-->
ರೈತರ ಗೋಳು ಕೇಳೋರು ಯಾರು..?? ಮುಖ್ಯಮಂತ್ರಿ ಗೆ ಕಿಸಾನ್ ಜಾಗೃತಿ ವಿಕಾಸ್ ಸಂಘ ಮನವಿ-Bellary

ರೈತರ ಗೋಳು ಕೇಳೋರು ಯಾರು..?? ಮುಖ್ಯಮಂತ್ರಿ ಗೆ ಕಿಸಾನ್ ಜಾಗೃತಿ ವಿಕಾಸ್ ಸಂಘ ಮನವಿ-Bellary

ರೈತರಿಗೆ ಮತ್ತು ಸಾರ್ವಜನಿಕರಿಗೆ ಆಗುವ ಅನ್ಯಾಯದ ಬಗ್ಗೆ ಸದನದಲ್ಲಿ ವಿಷಯಕ್ಕೆ
ಸಂಬಂಧಪಟ್ಟ ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳಿಗೆ ಕಿಸಾನ್ ಜಾಗೃತಿ ವಿಕಾಸ್ ಸಂಘ ಮನವಿ

ಬಳ್ಳಾರಿ:
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ ಎದ್ದು ಹೊಲ ಹೋಗುತಿದ್ದರೆ ನಮ್ಮ ರೈತರ
ಅಳಲನ್ನು ಯಾರ ಹತ್ತಿರ ತೋಡಿಕೊಳ್ಳಬೇಕು ಮಾನ್ಯ ಮುಖ್ಯಮಂತ್ರಿಗಳೆ ಇತ್ತಿನ ದಿವಸ ನಮ್ಮ ರೈತಾಪಿ ವರ್ಗದವರ ಜೀವನ ಮುಂದೆ ಸಾಹಿಸಲು ಕಷ್ಟವಾಗಿದೆ.ಮಾನ್ಯ ಮುಖ್ಯಮಂತ್ರಿಗಳ ಸದನದಲ್ಲಿ ವಿಷಯಕ್ಕೆ ಸಂಬಂಧಪಟ್ಟ ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
1) ಗೋಶಾಲೆಗಳ ಮೇವಿನ ಹಗರಣ 2012-13 ರಿಂದ ಇಲ್ಲಿಯ ವರೆಗೆ ಬಹುಕೋಟಿ ಹಗರಣ ನಡೆದಿದೆ
ಗೋವನ್ನು ದೇವರಂತೆ ನೋಡುತ್ತೇವೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶ್ಯಾಮೀಲಾಗಿ ಆದೇವರಿಗೆ
ಮೇವಿನಲ್ಲಿ ಕಲ್ಲು, ಉಸುಗು, ಮಣ್ಣು ನೀರುಹಾಕಿ ವೇಬ್ರಿಜ್ ಕಾಟಮಾಡಿ 1 ಟ್ರಿಪ್ ಗೆ 2ಟ್ರಿಪ್ ಬಿಲ್ ಹಾಕಿ
ಹಣವನ್ನು ಲೂಟಿಮಾಡಿರುತ್ತಾರೆ, ಈ ಹಗರಣ ಸಿಬಿಐ ಯಿಂದ ತನಿಖೆಮಾಡಿಸಿ ಅಂತಹ ಅಧಿಕಾರಿಗಳ
ಮತ್ತು ಗುತ್ತಿಗೆದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ. ಈ ಉದಾಹರಣೆ ಬಿಹಾರದ ಮಾಜಿ ಮುಖ್ಯಮಂತ್ರಿಗಳು ಇದುವರೆಗೆ ಮೇವಿನ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
2) ತುಂಗಭದ್ರಾ ನದಿಯ ಎಡದಂಡೆ ಮತ್ತು ಬಲದಂಡೆ ಹಾಗೂ ವಿಜಯನಗರ ಕಾಲುವೆ ಈಗಾಗಲೇ
ಕಾಮಗಾರಿ ನಡೆದಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶ್ಯಾಮೀಲಾಗಿ ಅಕ್ರಮವಾಗಿ ಅಂಡರ್ ಗ್ರೌಂಡ್ ಪೈಪ್ ಲೈನ್ ಕೊಟ್ಟು ಆಯಕಟ್ಟಿನ ರೈತರಿಗೆ ನೀರು ಇಲ್ಲದೇ ಹೊಲಗದ್ದೆಗಳು ಒಣಗುತ್ತಿವೆ.
3) ರಾಸಾಯನಿಕ ಔಷಧಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ನಕಲಿ ಬರುತ್ತಿದ್ದು, ಇದಕ್ಕೆ ಸಂಬಂಧಪಟ್ಟ
ಮಂತ್ರಿಗಳಿಗೂ ಮತ್ತು ಅಧಿಕಾರಿಗಳಿಗೂ ಗಮನಕ್ಕಿದ್ದು ಅವ್ಯವಹಾರ ನಡೆಯುತ್ತಾ ಇದ್ದರು ಅಂತವರ ಮೇಲೆ
ಕ್ರಮ ಕೈಗೊಳ್ಳದೆ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. 26-11-2019 ರಲ್ಲಿ ಪ್ರಧಾನ ಮಂತ್ರಿಗಳಿಗೂ ಮತ್ತು
ಕರ್ನಾಟಕ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿರುತ್ತೇನೆ, ಆದರೆ ಪ್ರಧಾನ ಮಂತ್ರಿಗಳು ಉತ್ತರ ಕೊಟ್ಟಿರುತ್ತಾರೆ
ಮತ್ತು ಕೆರಳ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿರುತ್ತಾರೆ, ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪ್ರತ್ಯುತ್ತರ ನೀಡದೇ ಬೇಜವಾಬ್ದಾರಿತನ ತೋರಿರುತ್ತಾರೆ.
4) 2016-17 ರಿಂದ ಕರ್ನಾಟಕದಲ್ಲಿ ರೈತರ ಹುಲ್ಲಿನ ಬಣವೆ ಮತ್ತು ಬಡವರ ಗುಡಿಸಲು ಸುಟ್ಟವರಿಗೆ ಪರಿಹಾರ ಕೊಡಲು ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಲ್ಲಿ ಹಣವೇ ಇಲ್ಲ ಎಂದು ಬೇಜಾವಬ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನೊಂದ ಫಲಾನುಭವಿಗಳಿಗೆ ಆದಷ್ಟು ಬೇಗ ಹಣವನ್ನು ವರ್ಗಾಹಿಸಬೇಕು.
5) ನಮ್ಮ ರೈತರು ಜೋಳ, ಬತ್ತ, ರಾಗಿ, ಹೆಸರು, ಉದ್ದುಗಳನ್ನು ಸರ್ಕಾರಿ ಖರೀದಿ ಕೇಂದ್ರಗಳಲ್ಲಿ
ಖರೀದಿಸುತ್ತಾರೆ ಆದರೂ 4-5 ತಿಂಗಳಾರೂ ರೈತರಿಗೆ ಹಣ ಕೊಡದೇ ಸತಾಯಿಸುತ್ತಿದ್ದಾರೆ ಅಲ್ಪ ಸ್ವಲ್ಪ
ಹಣವನ್ನು ಬಿಡುಗಡೆ ಮಾಡಿರುತ್ತಾರೆ ಇನ್ನು ಉಳಿದ ಹಣವನ್ನು ಬಿಡುಗಡೆ ಮಾಬೇಕೆಂದು ಆಗ್ರಹಿಸುತ್ತಿದ್ದೇವೆ.
6) ನಮ್ಮ ರೈತರು ಬೆಳೆದ ಬೆಳೆಯನ್ನು ವ್ಯಾಪಾರಸ್ಥರು ಖರೀದಿ ಮಾಡಿ 1-2 ಲೋಡ್ ಗಳಿಗೆ ಮುಂಗಡ
ಹಣವನ್ನು ಕೊಡುತ್ತಾರೆನಂತರ 30 ರಿಂದ 40 ಲೋಡ್ ತೆಗೆದುಕೊಂಡು ಹೋಗಿ ಅವರು ಮಾರಿಕೊಂಡು
ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿಕೊಂಡು ಬೆಳೆ ಕೊಟ್ಟ ರೈತರಿಗೆ ಐ.ಪಿ ಇಟ್ಟು ಹಣ ಕೇಳಲು ಹೋದಾಗ
ಪೋಲಿಸರಿಂದ ಮತ್ತು ರೌಡಿಗಳಿಂದ ಧಮ್ಮಿ ಹಾಕಿಸುತ್ತಾರೆ ಇದೇ ಸರ್ಕಾರಿ ಬ್ಯಾಂಕಿನಲ್ಲಿ ರೈತರು ಮಾಡಿದ ಸಾಲ ಕಟ್ಟದಿದ್ದರೆ ಇದೇ ಸರ್ಕಾರ ಬ್ಯಾಂಕಿನ ಜೊತೆ ಪೋಲಿಸರನ್ನು ಆಸ್ತಿಯನ್ನು ಮುಟ್ಟುಗೋಲು
ಹಾಕಿಕೊಳ್ಳಲು ಮುಂದಾಗುತ್ತಾರೆ, ಇಂತಹ ಘಟನೆಗಳು ನಡೆದಾಗ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು
ಮುಂದೆ ನಿಂತು ರೈತರಿಗೆ ಅನ್ಯಾಯ ಮಾಡಿದ ವ್ಯಾಪಾರಸ್ಥನ ಮೇಲೆ ಕಠಿಣ ಕ್ರಮ ಕೈಗೊಂಡು ನ್ಯಾಯ
ಒದಗಿಸಬೇಕು.
7) ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ಒಂದು ಆಫೀಸ್ ಕಟ್ಟಿಕೊಳ್ಳಲು ಜಾಗ ನೀಡದೇ ಜಾಗ ಇಲ್ಲ ಎಂದು
ಹೇಳುತ್ತಾರೆ, 2 ರಿಂದ 3 ಎಕರೆ ಕೃಷಿ ಮಾರುಕಟ್ಟೆ ಜಾಗವನ್ನು ಪೆಟ್ರೋಲ್ ಪಂಪ್ ಗೆ ಕೋಟಿಗಟ್ಟಲೆ ಹಣ
ತೆಗೆದುಕೊಂಡು ಮಾರಿರುತ್ತಾರೆ ಈ ಉದಾಹರಣೆ ಗಂಗಾವತಿ ಕೃಷಿ ಮಾರುಕಟ್ಟೆಯಲ್ಲಿ ನೆಡದಿದೆ ಅಂತಹ
ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
8) ಕುಡಿಯುವ ನೀರಿಗಾಗಿ ಸರ್ಕಾರ ಕೆರೆಗಳನ್ನು ನಿರ್ಮಿಸಲು ಸಾರ್ವಜನಿಕ ತೆರಿಗೆ ಹಣವನ್ನು ನೂರಾರು
ಕೋಟಿ ವೆಚ್ಚ ಮಾಡಿರುತ್ತೆ ಆದರೆ ಅಧಿಕಾರಿಗಳು ಮತ್ತು ಅದಕ್ಕೆ ಸಂಬಂದ ಪಟ್ಟ ಮುಖ್ಯ ಇಂಜಿನಿಯರ್
ಮತ್ತು ಗುತ್ತಿಗೆದಾರ ಶ್ಯಾಮೀಲಾಗಿ ಕೆರೆಗಳನ್ನು ನಿರ್ಮಾಣ ಮಾಡಿ 10 ರಿಂದ 12 ವರ್ಷಗಳಾದರೂ ಕೆಲವು ಕೆರೆಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನು ಕೆಲವು ಕೆರೆಗಳು ಒಂದು ಹನಿ ಕುಡಿಯಲು ನೀರು ಕೊಡದೇ ದುರುಪಯೋಗವಾಗಿ ಬಿದ್ದಿವೆ ಇದಕ್ಕೆ ಉದಾ: ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಚೌಕ್ ನ ಕೆರೆ ಮತ್ತು
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪೂರ ಹೋಬಳಿಯ ಜಮಾಪುರ ಮಟ್ಟಿಕೆರೆ ಇಂತಹ ಕೆರೆಗಳು
ಉತ್ತರ ಕರ್ನಾಟಕದಲ್ಲಿ ಬಹಳಷ್ಟಿವೆ ಅಂತಹ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಂಡು ಆ ಹಣವನ್ನು ವಾಪಾಸು ಪಡೆಯಬೇಕು.
9) ನವಲಿ ರೈಸ್ ಪಾರ್ಕ್ ಕಟ್ಟಲು 120 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರ ಅನುದಾನ
ಬಿಡುಗಡೆ ಮಾಡಿದೆ ಅದರಲ್ಲಿ ಈಗಾಗಲೇ ಕಾಮಗಾರಿ ನಡೆಯುತ್ತಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರು
ಶ್ಯಾಮೀಲಾಗಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
10) ತುಂಗಾಭದ್ರಾ ಜಲಾಶಯದ ಹಣವನ್ನು 2 ಬಾರಿ ದುರುಪಯೋಗ ಮಾಡಿರುತ್ತಾರೆ ಆದಕಾರಣ
ಕಿರಣಕಾರಣ ನವಲಿ ಹತ್ತಿರ ಸಮಾನಂತರ ಜಲಾಶಯ
ನಿರ್ಮಿಸಲು ಡಿ.ಪಿ ಮಾಡಲು
ಅಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಸದನದಲ್ಲಿ ಸಮಾನಂತರ ಜಲಾಶಯ ನಿರ್ಮಿಸಲು
ಸದನದಲ್ಲಿ ಬಿಲ್ ಪಾಸು ಮಾಡಬೇಕೆಂದು ತಮ್ಮಲ್ಲಿ ವಿನಂತಿ.
11) ನಮ್ಮ ರೈತರು ಹೊಲಗದ್ದೆಗಳಿಗೆ ಹೋಗುವ ರೈತರಿಗೆ ಪೋಲಿಸರು ಗಾಡಿ ನಿಲ್ಲಿಸಿ ದಾಖಲಾತಿಗಳನ್ನು ಕೇಳಿ
ಕಿರುಕುಳ ನೀಡುತ್ತಿದ್ದಾರೆ ಆದಕಾರಣ ದಯಾಳುಗಳಾದ ಸನ್ಮಾನ್ಯ ಮೂಖ್ಯಮಂತ್ರಿಗಳು ನಮ್ಮ ರೈತರ ಕಟಾವ್
ಯಂತ್ರಗಳಿಗೆ, ಟ್ರ್ಯಾಕ್ಟರಗಳಿಗೆ, ದ್ವಿಚಕ್ರ ವಾಹನಗಳಿಗೆ ಸಾರಿಗೆ ಅಧಿಕಾರಿಗಳು ಮತ್ತು ಪೋಲಿಸರು ಹಗಲು
ದರೋಡೆಯನ್ನು ನಿಲ್ಲಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
12) ರೈತರು ಬೆಳೆದ ಎಲ್ಲಾ ಬೆಳೆಗಳಿಗೆ 10 ರಿಂದ 15 ವರ್ಷಗಳವರೆಗೆ ಒಂದೇ ಬೆಲೆ ಇದೆ ಆದರು ನಾವು ಕೊಳ್ಳ
ಬೇಕಾದಾಗ 1 ರಿಂದ 3 ಪಟ್ಟು ಹೆಚ್ಚಾಗಿದೆ ಆದಕಾರಣ ಇದಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದುಪ್ಪಟ್ಟು
ಆಗಿರುವುದರಿಂದ ಸಾಮಾನ್ಯ ಜನರ ಮತ್ತು ರೈತರು ಬದುಕಲು ಕಷ್ಟವಾಗಿದೆ ನಮ್ಮ ರೈತರಬೆಳೆದ ಬೆಳೆಗಳಿಗೆ
ಪೆಟ್ರೋಲ್ ಮತ್ತು ಡೀಸೆಲ್ ದಿನೇ ದಿನೇ ಹೇಗೆ ದುಪ್ಪಟ್ಟಾಗುತ್ತಿದೆಯೋ ಅದೇ ರೀತಿ ರೈತರು ಬೆಳೆದ
ಬೆಳೆಗಳನ್ನು ಕೂಡ ಅದೇ ರೀತಿ ದುಪ್ಪಟ್ಟು ಬೆಲೆ ಏರಿಕೆ ಮಾಡಬೇಕೆಂದು ತಮ್ಮಲ್ಲಿ ಆಗ್ರಹಿಸುತ್ತಿದ್ದೇವೆ.
13) ನಮ್ಮ ರೈತರು ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿಯಲ್ಲಿ ಹುಳುಮೆ ಮಾಡವ ರೈತರಿಗೆ ಹಕ್ಕು ಪತ್ರ
ನೀಡಬೇಕು ಮತ್ತು ಅಕ್ರಮ ಸಕ್ರಮದಡಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿರುವ ಬಡವರಿಗೆ ಹಕ್ಕು ಪತ್ರ
ನೀಡಬೇಕೆಂದು ಆಗ್ರಹಿಸುತ್ತಿದ್ದೆವೆ ಏಕೆಂದರೆ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿರುತ್ತದೆ ಆದಷ್ಟು ಬೇಗ
ಜಾರಿಗೊಳಿಸಿ.
14) ಇನ್ನು ಒಂದು ತಿಂಗಳಲ್ಲಿ ನಮ್ಮ ರೈತರ ಭತ್ತ ಕಟಾವಿಗೆ ಬರುತ್ತದೆ ಅದಕ್ಕು ಮುಂಚೆನೆ ಸರ್ಕಾರ
ನಿಗದಿಪಡಿಸಿದ ದರಕ್ಕೆ ಭತ್ತ ಖರೀದಿ ಕೇಂದ್ರಗಳನ್ನು ಮುಂಚಿತವಾಗಿ ತೆಗೆಯಬೇಕು.
15) ನಮ್ಮ ಸರ್ಕಾರ ಬೇರೆ ರಾಜ್ಯಗಳಿಂದ ಹೆಚ್ಚಿನ ದರಕ್ಕೆ ಅಕ್ಕಿ ಖರೀದಿ ಮಾಡಿ ನ್ಯಾಯ ಬೆಲೆ ಅಂಗಡಿಯಲ್ಲಿ ಕೊಡುತ್ತಾ ಇದ್ದಾರೆ ಇವು ಬಿ.ಪಿ.ಲ್ ಕಾರ್ಡದಾರರು ಈ ಅಕ್ಕಿಯನ್ನು ತಿನ್ನುತ್ತಾ ಇಲ್ಲ ಸರ್ಕಾರ 30 ರಿಂದ 40 ರೂಪಾಯಿ ಖರ್ಚು ಮಾಡಿ ಕೊಡುತ್ತಾ ಇದ್ದಾರೆ, ಅಕ್ಕಿ ಮಾಫಿಯಾದವರು 10ರೂ ಗೆ ಅಕ್ಕಿ ಖರೀದಿ ಮಾಡಿ ರೀ ಮಿಲ್ಲಿಂಗ್ ಮಾಡಿ 40ರೂ ನಂತೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ, ಮಾನ್ಯ
ಮುಖ್ಯಮಂತ್ರಿಗಳೆ ನಮ್ಮ ರಾಜ್ಯದಲ್ಲಿ ಬೆಳೆದ ಭತ್ತವನ್ನು ಸರ್ಕಾರ ಖರೀದಿ ಕೇಂದ್ರಗಳಿಂದ ಖರೀದಿ ಮಾಡಿ
ನೀವು ನಿಗದಿಪಡಿಸಿದ ದರದಲ್ಲಿ ಸೋನಾ ಮಸೂರಿ ಅಕ್ಕಿಯನ್ನು ಅನ್ನ ಭಾಗ್ಯ ರೂಪದಲ್ಲಿ ಕೊಡಬೇಕು.
16) ಈ ಮೇಲ್ಕಾಣಿಸಿದ ವಿಷಯ ಅಂಶಗಳನ್ನು ಹತೋಟಿಗೆ ತರದಿದ್ದರೆ ಸ್ಥಳಿಯ ಬರುವ ಚುನಾವಣೆಗಳಲ್ಲಿ ನಿಮ್ಮ ಸರ್ಕಾಕ್ಕೆ ತಕ್ಕ ಪಾಠ ಹೇಳಲು ರೈತರು ಮತ್ತು ರೈತ ಕಾರ್ಮಿಕರು ಸಿದ್ದಾವಾಗಿದ್ದಾರೆ, ಉದಾರಣೆ: ಮಸ್ಕಿ ಬೈ ಎಲೆಕ್ಷನ್.

17) ಕರ್ನಾಟಕ
ಸಕ್ಕರೆ ಕಾರ್ಖಾನೆ ಮಾಲೀಕರು ಆಡಳಿತ ಪಕ್ಷದ ಶಾಸಕರು ಆಗಿರಬಹುದು
ಸಚಿವಾರಾಗಿರಬಹುದು ಮತ್ತು ವೀರೋದ ಪಕ್ಷದ ಶಾಸಕರಾಗಿರ ಬಹುದು ರೈತರ ಕಬ್ಬಿನ ಬಾಕಿ ಹಣವನ್ನು
ಬಹಳಷ್ಟು ಉಳಿಸಿ ಕೊಡಿರುತ್ತಾರೆ ಮಾನ್ಯ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ರೈತ ಬಾಕಿ ಹಣವನ್ನು
ಕೂಡಲೇ ಬಿಡುಗಡೆ ಮಾಡಿಸಬೇಕು.
18) ಇತಿಹಾಸ ಉಳ್ಳ ಹೊಳೆ ಅಥವಾ ಹಳ್ಳ ಅಲ್ಲಿ ಮರಳು ಮಾಫಿಯಾದವರು ಬಿಡ್ಡ ಹತ್ತಿರ ಮರಳನ್ನು ಸಾಗಾಟ
ಮಾಡುತ್ತಿರುತ್ತಾರೆ ಅದಕ್ಕೆ ಹೋಲಿಸರು ಅಧಿಕಾರಿಗಳು ಮರಳು ಮಾಫಿಯಾದವರ ಹತ್ತಿರ ಹಣ ಪಡೆದು
ಕ್ಯಾರೆ ಅನ್ನದೆ ಇರುತ್ತಾರೆ ನಮ್ಮ ಇತಿಹಾಸ ಬಿಡ್ಡಗಳ ಇದ್ದರೆ ನಮ್ಮ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಟ್ಟ
ಬೇಕಾಗುತ್ತದೆ ಆದರೆ ವಿಶ್ವೇಶ್ವರಯ್ಯ ಕಟ್ಟಿದ ಬ್ರಿಡ್ಡ ಉಳಿಸಬೇಕಾದರೆ ಬಿಡ್ಡನಿಂದ ಎಡ ಮತ್ತು ಬಲ ಭಾಗದಲ್ಲಿ
750ಮೀ ವ್ಯಾಪ್ತಿಯಲ್ಲಿ ಯಾವುದೆ ಮರಳುಗಾರಿಕೆ ಮಾಡಬಾರದು ಇದರಿಂದ ನಮ್ಮ ಇತಿಹಾಸ ಬಿಡ್ಡಗಳು
ಉಳಿಯುದಿಲ್ಲ ಇದಕ್ಕೆ ಉದಾ:-ಕಂಪ್ಲಿ ಮತ್ತು ಗಂಗಾವತಿ ಸೇತುವೆ.
ಸರ್ಕಾರಕ್ಕೆ ದುಡ್ಡು ಕಡಿಮೆ ಬಿದ್ದರೆ ಆರ್,ಬಿ, ನಲ್ಲಿ ಪ್ರಿಂಟ್ ಮಾಡಬಹುದು ಆದರೆ ನಮ್ಮ ರೈತ ಬೆಳೆದ
ಬೆಳೆಯನ್ನ ಯಾವ ಕಾರ್ಖಾನೆಗಳಲ್ಲಿ ಪ್ರಿಂಟ್ ಝರಾಕ್ಸ ಮಾಡಲು ಬರುವುದಿಲ್ಲ ನಮ್ಮ ರೈತರ ಪರವಾಗಿ ಒಂದು ದಿನ ಭಾರತ ಬಂದು ಮಾಡಿದರೆ ಎಲ್ಲಾ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅದಕ್ಕೆ ಏನೇನು ಕಥೆ ಕಟ್ಟಿ ಮಾತನಾಡುತ್ತಾರೆ ಮಾನ್ಯ ಮುಖ್ಯಮಂತ್ರಿಗಳೆ ನೀವು ಒಂದುವರೆ ವರ್ಷ ಮನೆಯಲ್ಲಿ ಕುಳಿತ್ತಿದ್ದರೆ ನಮ್ಮ ರೈತರು ಯಾವುದೇ ರಜೆ ಪಡೆಯದೇ ನಮ್ಮ ಹೊಲಗಳಲ್ಲಿ ಬೆಳೆಗಳನ್ನು ಬೆಳೆದು ರಾಜ್ಯಕ್ಕೆ ಕಳಿಹಿಸಿಕೊಟ್ಟಿರುತ್ತಾರೆ ಆದರೆ ನಿಮ್ಮ ಸರ್ಕಾರ ರೈತರನ್ನು ಕಡೆಗಣಿಸುತ್ತಾ ಇದೆ ಎಂದು ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಯುಗೇಂಧರ್ ಪಿ.ನಾಯ್ಡು ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಇಂದು ವಿಜಯನಗರ ಜಿಲ್ಲೆಯಲ್ಲಿ ಮನವಿ ನೀಡಿ,ರೈತರಿಗೆ ನೆರವು ನೀಡುವಂತೆ ಒತ್ತಾಯಿಸಿದರು.

0 Response to "ರೈತರ ಗೋಳು ಕೇಳೋರು ಯಾರು..?? ಮುಖ್ಯಮಂತ್ರಿ ಗೆ ಕಿಸಾನ್ ಜಾಗೃತಿ ವಿಕಾಸ್ ಸಂಘ ಮನವಿ-Bellary"

Post a Comment

Article Top Ads

Central Ads Article 1

Middle Ads Article 2

Article Bottom Ads