
ಸಾಕ್ಷರತೆಯಿಂದ ಮಾತ್ರ ನಾಗರಿಕತೆ ವಿಕಾಸ ಹೊಂದುತ್ತದೆ-Kudligi
Friday, October 1, 2021
Comment
ಸಾಕ್ಷರತೆಯಿಂದ ಮಾತ್ರ ನಾಗರಿಕತೆ ವಿಕಾಸ ಹೊಂದುತ್ತದೆ-Kudligi
ಕೂಡ್ಲಿಗಿ: ತಾಲೂಕು ಲೋಕ ಶಿಕ್ಷಣ ಸಮಿತಿ, ಕೂಡ್ಲಿಗಿ ವತಿಯಿಂದ "ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ" ಯನ್ನು ತಾಲೂಕು ಪಂಚಾಯಿತಿಯ ಆವರಣದಲ್ಲಿ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕರಾದ ಜಿ ಎಂ ಬಸಣ್ಣನವರು "ಆಧುನಿಕತೆ ಮತ್ತು ತಂತ್ರಜ್ಞಾನವು ಪ್ರಸ್ತುತ ನಾಗರೀಕತೆಯನ್ನು ಪ್ರಭಾವಿಸುತ್ತಿವೆ. ನಾಗರೀಕತೆ ವಿಕಸನ ಹೊಂದಲು ಮತ್ತು ಸಮುದಾಯವು ಅಭಿವೃದ್ಧಿ ಹೊಂದಲು ಸರ್ವರಿಗೂ ಅಕ್ಷರ ಜ್ಞಾನದ ಅವಶ್ಯಕತೆ ಇದ್ದು, ಸಾರ್ವತ್ರಿಕ ಸಾಕ್ಷರತೆ ಮೂಡಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು" ಎಂದು ಕರೆ ನೀಡಿದರು.
"ಸಾಕ್ಷರತೆಯ ಕೊರತೆಯಿಂದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಸಕ್ತಿ ಹೊಂದಿದ್ದಾರೆ. ವಯಸ್ಕರ ಶಿಕ್ಷಣ ಕಾರ್ಯಕ್ರಮದ ಮೂಲಕ ಅಂತಹ ಎಲ್ಲ ಅನಕ್ಷರರಿಗೆ ಶಿಕ್ಷಣ ನೀಡುವುದರಿಂದ, ಭವಿಷ್ಯದಲ್ಲಿ ಯಾವ ಮಗುವೂ ಶಾಲಾ ವ್ಯವಸ್ಥೆಯಿಂದ ದೂರ ಉಳಿಯುವುದಿಲ್ಲ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ತಮ್ಮ ವ್ಯಾಪ್ತಿಯ ಪೋಷಕರಿಗೆ ಸಾಕ್ಷರತೆ ಮೂಡಿಸಲು 'ವಯಸ್ಕರ ಶಿಕ್ಷಣ'ದ ಅನುಷ್ಠಾನಕ್ಕೆ ಕಟಿಬದ್ಧರಾಗಿದ್ದಾರೆ."
-ಶಿವಾನಂದ ಬಿಬಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬಳ್ಳಾರಿ.
"ಕೂಡ್ಲಿಗಿ ತಾಲೂಕು ವ್ಯಾಪ್ತಿಯಲ್ಲಿ ದಶಕದ ಹಿಂದೆ 52% ಇದ್ದ ಮಹಿಳಾ ಸಾಕ್ಷರತೆಯನ್ನು 62% ಗೆ ಹೆಚ್ಚಿಸಲಾಗಿದೆ. ಪ್ರಸ್ತುತ 49,000 ಅನಕ್ಷರಸ್ಥರಿದ್ದು, ಕೋರೋನಾ ಕಾರಣದಿಂದ ವಯಸ್ಕರ ಶಿಕ್ಷಣ ಕುಂಠಿತವಾಗಿತ್ತು. ಈಗ ನವ ಉತ್ಸಾಹದಿಂದ ಈ ವರ್ಷ 6000 ಅಧಿಕ ಅನಕ್ಷರಸ್ಥರಿಗೆ ಸಾಕ್ಷರತೆ ಮೂಡಿಸಲು ಗುರಿ ಹೊಂದಲಾಗಿದೆ", ಎಂದು ಲೋಕ ಶಿಕ್ಷಣ ಸಮಿತಿಯ ತಾಲೂಕು ಸಂಯೋಜಕರಾದ ಕೊಟ್ರೇಶ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷರಾದ ಹನುಮಂತಪ್ಪ ಹೆಚ್.ಜಿ., ಇಂದಿರಾ ಹೆಚ್, ಕಾರ್ಯದರ್ಶಿ ಟಿ.ಹೆಚ್.ಎಂ ಶೇಖರಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಚಿರಬಿ ಮಂಜುನಾಥ, ತಾಲೂಕು ಪಂಚಾಯಿತಿ ಸಿಬ್ಬಂದಿ, ಪಟ್ಟಣ ಪಂಚಾಯತಿ ಸಿಬ್ಬಂದಿ, ವಯಸ್ಕರ ಶಿಕ್ಷಣದ ಪ್ರೇರಕರು, ಸ್ವಯಂಸೆರವಕರು ಉಪಸ್ಥಿತರಿದ್ದರು. ತಾ.ಪಂ.ಯ ಅಧೀಕ್ಷಕರಾದ ಕರಿಬಸಪ್ಪ ಇವರು 'ಸಾಕ್ಷರತಾ ಪ್ರಮಾಣ ವಚನ' ಬೋಧಿಸಿದರು. ಪಾಪಣ್ಣ ನಿರೂಪಿಸಿದರು.
0 Response to "ಸಾಕ್ಷರತೆಯಿಂದ ಮಾತ್ರ ನಾಗರಿಕತೆ ವಿಕಾಸ ಹೊಂದುತ್ತದೆ-Kudligi"
Post a Comment