-->
ಡಿ2-3ರ ಕಟ್ಟಡ ಕಾರ್ಮಿಕರ "ರಾಷ್ಟ್ರೀಯ ಮುಷ್ಕರ" ಯಶಸ್ವಿಗೊಳಿಸಲು ಕರೆ-Vijayanagara

ಡಿ2-3ರ ಕಟ್ಟಡ ಕಾರ್ಮಿಕರ "ರಾಷ್ಟ್ರೀಯ ಮುಷ್ಕರ" ಯಶಸ್ವಿಗೊಳಿಸಲು ಕರೆ-Vijayanagara

ಡಿ2-3ರ ಕಟ್ಟಡ ಕಾರ್ಮಿಕರ "ರಾಷ್ಟ್ರೀಯ ಮುಷ್ಕರ" ಯಶಸ್ವಿಗೊಳಿಸಲು ಕರೆ

ವಿಜಯನಗರ ಜಿಲ್ಲೆ,ಕಟ್ಟಡ ಕಾರ್ಮಿಕರಿಂದ ಡಿ 2-3ರಂದು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರವನ್ನು ಕಾರ್ಮಿಕರು ಯಶಸ್ವಿ ಗೊಳಿಸಬೇಕೆಂದು.ಕರ್ನಾಟಕ ರಾಜ್ಯ ಕಟ್ಟಡ ‌ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು), ‌ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ"ಕೆ.ಮಹಾಂತೇಶ ಕಾರ್ಮಿಕರಿಗೆ ಕರೆ ನೀಡಿದರು.
 1996ರ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳೆರಡನ್ನು
 ನೂತನ‌‌ ಕಾರ್ಮಿಕ‌ ಸಂಹಿತೆ ವ್ಯಾಪ್ತಿಯಿಂದ ಹೊರಗಿಡಬೇಕು, ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆಗಳ‌ ಮೇಲಿನ ಸರಕು ಸೇವಾ ತೆರಿಗೆಯನ್ನು ಕಡಿತಗೊಳಿಸಬೇಕು,ಕಟ್ಟಡ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಅನುದಾನ ನೀಡಬೇಕು. ನಿರ್ಮಾಣ ವಲಯದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಡಿಸೆಂಬರ್ 2 ಹಾಗೂ 3 ರಂದು ಎರಡು ದಿನಗಳ ಕಟ್ಟಡ ಕಾರ್ಮಿಕರ ರಾಷ್ಟ್ರೀಯ ಮುಷ್ಕರ ನಡೆಸಲು ಕರೆ ನೀಡಲಾಗಿದೆ ಎಂದರು.
ಅವರು ಅ11ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ಸರ್ಕಾರಿ ನೌಕರರ ಸಭಾಂಗಣದಲ್ಲಿ, ಸಿಐಟಿಯು ಹಾಗೂ ಸಿಡಬ್ಲೂಎಫ್ ಐ ಸಂಘಟನೆಯಿಂದ  ಆಯೋಜಿಸಲಾಗಿದ್ದ.
 ಕಟ್ಟಡ ನಿರ್ಮಾಣ ವಲಯದ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ‌ ಪಾಲ್ಗೊಂಡು ಮಾತನಾಡಿದರು, ದೇಶದಲ್ಲಿ ಪ್ರಸ್ತುತ 10ಕೋಟಿಗಿಂತ ಅಧಿಕ ಕಾರ್ಮಿಕರು  ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರಿಗೆ ಸಾಮಾಜಿಕ ಭದ್ರತೆ ನೀಡುವ‌ ಸಲುವಾಗಿಯೇ 1996 ರಲ್ಲಿ ಎರಡು‌ ಕಾನೂನು ರಚನೆಯಾಗಿವೆ,ಅದರಡಿ ಮೂವತ್ತು ರಾಜ್ಯಗಳಲ್ಲಿ ಕಲ್ಯಾಣ ಮಂಡಳಿ ರಚನೆಯಾಗಿವೆ.ಸುಮಾರು 70 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾಗಿದ್ದು,ಹತ್ತಾರು ಸೌಲಭ್ಯಗಳನ್ನು ಕಾರ್ಮಿಕರು ಪಡೆಯುತ್ತಿದ್ದಾರೆ.ನಾನಾ ಕಾರಣದಿಂದಾಗಿ ಇನ್ನೂ ಕೋಟ್ಯಾಂತರ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದ ವಂಚಿತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಈ ಎರಡು ಕಾನೂನುಗಳನ್ನು ಪರಿಣಾಮವಾಗಿ ಜಾರಿಗೊಳಿಸಬೇಕಿದೆ, 
ಬದಲಾಗಿ ಸರ್ಕಾರ ಅವುಗಳನ್ನು ಹೊಸ ಸಂಹಿತೆಗಳಲ್ಲಿ ವಿಲೀನಗೊಳಿಸಿದೆ. ಇದರಿಂದ ಸೆಸ್‌ ಸಂಗ್ರಹ  ಕಲ್ಯಾಣ ಮಂಡಳಿ ಕೆಲಸಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ,ಈಗಾಗಲೇ ನಿರ್ಮಾಣ ವಲಯ ನೋಟು ಅಮಾನ್ಯೀಕರಣ,ಜಿ.ಎಸ್.ಟಿ ಹಾಗೂ ಕರೋನಾ ಬಿಕ್ಕಟ್ಟುಗಳಿಂದ ತತ್ತರಿಸಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಇದ್ದ ಅಲ್ಪ ಸ್ವಲ್ಪ ಸಾಮಾಜಿಕ ಭದ್ರತೆಗಳನ್ನು ಬಲಪಡಿಸಬೇಕಿತ್ತು, ಅದನ್ನು ಬಿಟ್ಟು ನಾಶಪಡಿಸಲು ಹೊರಟಿರಿವುದು ಆತಂಕ ಕಾರಿಯಾಗಿದೆ.ಇದು ಕಾರ್ಮಿಕ ವರ್ಗಕ್ಕೆ ಮಾರಕವಾಗಿದ್ದು,ಸರ್ಕಾರದ ಈ ನಿಲುವಿನ ವಿರುದ್ದ ಇಡೀ ದೇಶದಲ್ಲಿ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಂದ ಪ್ರತಿಭಟಿಸಲಾಗುವುದು ಎಂದರು. ಡಿ2-3ರಂದು ಎರಡು ದಿನಗಳ ದೇಶವ್ಯಾಪಿ ಮುಷ್ಕರ ನಡೆಸಲಿದ್ದು, ಇದನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ಸಿದ್ದತೆಗಳು ನಡೆಯುತ್ತಿವೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ  ಬಳ್ಳಾರಿ ಜಿಲ್ಲಾ ಫೆಡರೇಶನ್ ಅಧ್ಯಕ್ಷರಾದ ಯಲ್ಲಾಲಿಂಗ,ಹೊಸಪೇಟೆ ತಾಲೂಕು ಅಧ್ಯಕ್ಷರಾದ ಗೋಪಾಲ್ ಕಾರ್ಯದರ್ಶಿ ರಾಮಾಂಜಿನಿ. ಕೂಡ್ಲಿಗಿ ತಾಲೂಕು ಕಾರ್ಯದರ್ಶಿ ರಾಘವೇಂದ್ರ, ಕಂಪ್ಲಿ ತಾಲೂಕು ಅಧ್ಯಕ್ಷರಾದ ನಾಗರಾಜ್,‌ ಕಾರ್ಯದರ್ಶಿ ಹೊನ್ನೂರು ಸಾಬ್,ರಾಜಾಭಕ್ಷೀ,ಸಂಡೂರು ತಾಲೂಕಿನ ಸಿದ್ದಪ್ಪ ಮತ್ತು ಬಾಬಯ್ಯ ಸೇರಿದಂತೆ.ಕಾರ್ಮಿಕರ ಪ್ರಮುಖ ಮುಖಂಡರು ಹಾಗೂ ಕಾರ್ಮಿಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ

0 Response to "ಡಿ2-3ರ ಕಟ್ಟಡ ಕಾರ್ಮಿಕರ "ರಾಷ್ಟ್ರೀಯ ಮುಷ್ಕರ" ಯಶಸ್ವಿಗೊಳಿಸಲು ಕರೆ-Vijayanagara"

Post a Comment

Article Top Ads

Central Ads Article 1

Middle Ads Article 2

Article Bottom Ads