
ಕತ್ತರಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಟಿ.ಪಾಂಡುರಂಗ ಆಯ್ಕೆ-Mandya
Friday, October 1, 2021
Comment
ಕೆ.ಆರ್.ಪೇಟೆ :
ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಟಿ.ಪಾಂಡುರಂಗ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಚನ್ನಕೇಶವ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ
ಇಂದು ನಡೆದ ಚುನಾವಣೆಯಲ್ಲಿ ಪಾಂಡುರಂಗ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕಾಳಯ್ಯ ಆಯ್ಕೆಯಾದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ನಿರ್ದೇಶಕರಾದ ರವೀಗೌಡ,ಕೆ.ಎನ್.ಚಂದ್ರ, ಕೆ.ಸಿ.ಚಂದ್ರಶೇಖರ್, ಮಂಜುಳಾ, ಜವರಮ್ಮ,ಮುಖಂಡರಾದ ಕೆ.ಸಿ.ಮಹೇಶ್, ಸಿದ್ದಲಿಂಗೇಗೌಡ,ಕೆ.ಎನ್.ಬಾಬು,ಕೆ.ಜೆ.ಚಂದ್ರೇಗೌಡ,ಪ್ರಕಾಶ್, ನಾಗೇಗೌಡ,ವಿಶ್ವನಾಥ ಅಭಿನಂದಿಸಿದರು.
0 Response to "ಕತ್ತರಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಟಿ.ಪಾಂಡುರಂಗ ಆಯ್ಕೆ-Mandya"
Post a Comment