-->
ಕೂಡ್ಲಿಗಿ:ಕಾಂಗ್ರೇಸ್ ಮಹಿಳಾ ಘಟಕದಿಂದ ಪ್ರತಿಭಟನೆ -Kudligi

ಕೂಡ್ಲಿಗಿ:ಕಾಂಗ್ರೇಸ್ ಮಹಿಳಾ ಘಟಕದಿಂದ ಪ್ರತಿಭಟನೆ -Kudligi

 

ಕೂಡ್ಲಿಗಿ:ಕಾಂಗ್ರೇಸ್ ಮಹಿಳಾ ಘಟಕದಿಂದ ಪ್ರತಿಭಟನೆ 

ವಿಜಯನಗರ ಜಿಲ್ಲೆ ಕೂಡ್ಲಿಗಿಯ ತಹಶಿಲ್ದಾರವರ ಕಚೇರಿ ಆವರಣದಲ್ಲಿ ಸೆ8ರಂದು,ಕಾಂಗ್ರೇಸ್ ಗ್ರಾಮೀಣ ವಿಭಾಗದ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಎಂ.ಆಶಾಲತಾ ಹಾಗೂ ಕೂಡ್ಲಿಗಿ ಯುವ ಕಾಂಗ್ರೇಸ್ ಮಹಿಳಾ ಮುಖಂಡರಾದ ಶ್ರೀಮತಿ ಎನ್.ನೇತ್ರಾವತಿ ರವರ ನೇತೃತ್ವದಲ್ಲಿ. ಕಾಂಗ್ರೇಸ್ ಮಹಿಳಾ ಕಾರ್ಯಕರ್ತರು ಕೇಂದ್ರ ಸರ್ಕಾರವು ಅಗತ್ಯ ವಸ್ಥುಗಳ ಬೆಲೆ ಏರಿಸಿರುವುದನ್ನು ಖಂಡಿಸಿದ್ದಾರೆ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಘೋಷಣೆ ಕೂಗಿ ತೀವ್ರವಾಗಿ ಖಂಡಿಸಿದ್ದಾರೆ.ಮತ್ತು ಶೀಘ್ರವೇ ಬೆಲೆ ಏರಿಕೆ ತಗ್ಗಿಸಿ ಬೆಲ ಕಡಿಮೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ,

 ಪ್ರತಿಭಟನೆಕಾರರುಗ್ಯಾಸ್ ಸಿಲಿಂಡರ್ ಗಳನ್ನು ಹೊತ್ತು ಮತ್ತು ಸಿಲಿಂಡರ್ ಚಿತ್ರವಿರುವ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧಘೋಷಣೆಗಳನ್ನು ಕೂಗಿದರು.ಧರ ಇಳಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ  ರಾಜ್ಯ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಪಕ್ಷ ಹಮ್ಮಿಕೊಳ್ಳಲಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಶ್ರೀಮತಿ  ಆಶಾಲತಾ ತಿಳಿಸಿದ್ದಾರೆ.ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಪತ್ರವನ್ನು ತಹಶಿಲ್ದಾರರಾದ ಟಿ.ಜಗದೀಶರವರ ಮೂಲಕ ನೀಡಿದರು,ಈ ಸಂದರ್ಭದಲ್ಲಿ ನಾಗರತ್ನ, ರತ್ನಾಬಾಯಿ, ಕೆ.ವಸಂತ, ಉಮಾದೇವಿ, ಸುಮಲತಾ, ಚಂದ್ರಮ್ಮ,ಗೀತಾ,ಸಕ್ರಮ್ಮ,ಹುಲಿಗೆಮ್ಮ ಸೇರಿದಂತೆ ಹಲವಾರು ಮಹಿಳಾ ಕಾಂಗ್ರೇಸ್  ಕಾರ್ಯಕರ್ತರು ಉಪಸ್ಥಿತರಿದ್ದರು


0 Response to "ಕೂಡ್ಲಿಗಿ:ಕಾಂಗ್ರೇಸ್ ಮಹಿಳಾ ಘಟಕದಿಂದ ಪ್ರತಿಭಟನೆ -Kudligi"

Post a Comment

Article Top Ads

Central Ads Article 1

Middle Ads Article 2

Article Bottom Ads