-->
ಗಜಾಪುರ:ನಿದ್ದೆ ಕೆಡಿಸಿದ  ಗಡವ,ಚಿರನಿದ್ರೆಯಲ್ಲಿ ಹೊಣೆಗೇಡಿ ಅರಣ್ಯ ಇಲಾಖೆ-vjyngr

ಗಜಾಪುರ:ನಿದ್ದೆ ಕೆಡಿಸಿದ ಗಡವ,ಚಿರನಿದ್ರೆಯಲ್ಲಿ ಹೊಣೆಗೇಡಿ ಅರಣ್ಯ ಇಲಾಖೆ-vjyngr

*ಗಜಾಪುರ:ನಿದ್ದೆ ಕೆಡಿಸಿದ  ಗಡವ,ಚಿರನಿದ್ರೆಯಲ್ಲಿ ಹೊಣೆಗೇಡಿ ಅರಣ್ಯ ಇಲಾಖೆ*-ವಿಜಯನಗರ  ಜಿಲ್ಲೆ ಕೂಡ್ಲಿಗಿ ಅರಣ್ಯ ಇಲಾಖಾ ವ್ಯಾಪ್ತಿಗೆ ಬರುವ ಕೊಟ್ಟರು ತಾಲೂಕು,ಗಜಾಪುರ ಗ್ರಾಮದ ಜನತೆಯ ನೆಮ್ಮದಿಯನ್ನು  ಗಡವ(ಕೋಡಗ) ಹಾಳುಮಾಡಿದೆ.
*ಅರಣ್ಯ ಇಲಾಖೆಗೆ ಹಕ್ಕೊತ್ತಾಯ*- ತಮ್ಮ ಗ್ರ‍ಾಮದಲ್ಲಿ ಎರೆಡು ವರ್ಷದಿಂದ ಉಪಠಳ ನೀಡುತ್ತಿರುವ ಕೋಡಗವನ್ನು ಸೆರೆಹಿಡಿಯುವಂತೆ, ಗ್ರಾಮಸ್ಥರು ಅ 7ರಂದು ಕೂಡ್ಲಿಗಿ ವಲಯ ಅರಣ್ಯ ಇಲಾಖಾಧಿಕಾರಿಗೆ ಹಕ್ಕೊತ್ತಾಯ ಮಾಡಿದ್ದಾರೆ. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ವಿವಿದ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
 ಸುಮಾರು ಎರೆಡು ವರ್ಷದಿಂದ ಗಜಾಪುರದಲ್ಲಿ ಠಿಕಾಣಿ ಊಡಿದ್ದು,ಗ್ರಾಮಸ್ಥರ ಮೇಲೆ ದಾಳಿಮಾಡುತ್ತಾ ಗ್ರ‍ಾಮಸ್ಥರನ್ನ ಭಯದಲ್ಲಿ ಬೆಸ್ತು ಬೀಳುವಂತೆ ಮಾಡಿದೆ.ವಾರದಲ್ಲಿ ಒಬ್ಬಿಬ್ಬರಂತೆ ಕೋಡಗನ ದಾಳಿಗೆ ಒಳಗಾಗುತ್ತಿದ್ದು,ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದೆಯಾದರೂ ಏನೂ ಪ್ರಯೋಜನವಾಗಿಲ್ಲ ಎಂದು  ಗ್ರಾಮದ ಮುಖಂಡರ ಬೇಸರವ್ಯೆಕ್ತಡಿಸಿದ್ದಾರೆ.
*ನಿರ್ಲಕ್ಷ್ಯ-ಖಂಡನೆ*-
ವನ್ಯ ಜೀವಿಯಾಗಿರುವ ಕೋಡಗವನ್ನು ಸೆರೆಹಿಡಿಯಬೇಕಾಗಿರುವ ಅರಣ್ಯ ಇಲ‍ಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಗ್ರ‍ಾಮಸ್ಥರು ದೂರಿದ್ದು,ಜೀವಹಾನಿ ಯಾದಲ್ಲಿ ಅರಣ್ಯ ಇಲಾಖೆಯೇ ನೇರಹೊಣೆ ಹೊರಬೇಕಿದೆ ಎಂದು ಅವರು ಎಚ್ಚರಿಸಿದ್ದಾರೆ.ಕೋಡಗವು ಈಗ್ಗೆ ಸುಮಾರು ಮುವತ್ತು ಜನರಿಗೆ ಗಂಭಿರವಾಗಿ ಕಚ್ಚಿ ಗಾಯಗೊಳಿಸಿದ್ದು,ಕೆಲವರು ಗಾಯದಿಂದ ಸುಧಾರಿಸಿಕೊಳ್ಳುವಲ್ಲಿ ನರಕಯಾತೆ ಅನುಭವಿಸುತ್ತಿದ್ದಾರೆ. ಕೋಡಗವನ್ನು ಹಿಡಿಯಲು ಅರಣ್ಯ ಇಲಾಖೆ ಸಾಂಕೇತಿಕವಾಗಿ ಪ್ರಯತ್ನ ಮಾಡಿದೆಯಾದರೂ ಪ್ರ‍ಾಮಾಣಿಕ ಯತ್ನ ಮಾಡಿಲ್ಲ,ಅರಣ್ಯ ಇಲಾಖಾಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದು ಅರಣ್ಯ ಇಲಾಖೆ ಚಿರನಿದ್ರೆಯಲ್ಲಿದೆ ಎಂದು ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ.ಕೋಡಗವನ್ನು ಹಿಡಿಯದೇ ಹೊಣೆಗೇಡಿತೇನ ತೋರಿರುವ ಅರಣ್ಯ ಇಲಾಖೆಯ ವಿರುದ್ಧ,ಗ್ರಾಮಸ್ಥರು ಕಾನೂನು ಸಮರ ಸಾರಲು ಸನ್ನದ್ದರಾಗಿರುವುದಾಗಿ ಅವರು ಈ ಮೂಲಕ ಎಚ್ಚರಿಸಿದ್ದಾರೆ.
*ಅರಣ್ಯ ರೋಧನ, ಜಿಲ್ಲಾಧಿಕಾರಿಗಳಲ್ಲಿ ಮೊರೆ*- ಕೆಳೆದ ಎರೆಡು ವರ್ಷಗಳಿಂದ ಗ್ರಾಮಸ್ಥರ  ನೆಮ್ಮದಿ ಹಾಳುಮಾಡುತ್ತಿರುವ ಕೋಡಗವನ್ನು,ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದ್ದು ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಗ್ರಾಮಸ್ಥರು ಕೋರಿದ್ದಾರೆ.
*ನಿರ್ಲಕ್ಷ್ಯ ತೋರಿದ್ದಲ್ಲಿ "ಕಚೇರಿಗೆ ಬೀಗ" ಎಚ್ಚರಿಕೆ*-ಶೀಘ್ರವೇ ಕೋಡಗವನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯದಿದ್ದಲ್ಲಿ,ಕೋಡಗನ ದಾಳಿಯಿಂದ ಸಂಭವಿಸಬಹುದಾದ ಅನಾಹುತಗಳಿಗೆ ಅರಣ್ಯ ಇಲಾಖಾಧಿಕಾರಿಗಳೇ ಹೊಣೆಯಾಗಬೇಕಿದೆ.ಅರಣ್ಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಶೀಘ್ರವೇ ವಿವಿದ ಸಂಘಟನೆತಳ ನೇತೃತ್ವದಲ್ಲಿ,ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಕಚೇರಿಗೆ ಬೀಗ ಹಾಕಿ ಜಿಲ್ಲಾಧಿಕಾರಿ ಗಳು ಬರುವವರೆಗೆ ಪ್ರತಿಭಟನೆ ನಡೆಸಲಾಗುವುದೆಂದು, ಗಜಾಪುರ ಗ್ರಾಮಸ್ಥರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ,ಭಾರತೀಯ ಮಹಿಳಾ ಒಕ್ಕೂಟ,ಎಐಟಿಯುಸಿ,ಕಟ್ಟಡ ಕಾರ್ಮಿಕರು,ರೈತರು ಮಹಿಳಾ ಸಂಘಗಳ ಪದಾಧಿಕಾರಿಗಳು ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು,ಈ ಮೂಲಕ ತಹಶಿಲ್ದಾರರಿಗೆ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

  ವಿ.ಜಿ.ವೃಷಭೇಂದ್ರ 

0 Response to "ಗಜಾಪುರ:ನಿದ್ದೆ ಕೆಡಿಸಿದ ಗಡವ,ಚಿರನಿದ್ರೆಯಲ್ಲಿ ಹೊಣೆಗೇಡಿ ಅರಣ್ಯ ಇಲಾಖೆ-vjyngr"

Post a Comment

Article Top Ads

Central Ads Article 1

Middle Ads Article 2

Article Bottom Ads