-->
ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ-Festival

ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ-Festival

ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ

ವಿಜಯನಗರ  ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕಾಚರಣೆಗಳಿಗೆ ಲೆಕ್ಕವಿಲ್ಲ,ಗ್ರಾಮೀಣ ಭಾಗದ ರೈತಾಪಿ ವರ್ಗಕ್ಕೆ ಅಮವಾಸ್ಯೆ ಹುಣ್ಣಿಮೆಗೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿರುತ್ತೆ.ಅಂತೆಯೇ ಸೀಗೆಹುಣ್ಣಿಮೆ ಸಣ್ಣ ಗೌರಿಹಬ್ಬ ಎಂದು ಕರೆಸಿಕೊಳ್ಳುವ ಕಿನ್ನರಿಯರ ಹಬ್ಬವಾಗಿದೆ,ದಸರಾ ಹಬ್ಬದ ನಂತರದಲ್ಲಿಯೇ ಗರಿಗೆದರುವ ಸೀಗೆಹುಣ್ಣಿಮೆ ಅಪ್ಪಟ ಗ್ರಾಮೀಣ ಸೊಗಡಿನ ಕಿನ್ನರಿಯರ ಹಬ್ಬವಾಗಿದೆ.
ಸೀರೆಯನ್ನುಟ್ಟ ಕಿನ್ನರಿಯರು ಹಿರಿಯರ ಹೆಂಗಳೆಯರ ಸೀರೆಯನ್ನುಟ್ಟು, ದೀಪಗಳೊಂದಿಗೆ  ಸಕ್ಕರಾರತಿಯನ್ನು  ಇಟ್ಟುಕೊಂಡು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಗೌರಿ ಮೂರ್ತಿ ಗೆ ಬೆಳಗುವ ಸಾಂಪ್ರದಾಯಿಕ ಹಬ್ಭ ಇದಾಗಿದೆ.ಸೀಗೆ ಹುಣ್ಣಿಮೆಯಂದು ಕೂಡ್ಲಿಗಿ ಪಟ್ಟಣ ಸೇರಿದಂತೆ ಕೂಡ್ಲಿಗಿ ತಾಲೂಕು,ವಿವಿದೆಡೆಯ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ತಮ್ಮ ಹೆತ್ತವುರು ತೊಡಿಸಿದ ಸೀರೆಯನ್ನುಟ್ಟು ಗೌರಿಯನ್ನಾರಾಧಿಸಿ ಸಂಭ್ರಮಿಸಿದರು.ಸೀಗೆ ಹುಣ್ಣಿಮೆ ಹಲವೆಡೆಗಳಲ್ಲಿ ಸೀಗೆ ಹುಣ್ಣಿಮೆ ಎಂದರೆ ಮತ್ತಿತರೆ ಕಡೆಗಳಲ್ಲಿ ಸಣ್ಣಗೌರಿಹಬ್ಬ ಎಂದೇ ಪ್ರತೀತಿ ಇದೆ.

 ವಿ.ಜಿ.ವೃಷಭೇಂದ್ರ 

0 Response to "ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ-Festival"

Post a Comment

Article Top Ads

Central Ads Article 1

Middle Ads Article 2

Article Bottom Ads