
ವಿದ್ಯುತ್ ಅವಘಡಕ್ಕೆ ಪ್ರಿಜ್ ಬ್ಲಾಸ್ಟ್:ತಪ್ಪಿದ ಭಾರೀ ಅನಾಹುತ-vijayanagar
Thursday, October 7, 2021
Comment
*ವಿದ್ಯುತ್ ಅವಘಡಕ್ಕೆ ಪ್ರಿಜ್ ಬ್ಲಾಸ್ಟ್:ತಪ್ಪಿದ ಭಾರೀ ಅನಾಹುತ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ,20ನೇ ವಾರ್ಡ್ ಗೋವಿಂದಗಿರಿ ತಾಂಡ ಗ್ರಾಮದಲ್ಲಿ.
ಗೋಪ್ಯಾನಾಯ್ಕ ಎಂಬುವರಿಗೆ ಸೇರಿದ ಅಂಗಡಿಯಲ್ಲಿದ್ದ ಪ್ರಿಜ್,ಸೆ 7ರಂದು ರಾತ್ರಿ9ಗಂಟೆಯಲ್ಲಿ ವಿದ್ಯುತ್ ಸರಬರಾಜಿಲ್ಲಾದ ಏರುಪೇರಿನಿಂದಾಗಿ ಪ್ರಿಜ್ ಬ್ಲಾಸ್ಟ್ ಆಗಿದೆ. ಪ್ರಿಜ್ ಬ್ಲಾಸ್ಟ್ ಆದ ಪರಿಣಾಮ ಮೇಲ್ಚಾವಣೆ ಕಿತ್ತಿದ್ದು ಬೆಂಕಿಹೊತ್ತಿ ಹುರಿದಿದೆ,ಪರಿಣಾಮ ದುಭಾರಿ ಬೆಲೆಯ ಪೀಠೋಪಕರಣಗಳು ಹಾಗೂ 30ಸಾವಿರ ನಗದು ಹಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಹತ್ತಿರದಲ್ಲಿ ಯಾರು ಇಲ್ಲದ್ದರಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು,ದುಭಾರಿ ಬೆಲೆಯ ಪೀಠೋಪಕರಣಗಳು ಹಾಗೂ ಪ್ರಿಜ್ ಸಂಪೂರ್ಣ ಭಸ್ಮಗೊಂಡಿದ್ದು. ವಿಷಯ ತಿಳಿದ ಕೂಡಲೇ ಜಾಗ್ರತರಾದ ಅಕ್ಕಪಕ್ಕದವರು ಹಾಗೂ ಗ್ರಾಮಸ್ಥರು, ಸಮಯ ಪ್ರಜ್ಞೆ ಮೆರದಿದ್ದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಪ್ರಿಜ್
ಬ್ಲಾಸ್ಟ್ ನಿಂದಾಗಿ ಬೆಂಕಿ ಹೊತ್ತಿ ಹುರಿದಿರುವುದರಿಂದಾಗಿ ನಗದು ಹಣ ಸೇರಿದಂತೆ,ದುಭಾರಿ ಪೀಟೋಪಕರಣಗಳು ಸುಟ್ಟು ಕರಕಲಾಗಿದ್ದು ಒಟ್ಟು ಒಂದು ಲಕ್ಷ₹ಕ್ಕೂ ಅಧಿಕ ನಷ್ಟ ವಾಗಿದೆ ಎಂದು ತಿಳಿದು ಬಂದಿದೆ.
ವಿ.ಜಿ.ವೃಷಭೇಂದ್ರ
0 Response to "ವಿದ್ಯುತ್ ಅವಘಡಕ್ಕೆ ಪ್ರಿಜ್ ಬ್ಲಾಸ್ಟ್:ತಪ್ಪಿದ ಭಾರೀ ಅನಾಹುತ-vijayanagar"
Post a Comment