
ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅಪಾರ:ಪತ್ರಕರ್ತ ಬಡಿಗೇರ ನಾಗರಾಜ-kudligi
Saturday, September 18, 2021
Comment
*ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅಪಾರ:ಪತ್ರಕರ್ತ ಬಡಿಗೇರ ನಾಗರಾಜ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವ ಕರ್ಮ ಸಮುದಾಯದಿಂದ, ಸೆ17ರಂದು ತಹಶಿಲ್ದಾರರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು, ಉಪ ತಹಶಿಲ್ದಾರರಾದ ಶ್ರೀಮತಿ ಅರುಂಧತಿ ನಾಗವಿರವರು ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆ ತಾಲೂಕು ಉಪಾಧ್ಯಕ್ಷ ಹಾಗೂ ಪತ್ರಕರ್ತರ ಬಡಿಗೇರ್ ನಾಗರಾಜ್ ಮಾತನಾಡಿ,
ಜಗತ್ತಿಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾದದ್ದು ಎಂದರು. ರಾಮಾಯಣ,ಮಹಾಭಾರತ ಕಾಲದಲ್ಲಿದಿಂದ ಈವರೆಗೂ ಸಹ ವಿಶ್ವಕರ್ಮರ ಕೊಡುಗೆಯ ಬಗ್ಗೆ ಉಲ್ಲೇಖ ಇದೆ ಎಂದರು.
ಅನಾದಿ ಕಾಲದಿಂದಲೂ ದೇವಾಲಯಗಳ ನಿರ್ಮಾಣ ಕಾರ್ಯದಲ್ಲಿ,ಹಾಗೂ ಶಿಲ್ಪಕಲೆಗೆ ಮತ್ತು ವಾಸ್ತು ಕಲೆಯಲ್ಲಿ ನಿರಂತರ ಜನಾಂಗ ಶ್ರಮಿಸುತ್ತಿದೆ ಎಂದರು. ಸರ್ಕಾರ ನಮ್ಮ ಪಂಚ ಕುಲ ಕಸುಬು ಹಾಗೂ ಕುಶಲತೆಗೆ ಹೆಚ್ಚಿನ ಆರ್ಥಿಕ ಸಹಕಾರ ನೀಡಲು ಯೋಜನೆಗಳನ್ನು ಜಾರಿತರಬೇಕಿದೆ, ಕಡಿಮೆ ಬಡ್ಡಿ ಧರದಲ್ಲಿ ನಮ್ಮ ಕಸುಬುಗಳಿಗೆ ಸಹಾಯಹಸ್ತ ನೀಡಿದರೆ ನಮ್ಮ ಜನಾಂಗದವರು ಆರ್ಥಿಕವಾಗಿ ಸಭಲರಾಗುತ್ತಾರೆ ಎಂದರು. ಸಂಘಟನೆಯ ತಾಕೂಕು ಪ್ರಧಾನ ಕಾರ್ಯದರ್ಶಿ ಮೊರಬ ಶರಣಪ್ಪ ಆಚಾರ್ ಮಾತನಾಡಿ,ನಾವೆಲ್ಲರೂ ಸಂಘಟಿತರಾಗಿ ಒಗ್ಗಟ್ಟಾಗಿ ಸಮಾಜವನ್ನು ಒಂದುಗೂಡಿಸಬೇಕಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸರ್ಕಾರದ ಸೌಲಭ್ಯಗಳನ್ನು ಪಡೆದು ಮುಂದುವರಿಯಬೇಕಾಗಿದೆ,ಈ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕಿದೆ,
ಈ ನಿಟ್ಟಿನಲ್ಲಿ ಸರ್ವರೂ ಅಗತ್ಯ ಸೌಲಭ್ಯಗಳನ್ನು ಪಡೆದು ಜನಾಂಗದ ಶ್ರೇಯಸ್ಸಿಗೆ ಪಣ ತೊಡಬೇಕು ಎಂದರು. ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀಧರ ಆಚಾರಿ, ಸಿ. ನಾಗರಾಜ್, ಮೊರಬ ವೆಂಕಟೇಶ್ ಆಚಾರ್, ಚಿನ್ನಾಪ್ರಪ್ಪ ಆಚಾರಿ, ವೀರೇಶ್ಆಚಾರ್, ಪ್ರಕಾಶ್ ಆಚಾರ್, ಶಾಂತಕುಮಾರ್, ಮಹೇಶ್, ರಾಮಾಂಜನೇಯ, ಹನುಮಂತರಾಜ್, ವಾಲ್ಮೀಕಿ ಮುಖಂಡ ಕಾರ್ಪೆಂಟೆರ್ ಮೂಗೇಶ್, ನಿವೃತ್ತಿ ನೌಕರರ ಸಂಘದ ವೀರಯ್ಯ, ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ವರದಿ: ವಿ.ಜಿ.ವೃಷಭೇಂದ್ರ
0 Response to "ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅಪಾರ:ಪತ್ರಕರ್ತ ಬಡಿಗೇರ ನಾಗರಾಜ-kudligi"
Post a Comment