-->
ಉತ್ತರ ಪ್ರದೇಶದ ಘಟನೆ:ಪ್ರಜಾಪ್ರಭುತ್ವದ ಕಗ್ಗೊಲೆ-ಸಿ.ವಿರುಪಾಕ್ಷಪ್ಪ-Vijayanagara

ಉತ್ತರ ಪ್ರದೇಶದ ಘಟನೆ:ಪ್ರಜಾಪ್ರಭುತ್ವದ ಕಗ್ಗೊಲೆ-ಸಿ.ವಿರುಪಾಕ್ಷಪ್ಪ-Vijayanagara

ಉತ್ತರ ಪ್ರದೇಶದ ಘಟನೆ:ಪ್ರಜಾಪ್ರಭುತ್ವದ ಕಗ್ಗೊಲೆ-ಸಿ.ವಿರುಪಾಕ್ಷಪ್ಪ

ವಿಜಯನಗರ  ಜಿಲ್ಲೆ ಕೂಡ್ಲಿಗಿ,ಉತ್ತರ ಪ್ರದೇಶದಲ್ಲಿ ರೈತ ಹೋರಾಟ ಗಾರರ ಮೇಲೆ ಕೇಂದ್ರ ಸಚಿವರು ತಮ್ಮ ವಾಹನ ಚಲಾಯಿಸಿ ಹತ್ಯೆಗೈದಿರುವುದನ್ನು,
ಕೂಡ್ಲಿಗಿ  ಸಂಯುಕ್ತ ರೈತ ಹೋರಾಟ ಸಮಿತಿ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.ತಪ್ಪಿತಸ್ಥರ ವಿರುದ್ಧ ಶಿಸ್ಥುಕ್ರಮಕ್ಕಾಗಿ ಹೋರಾಟಗಾರರು ಆಗ್ರಹಿಸಿದ್ದು ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಮಾಡಿದ್ದಾರೆ.
ಹೋರಾಟಗಾರ ಸಿ.ವಿರುಪಾಕ್ಷಪ್ಪ ನೇತೃತ್ವದಲ್ಲಿ ರೈತರು ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡಿದರು,ವಿರುಪಾಕ್ಷಪ್ಪ ಮಾತನಾಡಿ  ರೈತರ ಕಗ್ಗೊಲೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು ಹೋರಾಟ ಹತ್ತಿಕ್ಕುವ ಕುತಂತ್ರ ಎಂದು ಅವರು ಖಂಡಿಸಿದರು.ರಾಷ್ಟ್ರಪತಿಗಳು ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿದೆ,ಈ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ಹೋರಾಟಗಾರರಿಗೆ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸದರು.ಹಕ್ಕೋತ್ತಾಯ ಪತ್ರವನ್ನು ಉಪತಹಶಿಲ್ದಾರರಾದ ಶ್ರೀಮತಿ ಅರುಂಧತಿ ನಾಗವಿರವರಿಗೆ ನೀಡಲಾಯಿತು.
ಸಿಐಟಿಯು ಗುನ್ನಳ್ಳಿ ರಾಘವೇಂದ್ರ,ರೈತ ಸಂಘದ ಮುಖಂಡರಾದ ಕಕ್ಕುಪ್ಪಿ ಬಸವರಾಜ,ಭಾಷಾಸಾಬ್,ಕೈವಲ್ಯಾಪುರ,ನಾಗರಾಜ,ಹಾಲಸ್ವಾಮಿ,ಕೊಟ್ರೇಶ,ಶಿವಪುರ ಮಂಜುನಾಥ,ಕಾಲ್ಚೆಟ್ಟಿ ಕೃಷ್ಣಪ್ಪ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಇದ್ದರು.
  ವಿ.ಜಿ.ವೃಷಭೇಂದ್ರ 

0 Response to "ಉತ್ತರ ಪ್ರದೇಶದ ಘಟನೆ:ಪ್ರಜಾಪ್ರಭುತ್ವದ ಕಗ್ಗೊಲೆ-ಸಿ.ವಿರುಪಾಕ್ಷಪ್ಪ-Vijayanagara"

Post a Comment

Article Top Ads

Central Ads Article 1

Middle Ads Article 2

Article Bottom Ads