
ಕೂಡ್ಲಿಗಿ: ಮಧುರಾಗೆ ವಿಜ್ಞಾನ ವಿಭಾಗದಲ್ಲಿ ಹೆಚ್ಚುಅಂಕ ತಾಲೂಕಾಡಳಿತದಿಂದ ಸನ್ಮಾನ -kudligi
Wednesday, October 20, 2021
Comment
ಕೂಡ್ಲಿಗಿ: ಮಧುರಾಗೆ ವಿಜ್ಞಾನ ವಿಭಾಗದಲ್ಲಿ ಹೆಚ್ಚುಅಂಕ ತಾಲೂಕಾಡಳಿತದಿಂದ ಸನ್ಮಾನ
ಕೂಡ್ಲಿಗಿ: ಅ20:ಸರಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ದಲ್ಲಿ ಹೆಚ್ಚು ಅಂಕ ಗಳಿಸಿದ ಕು ಮಧುರಾಗೆ ತಾಲೂಕಾಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು
ಪಟ್ಟಣದ ಲ್ಲಿ ತಾಲೂಕಾಡಳಿತ ಮತ್ತು ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯವಾಗಿ ಸಮುದಾಯದ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ ಪಟ್ಟಣದ ಸರಕಾರಿ ಕಾಲೇಜಿನಲ್ಲಿಯೆ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಪಡೆದ ಮದುರಾಗೆ ಸನ್ಮಾನಿಸಲಾಯಿತು
ಸರಕಾರಿ ಶಾಲೆ ಎಂದರೆ ಮೂಗುಮುರಿಯುವ ಈ ದಿನಮಾನದಲ್ಲಿ ಸರಕಾರಿ ಕಾಲೇಜಿಲ್ಲಿಯೆ ವಿಜ್ಞಾನ ವಿಭಾಗದಲ್ಲಿ 534 ಅಂಕಗಳನ್ನು ಪಡೆದು 89% ರಷ್ಟು ಫಲಿತಾಂಶ ಪಡೆದುಕೊಂಡು ಕಾಲೇಜಿಗೆ ಹಾಗೂ ತಾಲೂಕಿನ ಕೀರ್ತಿ ಯನ್ನು ಹೆಚ್ಚಿಸಿದ್ದಾಳೆ
ಇಂತಹ ವಾಲ್ಮೀಕಿ ನಾಯಕ ಸಮಾಜದ ಪ್ರತಿಭೆಯನ್ನು ಗುರುತಿಸಿ ತಾಲೂಕಾಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ತಹಸೀಲ್ದಾರ ಜಗದೀಶ್ ತಾಲೂಕಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ ಎಂ ಬಸಣ್ಣ ತಾಲೂಕಾ ಪರಿಶಿಷ್ಟ ವರ್ಗದ ಅಭಿವೃದ್ಧಿ ಅಧಿಕಾರಿ ಮೆಹಬೂಬ್ ಭಾಷಾ ಸೇರಿದಂತೆ ಇದ್ದರು
0 Response to "ಕೂಡ್ಲಿಗಿ: ಮಧುರಾಗೆ ವಿಜ್ಞಾನ ವಿಭಾಗದಲ್ಲಿ ಹೆಚ್ಚುಅಂಕ ತಾಲೂಕಾಡಳಿತದಿಂದ ಸನ್ಮಾನ -kudligi"
Post a Comment