-->
ಗಡ್ಡದ ಬೋರಯ್ಯನಹಟ್ಟಿ: ಯೋಗ್ಯರನ್ನು ಆಯ್ಕೆ ಮಾಡಿ: ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ-Vijayanagara

ಗಡ್ಡದ ಬೋರಯ್ಯನಹಟ್ಟಿ: ಯೋಗ್ಯರನ್ನು ಆಯ್ಕೆ ಮಾಡಿ: ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ-Vijayanagara

*ಗಡ್ಡದ ಬೋರಯ್ಯನಹಟ್ಟಿ: ಯೋಗ್ಯರನ್ನು ಆಯ್ಕೆ ಮಾಡಿ, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಯೋಗ್ಯರನ್ನು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ ಎಂದು ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ ಕರೆ ನೀಡಿದರು.ಅವರು ಗಡ್ಡದ ಬೋರಯ್ಯನಹಟ್ಟಿ ಗ್ರಾಮದಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು,ಅಯ್ಯೋಗ್ಯ ಲೂಟಿಕೋರ ದರೋಡೆಕೋರ, ಅಕ್ರಮಕೋರರನ್ನು  ಅಯ್ಕೆಮಾಡಿ ಪಶ್ಚಾತಾಪ ಪಡಬಾರದು ಎಂದರು.ಚುನಾವಣೆಯ ಸಂದರ್ಭದಲ್ಲಿ ಹಣ ಆಮಿಶಕ್ಕೊಳಗಾಗಬಾರದು,ಮುಂದಾಲೋಚನೆ ವಿವೇಚನೆ ಮತ್ತು ವ್ಯಕ್ತಿಯ ವ್ಯಕ್ತಿತ್ವಕ್ಕೆ ಆಧ್ಯತೆ ನೀಡಿ ವಿಚಾರಣೆ ಮಾಡಿ ಆಯ್ಕೆ ಮಾಡಬೇಕೆಂದರು.ಕಾರ್ಮಿಕ ಮುಖಂಡ  ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ ಮಾತನಾಡಿ,ಕಾರ್ಮಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಸ್ವಾವಲಂಭಿಗಳಾಗಿ ಸರ್ವತೋಮುಖ ಅಭಿವೃದ್ಧಿ ಹೊಂದಬೇಕಿದೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ವಿರುದ್ಧ ನಿರಂತರ ಹೋರಾಟ ಅನಿವಾರ್ಯ, ಪ್ರತಿ ಕಾರ್ಮಿಕರು ಸಂಘಟಿತರಾಗಬೇಕು ಹಾಗೂ ರೈತ ಮತ್ತು ಜನವಿರೋಧಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯೋವರೆಗೂ ಹೋರಾಟ ನಡೆಸಬೇಕೆಂದರು. ಗ್ರಾಮದ ಹಿರಿಯರು ಹಾಗೂ ಮುಖಂಡರು,ಕಾರ್ಮಿಕ ಸಂಘದ ಸದಸ್ಯರು ಮುಖಂಡರು ಮತ್ತಿತರರು ಇದ್ದರು.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ

0 Response to "ಗಡ್ಡದ ಬೋರಯ್ಯನಹಟ್ಟಿ: ಯೋಗ್ಯರನ್ನು ಆಯ್ಕೆ ಮಾಡಿ: ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ-Vijayanagara"

Post a Comment

Article Top Ads

Central Ads Article 1

Middle Ads Article 2

Article Bottom Ads