-->
ಕರುನಾಡ ಕಾರ್ಮಿಕ ವೇದಿಕೆ  ಜಿಲ್ಲಾಧ್ಯಕ್ಷರಾಗಿ ಮೊಹಮದ್ ಸಾದಿಕ್-vijayanagar

ಕರುನಾಡ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷರಾಗಿ ಮೊಹಮದ್ ಸಾದಿಕ್-vijayanagar

ಕರುನಾಡ ಕಾರ್ಮಿಕ ವೇದಿಕೆ  ಜಿಲ್ಲಾಧ್ಯಕ್ಷರಾಗಿ ಮೊಹಮದ್ ಸಾದಿಕ್

ವಿಜಯನಗರ  ಜಿಲ್ಲೆ ಕೂಡ್ಲಿಗಿ, ಕರುನಾಡ ಕಾರ್ಮಿಕ ವೇದಿಕೆಯ ನೂತನ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ. ಚಿಕ್ಕಜೋಗಿಹಳ್ಳಿ ಮೊಹಮದ್ ಸಾದಿಕ್ ನೇಮಕವಾಗಿದ್ದಾರೆ, ವೇದಿಕೆಯ ಸಂಸ್ಥಾಪಕರು ಹಾಗೂ ರಾಜ್ಯಧ್ಯಕ್ಷರಾದ ಚಂದ್ರುಗೌಡ ಹಾಗೂ ವೇದಿಕೆಯ ಮಹಿಳಾ  ಘಟಕ ರಾಜ್ಯಧ್ಯಕ್ಷೆ ಶ್ರೀಮತಿಲಕ್ಷ್ಮೀ ಗೌಡ ರವರು.
 ಖುದ್ದು ಚಿಕ್ಕಜೋಗಿಹಳ್ಳಿ ಗ್ರಾಮಕ್ಕೆ ದಾವಿಸಿ ವೇದಿಕೆಯ ಜಿಲ್ಲಾ ನೂತನ ಘಟಕಕ್ಕೆ ತಳಪಾಯ ಹಾಕಿದ್ದಾರೆ, ಹೋರಾಟಗಾರ ವಿಷ್ಣು ಸೇನಾ ಸಮಿತಿ ಉಪಾಧ್ಯಕ್ಷರಾದ ಮೊಹಮ್ಮದ್‌ ಸಾಧಿಕ್ ರನ್ನು. ಕರುನಾಡ ಕಾರ್ಮಿಕ ವೇದಿಕೆಯ ನೂತನ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ರಾಜ್ಯಧ್ಯಕ್ಷ ಚಂದ್ರು ವೇದಿಕೆಯ ಪದಾಧಿಕಾರಿಗಳನ್ನುದ್ದೇಶಸಿ ಮಾತನಾಡಿದರು. ವೇದಿಕೆಯನ್ನು ಸಂಘಟಿಸಬೇಕು ಗ್ರಾಮೀಣ ಜನರ ಧ್ವನಿಯಾಗಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕು, ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ವೇದಿಕೆಯ ಗ್ರಾಮ ಘಟಕ, ಹೋಬಳಿ ಘಟಕಗಳನ್ನು ಸ್ಥಾಪಿಸಿ.ಪ್ರತಿ ತಾಲೂಕು ಮಟ್ಟದಲ್ಲಿ ಸಂಘಟನೆಯಿಂದ ಸಾರ್ವಜನಿಕ ಸಂಪರ್ಕ ಕಚೇರಿ ತೆರೆಯಬೇಕು,
ಈ ಮೂಲಕ ಜಿಲ್ಲೆಯಾಧ್ಯಂತ ವೇದಿಕೆಯನ್ನ ಭಲಗೊಳಿಸಬೇಕೆಂದರು. ಜೋಗಿಹಳ್ಳಿ ಗ್ರಾಮ ಸೇರಿದಂತೆ ವಿವಿದ ಗ್ರಾಮಗಳ ವೇದಿಕೆಯ ಪದಾಧಿಕಾರಿಗಳು ಸದಸ್ಯರು ಇದ್ದರು.
ಹೊಸಹಳ್ಳಿ ಹೋಬಳಿಯ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ  ಹಾಗೂ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಕುರಿಹಟ್ಟಿ ಓಬಣ್ಣ.ಪ್ರಭಾವಿ ರಾಜಕೀಯ ಧುರೀಣರಾದ ಎಸ್.ಪಿ.ಪ್ರಕಾಶ. ವೇದಿಕೆಯ ಮುಖಂಡರಾದ ಡಿ. ಕೊಟ್ರೇಶ,ಹಮೀದ್,ಜಿಯಾವುಲ್ಲಾ,ಮುಜೀಬ್,ಗಿರಿಬಾಬು,‍ಮನ್ಸೂರ್ ಅಲಿ,ಮಹಮದ್,ಹಮೀದ್,ದೇವೇಂದ್ರಪ್ಪ,ಆನಂದ,ಜಾಫರ್, ಅಜ್ಜಯ್ಯ,ಬಸಣ್ಣ,ಅಂಜಿನಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.

 ವಿ.ಜಿ.ವೃಷಭೇಂದ್ರ ಕೂಡ್ಲಿಗಿ

0 Response to "ಕರುನಾಡ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷರಾಗಿ ಮೊಹಮದ್ ಸಾದಿಕ್-vijayanagar"

Post a Comment

Article Top Ads

Central Ads Article 1

Middle Ads Article 2

Article Bottom Ads