-->
ಹಿರೇಹೆಗ್ಡಾಳು:ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ-ಎಲ್ಲೆಡೆ ಭ್ರಷ್ಟಾಚಾರದ ದುರ್ನಾಥ-kudligi

ಹಿರೇಹೆಗ್ಡಾಳು:ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ-ಎಲ್ಲೆಡೆ ಭ್ರಷ್ಟಾಚಾರದ ದುರ್ನಾಥ-kudligi

ಹಿರೇಹೆಗ್ಡಾಳು:ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ-ಎಲ್ಲೆಡೆ ಭ್ರಷ್ಟಾಚಾರದ ದುರ್ನಾಥ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಹೆಗ್ಡಾಳು ಗ್ರಾಮದಲ್ಲಿ,ಸರ್ಕಾರ ಗ್ರಾಮೀಣಾಭಿವೃದ್ಧಿಗಾಗಿ ಜಿಲ್ಲಾಡಳಿತ ಗ್ರಾಮಗಳಲ್ಲಿನ ಸಮಸ್ತೆಗಳನ್ನು ಆಲಿಸಲೆಂದು.ಜಿಲ್ಲಾಧಿಕಾರಿ ನಡಿಗೆ ಹಳ್ಳಿಕಡೆಗೆ ಗ್ರಾಮ ವಾಸ್ತವ್ಯ ಜಾರಿ ತಂದಿದೆ ಸರ್ಕಾರ,ಗ್ರಾಮಸ್ತರ ಹಾಗೂ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಇದರ ಉದ್ದೇಶವಾಗಿದೆ.ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ. ತ‍ಲೂಕಾಡಳಿತದ ಸಹಯೋಗದಲ್ಲಿ ವಿವಿದ ತಾಲೂಕ ಮಟ್ಟದ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ,ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡುಬುದು.


ಗ್ರ‍ಾಮಸ್ಥರ  ಕುಂದು ಕೊರತೆಗಳನ್ನು ಆಲಿಸುವುದು ಮತ್ತು ಸಮಸ್ಯೆಗಳ ಕುರಿತು,ನೇರ ಚರ್ಚೆ ಮಾಡಿ ಜನರ ಸಮಸ್ಯೆಗಳನ್ನು  ಪರಿ ಹರಿಸುವುದು.ಸರ್ಕಾರದ ವಿವಿದ ಇಲಾಖೆಗಳ  ಯೋಜನೆಗಳು ಜನರಿಗೆ                          ತಲುಪಿಸುಹುದೇ ಗ್ರಾಮ ವಾಸ್ತವ್ಯದ ಉದ್ದೇಶವಾಗಿದ್ದು,ಗ್ರಾಮಸ್ಥರು ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಸಮಸ್ಯೆಗಳನ್ನು ಮಂಡಿಸಿ ಪರಿಹಾರ ಕಂಡುಕೊಳ್ಳಲು ಈ ವೇದಿಕೆಯಲ್ಲಿ ಸುವರ್ಣವಕಾಶವಾಗಿದೆ.
ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡ‍ಾಳು ಗ್ರಾಮದಲ್ಲಿ ವಿಜಯನಗರ ಜಿಲ್ಲೆಯ  ಜಿಲ್ಲಾಡಳಿತ ಠಕಾಣಿ ಹೂಡಿತ್ತು, ಈ ಸಂದರ್ಭದಲ್ಲಿ ವಿವಿಧ ಇಲಾಖೆ ಜನಪದ ಯೋಜನೆಗಳು ಮತ್ತು ಯೋಜನೆಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
*ಭಾರೀ ಭ್ರಷ್ಟಾಚಾರದ ದುರ್ನಾಥ*-
ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ರವರು ಗ್ರ‍ಾಮದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿದರು,ಈ ಸಂದರ್ಭದಲ್ಲಿ ಗ್ರಾಮದ ಬಹುತೇಕ ನಿರಾಶ್ರಿತರು ವಸತಿಗಾಗಿ ಮನವಿ ಮಾಡಿದರು.
ಅವರು ಜಿಲ್ಲಾಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡರು,ತಾವು ಹತ್ತು ಹಲವು ವರ್ಷಗಳಿಂದ ವಸತಿಗಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.ಕಾರಣ ಕೇಳಿದಾಗ ಗ್ರಾಮ ಪಂಚಾಯ್ತಿಯಲ್ಲಿ ಹಣ ಕೊಡದಿದ್ದರೆ ಏನೂ ಆಗಲ್ಲ,ಮನೆಗಾಗಿ 25-30ಸಾವಿರ₹ಹಣ ಕೊಡಿರೆಂದು ಬೇಡಿಕೆ ಇಡಲ‍ಾಗುತ್ತೆ ತಮ್ಮಿಂದ ಹಣ ಕೊಡಲಾಗುತ್ತಿಲ್ಲ.ಈ ಕಾರಣಕ್ಕೆ ಮನೆ ಕೊಡುತ್ತಿಲ್ಲ ಎಂದು ನೊಂದ ನಿರಾಶ್ರಿತರು ಜಿಲ್ಲಾಧಿಕಾರಿಗೆ ದೂರಿದರು,ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಬಹುತೇಕ ನಿರಾಶ್ರಿತರು ಇದನ್ನೇ ಜಿಲ್ಲಾಧಿಕಾರಿಗಳಲ್ಲಿ ದೂರಿದ್ದಾರೆ.
ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವರ್ಷಕ್ಕೊಮ್ಮೆಯೂ ತಮ್ಮತ್ತ ಬರುವುದಿಲ್ಲ,ಚರಂಡಿಗಳು ತುಂಬಿ ಕೊಳೆತು ನಾರುತ್ತಿರುತ್ತವೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿಲ್ಲ. ಜಿಲ್ಲಾಧಿಕಾರಿ ಬರುವುದಕ್ಕಾಗಿ ಸ್ವಚ್ಚಗೊಳಿಸಿದ್ದಾರೆ ಹೊರತು ನಮ್ಮ ಅಳಲನ್ನು ಯಾರೂ ಆಲಿಸೋದಿಲ್ಲ,ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿ ಸಿಬ್ಬಂದಿ  ಯವರು ಬದುಕಿದ್ದರೂ ಸತ್ತಂತೆ ಎಂದು ನೊಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಸೌಕರ್ಯಗಳು ಕೇವಲ ಪ್ರಭಾವಿಗಳ ಪಾಲಾಗುತ್ತಿವೆ ಪ್ರತಿಯೊಂದಕ್ಕೂ ಹಣ ಕೊಡಬೇಕಿದೆ,ಇಲ್ಲವೇ ರಾಜಕಾರಣಿಗಳ ರೆಕ್ಮೆಂಡು  ಮಾಡಿಸಬೇಕಿದೆ ಸಾಮಾನ್ಯರು ‍ವರ್ಷಗಟ್ಟಲೆ ಅಲೆಯಬೇಕಿದೆ. ದಲಿತರು ಹಾಗೂ ರೈತರು ಕಾರ್ಮಿಕರು ಗ್ರ‍ಾಪಂನಲ್ಲಿ ಸೌಲಭ್ಯ ಹೊಂದುವುದು ಕನಸಿನ ಮಾತಾಗಿದೆ  ಎಂದು ಹಲವು ಗ್ರಾಮಸ್ಥರು ಮೌಕಿಕವಾಗಿ ದೂರಿದರು,
ಒಟ್ಟಾರೆಯಾಗಿ ಜಿಲ್ಲಾಧಿಕಾರಿಗೆ ಭ್ರಷ್ಟಾಚಾರದ ದೂರುಗಳೇ ಅವರ ಗಮನ ಸೆಳೆದವು. ಈ ಮೂಲಕ ಅವರಿಗೆ ಹಾಗೂ ಉಪಸ್ಥಿತರಿದ್ದವರಿಗೆ, ಗ್ರಾಮದೆಲ್ಲೆಡೆಗಳಿಂದ ಭ್ರಷ್ಟಾಚಾರದ ಆರೋಪಗಳ ದುರ್ನಾಥ ಬೀರುತ್ತಿತ್ತು.
ನಿರಾಶ್ರಿತರ ಕೋರಿಕೆ ಮೇರೆಗೆ ಜಿಲ್ಲಾಧಿಕಾರಿಗಳು ಬಹುತೇಕ ವಸತಿ ಹೀನರ ಮನೆಗಳಿಗೆ ಖುದ್ದು ತೆರಳಿದರು, ದುಸ್ಥಿತಿ ಪರಿಶೀಲಿಸಿ ಮನೆ ಮಂಜೂರಾತಿಗೆ ಸ್ಥಳದಲ್ಲಿಯೇ ಸಹಿ ಹಾಕಿದರು.ಕೆಲ ಅಹವಾಲುಗಳಿಗೆ  ಪರಿಶೀಲಿಸಿ ತುರ್ತು ಕ್ರಮಕ್ಕೆ ಸಂಬಂದಿಸಿದ ಅಧಿಕಾರಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಗ್ರಾಮದ ಮೂಲೆ ಮೂಲೆಗೆ ತೆರಳಿ,ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದ ನಂತರ.ಕಾರ್ಯಕ್ರಮದ ವೇದಿಕೆಯ ಆಸನದಲ್ಲಿ ಆಸೀನರಾಗಿ ಸಾರ್ವಜನಿಕರಿಂದ ಆಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹತ್ತಾರು ಗುಡಿಸಲುವಾಸಿಗಳು ನಿರಾಶ್ರಿತ ದೇವದಾಸಿಯರು,ವಿಕಲ ಚೇತನರು ಹಾಗೂ ದಲಿತರು ಬಡ ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.ಹೆಗ್ಡಾಳು ಗ್ರಾಮ ಸೇರಿದಂತೆ ವಿವಿದ ಗ್ರಾಮಗಳಿಂದ ಆಗಮಿಸಿದ್ದ,ಗ್ರಾಮಸ್ಥರು ತಮ್ಮ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲ ಕೃಷ್ಣ,
ಈ ಸಂದರ್ಭದಲ್ಲಿ ಉಪ ಆಯುಕ್ತರು,ಡಿವೈಎಸ್ಪಿ, ತಹಶಿಲ್ದಾರರು,ತಾಪಂ ಕಾರ್ಯ ನಿರ್ವಹಣಾಧಿಕಾರಿ,ತಾಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ಹಿರೇಹೆಗ್ಡಾಳು ಗ್ರಾಪಂ ಸೇರಿದಂತೆ ವಿವಿದ ಹಂತದ  ಜನಪ್ರತಿನಿಧಿಗಳು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿದ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಗ್ರಾಮಸ್ಥರು. ಮಹಿಳೆಯರು,ವಿಕಲಚೇತನರು,ವೃದ್ಧರು ಹಾಗೂ ಕಾರ್ಮಿಕರು ರೈತರು ಭಾಗಿಯಾಗಿದ್ದರು.

 ವಿ.ಜಿ.ವೃಷಭೇಂದ್ರ ಕೂಡ್ಲಿಗಿ

0 Response to "ಹಿರೇಹೆಗ್ಡಾಳು:ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ-ಎಲ್ಲೆಡೆ ಭ್ರಷ್ಟಾಚಾರದ ದುರ್ನಾಥ-kudligi"

Post a Comment

Article Top Ads

Central Ads Article 1

Middle Ads Article 2

Article Bottom Ads