
ಕೂಡ್ಲಿಗಿ-ಕರೋನ ಆತಂಕದ ನಡುವೆಯೂ ಹಿರಿಯ ಪ್ರಾಥಮಿಕ ಆರರಿಂದ ಎಂಟನೇ ತರಗತಿಗಳನ್ನು ಆರಂಭ-Kudligi
Monday, September 6, 2021
Comment
ಕೂಡ್ಲಿಗಿ:
ಕೋವಿಡ್ ಆತಂಕದ ನಡುವೆಯೂ ಹಿರಿಯ ಪ್ರಾಥಮಿಕ ಆರರಿಂದ ಎಂಟನೇ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದಂತೆ ಸೋಮವಾರದಿಂದ ರಾಜ್ಯಾದ್ಯಂತ ಶಾಲೆಯತ್ತ ಮಕ್ಕಳ ಹೆಜ್ಜೆ ಇಡುತ್ತಿದ್ದು ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆದ ಶ್ರೀಮತಿ ಉಮಾದೇವಿ ಮೇಡಂ ರವರು ತಾಲೂಕಿನಾದ್ಯಂತ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಮ್ಮ ಕಚೇರಿಯಿಂದ ವಿವಿಧ ಅಧಿಕಾರಿಗಳಿಗೆ ವಿವಿಧ ಕಡೆ ಕಳಿಸಿ ಇಂದು ಮಹದೇವಪುರ ಕ್ಲಸ್ಟರಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು. ಕೆಪಿಎಸ್ ಪ್ರಾಥಮಿಕಶಾಲೆ ಗುಡೆಕೋಟೆ ಭೇಟಿ ನೀಡಿ ದಾಖಲಾತಿ ,ಹಾಜರಾತಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ವೀಕ್ಷಿಸಿsop ದನ್ವಯ ಸ್ವಚ್ಛತೆ ಕಾಪಾಡಲು ಆಯಾ ಶಾಲೆಯ ಮುಖ್ಯ ಗುರುಗಳಿಗೆ ಸೂಚಿಸಿದರು.CRP ಶ್ರೀ ಗೋವಿಂದಪ್ಪ ಸರ್ ಜೊತೆಗಿದ್ದರು.
0 Response to "ಕೂಡ್ಲಿಗಿ-ಕರೋನ ಆತಂಕದ ನಡುವೆಯೂ ಹಿರಿಯ ಪ್ರಾಥಮಿಕ ಆರರಿಂದ ಎಂಟನೇ ತರಗತಿಗಳನ್ನು ಆರಂಭ-Kudligi"
Post a Comment