
ಗಾಂಜಾ ನಶೆಯಲ್ಲಿ ಯುವಕನ ತಲೆ ಜಜ್ಜಿ ಬರ್ಬರ ಕೊಲೆ ಮಾಡಿದ ಸ್ನೇಹಿತರು.!?-Nelamangala
Wednesday, October 13, 2021
Comment
ಗಾಂಜಾ ನಶೆಯಲ್ಲಿ ಯುವಕನ ತಲೆ ಜಜ್ಜಿ ಬರ್ಬರ ಕೊಲೆ ಮಾಡಿದ ಸ್ನೇಹಿತರು.!?
ನೆಲಮಂಗಲ: ಗ್ರಾನೈಟ್ ಫ್ಯಾಕ್ಟರಿಯಲ್ಲಿ ಯುವಕನನ್ನು ಸ್ನೇಹಿತರೇ ಸೇರಿ ಕೊಲೆ ಮಾಡಿರುವ ಘಟನೆ ದಾಬಸ್ಪೇಟೆಯಲ್ಲಿ ನಡೆದಿದೆ. ಬರಗೇನಹಳ್ಳಿ ನಿವಾಸಿ ಕೆಂಪಣ್ಣ ( 23) ಕೊಲೆಯಾದ ವ್ಯಕ್ತಿ.
ಕೆಂಪಣ್ಣ ಹೊನ್ನೇನಹಳ್ಳಿಯ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಮಂಗಳವಾರ ರಾತ್ರಿ ಕೆಲಸ ಮಾಡುವ ವೇಳೆ ಅಲ್ಲಿನ ಕೆಲಸಗಾರ ಸ್ನೇಹಿತರ ಜತೆ ಜಗಳ ಆಗಿದೆ. ಇದು ವಿಕೋಪಕ್ಕೆ ತಿರುಗಿ ಕೆಂಪರಾಜ್ ಮೇಲೆ ಹಲ್ಲೆ ನಡೆಸಿ ಗ್ರಾನೈಟ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕಲೆಸ ಮುಗಿದ ಮೇಲೆ ಪ್ಯಾಕ್ಟರಿಯಲ್ಲಿ ಕೆಂಪರಾಜು, ಸ್ನೇಹಿತರ ಜೋತೆ ಪಾರ್ಟಿ ಮಾಡಿದ್ದು, ಗಾಂಜಾ ಹೊಡೆದಿರುವ ಶಂಕೆಯಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಖಚಿತಪಟ್ಟಿಲ್ಲ. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ದಾಬಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Response to "ಗಾಂಜಾ ನಶೆಯಲ್ಲಿ ಯುವಕನ ತಲೆ ಜಜ್ಜಿ ಬರ್ಬರ ಕೊಲೆ ಮಾಡಿದ ಸ್ನೇಹಿತರು.!?-Nelamangala"
Post a Comment