
ರಾಯಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುಮಾರ್ ಆರ್ ಎಸ್ ಕುಮಾರ್ ಅವರು ಆಯ್ಕೆ-mandya
Thursday, September 23, 2021
Comment
ಕೆ ಆರ್ ಪೇಟೆ: ತಾಲೂಕು ಶೀಳನೆರೆ ಹೋಬಳಿಯ ರಾಯಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುಮಾರ್ ಆರ್ ಎಸ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕರು ಹಾಗೂ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹೆಚ್ ಟಿ ಲೋಕೇಶ್ ಅವರು ಮಾತನಾಡಿ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು. ಸಂಘದಲ್ಲಿ ರಾಜಕೀಯ ಬೆರಸಬಾರದು.ಸಂಘದ ಪ್ರತಿಯೊಬ್ಬ ಸದಸ್ಯರಿಗೆ,ರಾಸುಗಳಿಗೆ ವಿಮೆ ಕಡ್ಡಾಯವಾಗಿ ಮಾಡಿಸಬೇಕು.ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವತಿಯಿಂದ ಬರುವ ಸೌಲಭ್ಯಗಳನ್ನು ಉತ್ಪಾದಕರಿಗೆ ಸಿಗುವಂತೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡುವಂತೆ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಂಘದ ಕಾರ್ಯದರ್ಶಿ, ಸಿಬ್ಬಂದಿಗಳು ಮಾಡಬೇಕೆಂದು ತಿಳಿಸಿ ದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ಯೋಗೇಶಗೌಡ, ಸಂಘದ ಉಪಾಧ್ಯಕ್ಷರಾದ ಚನ್ನವೀರಶೆಟ್ಟಿ,ಸದಸ್ಯರುಗಳಾದ ಕೃಷ್ಣೇಗೌಡ, ಮಂಜೇಗೌಡ, ಸತೀಶ್, ವಜ್ರೇಶ್,ಸುಕನ್ಯಾ, ಸುಮ,ರಾಜಯ್ಯ,ಪ್ರೇಮಕುಮಾರ್ ಮಾಜಿ ಗ್ರಾ.ಪಂ.ಸದಸ್ಯರಾದ ಜಗದೀಶಚಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
0 Response to "ರಾಯಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುಮಾರ್ ಆರ್ ಎಸ್ ಕುಮಾರ್ ಅವರು ಆಯ್ಕೆ-mandya"
Post a Comment