾದಗಿರಿ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ-yadagiri

ಯಾದಗಿರಿ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ-yadagiri

*ಯಾದಗಿರಿ:ಯಾದಗಿರಿ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ*-
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದಲ್ಲಿ ರವಿವಾರ ರಾತ್ರಿ ಎರಡು ಗಂಟೆಗೆ ದಲಿತ ಸಮುದಾಯದ ವಿವಾಹಿತೆ ಪಾಲಮ್ಮ ಗಂಡ ಮರಿಯಪ್ಪ ಹಾಕ್ರಿ ಎಂಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಅನೈತಿಕ ಚಟುವಟಿಕೆಗೆ ಒಪ್ಪದೇ ಇದ್ದಾಗ ಪೆಟ್ರೋಲ್ ಹಾಕಿ ಸುಟ್ಟ ಕೃತಿಯಾಗಿರುವ ಆರೋಪಿಗಳನ್ನು ಗಲ್ಲು ಶಿಕ್ಷೆ ವಿಧಿಸುವಂತೆ ಕ್ರಮಕೈಗೊಳ್ಳಬೇಕೆಂದು ಸಾಮೂಹಿಕ ಸಂಘಟನೆಗಳು ಪ್ರತಿಭಟನೆ ಮೂಲಕ  ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿಯನ್ನು ಸಲ್ಲಿಸಿದರು.
 ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ 5 ಎಕರೆ ಜಮೀನು ನೀಡುವಂತೆ ದಲಿತ ಒಕ್ಕೂಟಗಳ ವತಿಯಿಂದ ಸರಕಾರಕ್ಕೆ ಮನವಿ ಮಾಡಿದರು. 
ಇಲ್ಲಿವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಈಗಲಾದರೂ ಪೊಲೀಸ್ ಇಲಾಖೆಯವರು ಎಚ್ಚೆತ್ತುಕೊಂಡು ಸದರಿ ಕೊಲೆಪಾತಕನನ್ನು ಯಾವುದೇ ಸಮುದಾಯದವರು ಇದ್ದರು ಎಷ್ಟೇ ಪ್ರಬಾವಶಾಲಿಯಾಗಿದ್ದರೂ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಅವರನ್ನು ಗುರುತಿಸಿ ಅವರಿಗೆ ಗಲ್ಲು ಶಿಕ್ಷೆ ಆಗುವಂತೆ ಮಾಡಿದಾಗ ಮಾತ್ರ ಪೊಲೀಸರ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ಶಿವಕುಮಾರ್ ದೊಡ್ಡಮನಿ ಹೇಳಿದರು. 
 ಮಹಿಳಾ ರಾಜ್ಯಾಧ್ಯಕ್ಷರಾದ ಪ್ರೇಮ ಕಲಿಕೇರಿ ರವರು ಇದೇ ರೀತಿಯಿಂದ ಮಹಿಳೆಯರ ಮೇಲೆ ಅತ್ಯಾಚಾರ ಸಿಗುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಲು ಇದು ವಿಷಾದನೀಯ ವಿಷಯ ಗಂಡಸ್ತನ ಇದ್ದರೆ ನಿಮ್ಮತ್ರ ನೇರವಾಗಿ ಚರ್ಚೆಗೆ ಬನ್ನಿ ಸವಾಲು ಎದುರಿಸುವ ತಾಕತ್ತು ನಿಮ್ಮತ್ರ ಇದ್ದರೆ ನೇರವಾಗಿ ನಂಜೊತೆ ಮಾತಾಡಿ ನಿಮ್ಮ ಅಕ್ಕ ತಂಗಿಯರು ಅಣ್ಣ ತಂಗಿ ಎಂದರು ನಿಮಗೆ ಯಾರು ಇಲ್ವಾ ನಾವು ನಿಮ್ಮ ಹಾಗೆ ಒಬ್ಬ ಮಾನವೀಯತೆ ಮಹಿಳೆಯೆಂದು ಮರೆತು ಇತರ ಅಮಾನವೀಯ ದೃಶ್ಯಗಳನ್ನು ಮಾಡುವ ಹೇಗೆ ಕೃತ್ಯಕ್ಕೆ ನಿಮಗೆ ಯಾವ ಚಪ್ಪಲಿ ತಗೊಂಡು ಹೊಡಿಬೇಕು ಎಂದು ಪ್ರೇಮ ಕಲಿಕೇರಿ ಅವರು ಮಾತನಾಡಿದರು ಇದೇ ಸಂದರ್ಭದಲ್ಲಿ ವಾಸುದೇವ ಕಟ್ಟಿಮನಿ. ಭೀಮರಾಯ ರಸ್ತಾಪುರ.  ಭೀಮಶಂಕರ್ ಹಳಿಸಗರ. ಲಕ್ಷ್ಮಣ ಶೆಟ್ಟಿಗೇರಿ.ಅಭಿನಾಶ್ ಕಟ್ಟಿಮನಿ. ಅಯ್ಯಣ್ಣ ಕದರಾಪುರ. ನಾಗರಾಜ್ ಹರ್ನೂರ.ಹೊನ್ನಪ್ಪ ಹೊತಪೇಠ. ಅಂಬು ಇಂದ್ರನಗರ್. ಶಿವಕುಮಾರ್ ಇಂದ್ರನಗರ್ ಹೀಗೆ ಹತ್ತಾರು ದಲಿತ ಸಂಘಟನೆಯ ಪ್ರಮುಖ ನಾಯಕರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

0 Response to "ಯಾದಗಿರಿ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ-yadagiri"

Post a Comment

Article Top Ads

Central Ads Article 1

Middle Ads Article 2

Article Bottom Ads