
ಕೂಡ್ಲಿಗಿ ಪಪಂ:ಮಿತಿ ಮೀರಿದ ಬಿಡಾಡಿ ದನ,ಬೀದಿ ನಾಯಿ,ಹಂದಿಗಳ ಹಾವಳಿ-Vijayanagar
Tuesday, October 12, 2021
Comment
ಕೂಡ್ಲಿಗಿ ಪಪಂ:ಮಿತಿ ಮೀರಿದ ಬಿಡಾಡಿ ದನ,ಬೀದಿ ನಾಯಿ,ಹಂದಿಗಳ ಹಾವಳಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಗಲ್ಲಿ ಗಲ್ಲಿ ಗಳಲ್ಲಿ ಹಂದಿಗಳು ಹೆಚ್ಚಾಗಿವೆ,ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದ್ದು ,ಪ್ರಮುಖ ರಸ್ಥೆಗಳಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು ಪಪಂ ಮೌನವಾಗಿದೆ ಎಂದು ನಾಗರೀಕರು ದೂರಿದ್ದಾರೆ.ಪಟ್ಟಣದ ಪ್ರತಿ ಓಣಿಗಳಲ್ಲಿ ಹತ್ತಾರು ಬೀದಿ ನಾಯಿಗಳು ಹಾಗೂ ಹಂದಿಗಳು ಕಾಣಸಿಗುತ್ತವೆ,ಕೆಲ ಗಲ್ಲಿಗಳಲ್ಲಿನ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು ಅವು ಹಂದಿಗಳ ಆವಾಸ ಸ್ಥಾನವಾಗಿವೆ.ಸಾಂಕ್ರಾಮಿಕ ರೋಗಗಳನ್ನು ಉತ್ಪಾದಿಸುವ ಕಾರ್ಖಾನೆಗಳಾವೆ,ಪ್ರಮುಖ ರಸ್ಥೆಗಳಲ್ಲಿ ದನಗಳದ್ದೇ ದರ್ಭಾರು ನಡೆದಿದ್ದು ಪಪಂ ಮೌನವಹಿಸಿದೆ ಎಂದು ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯಿಗಳು ಓಣಿ ಓಣಿಗಳಲ್ಲಿ ಪ್ರಮುಖ ರಸ್ಥೆಗಳಲ್ಲಿ ಹಗಲಿರುಳು ಠಿಕಾಣಿ ಊಡಿರುತ್ತವೆ,ಮಕ್ಕಳು ವೃದ್ಧರು ನಡೆದಾಡುವುದು ದುಸ್ಥರವಾಗಿದ್ದು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿರುವ ಪ್ರಕರಣಗಳು ಜರುಗಿವೆ.ನಾಯಿಗಳು ಗುಂಪು ಗುಂಪಾಗಿದ್ದು ಹಗಲು ರಾತ್ರಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಶೀಘ್ರವೇ ಬೀದಿ ನಾಯಿಗಳನ್ನು ಹಾಗೂ ಹಂದಿಗಳನ್ನು ನಿಯಂತ್ರಿಸಬೇಕಿದೆ ಎಂದು ನಾಗರೀಕರು ಆಗ್ರಹಿಸಿದ್ದಾರೆ.ಬಿಡಾಡಿ ದನಗಳು ದಿನಪೂರ್ತಿ ಪ್ರಮುಖ ರಸ್ತೆಗಳಲ್ಲಿ ಮಲಗಿದ್ದು ವೃತ್ತಗಳು ದನಗಳ ದೊಡ್ಡಿಯಾಗಿವೆ.ಇದರಿಂದಾಗಿ ಹಲವಾರು ವಾಹನ ಸವಾರರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ,ಸಾಕಷ್ಟು ಅಪಘಾತಗಳು ಜರುಗಿವೆ ಮತ್ತು ವಾಹನ ಸವಾರರು ನಿತ್ಯ ಸರ್ಕಸ್ ಮಾಡುವಂತ ದುಸ್ಥಿತಿ ನಿರ್ಮಾಣವಾಗಿದೆ.
ಕಾರಣ ಶೀಘ್ರವೇ ಬಿಡಾಡಿ ದನಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು,ಅಥವಾ ಗೋಶಾಲೆಗೆ ರವಾನಿಸಬೇಕೆಂದು ಪಟ್ಟಣದ ನಾಗರೀಕರು ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳು.ಈ ಮೂಲಕ ಪಪಂ ಮುಖ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದರೆ,ನಿರ್ಲಕ್ಷ್ಯ ತೋರಿದ್ದಲ್ಲಿ ಹಲವು ಸಂಘಟನೆಗಳ ಸಹಯೋಗದಲ್ಲಿ ಪಪಂಗೆ ಮುತ್ತಿಗೆ ಹಾಕಿ ಪ್ರತಿಪ್ರಟಿಸಲಾಗುವುದೆಂದು ಪ್ರಮುಖರು ಎಚ್ಚರಿಸಿದ್ದಾರೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
0 Response to "ಕೂಡ್ಲಿಗಿ ಪಪಂ:ಮಿತಿ ಮೀರಿದ ಬಿಡಾಡಿ ದನ,ಬೀದಿ ನಾಯಿ,ಹಂದಿಗಳ ಹಾವಳಿ-Vijayanagar"
Post a Comment