-->
ಕೋಡಿ ಹರಿದಿರುವ ಕೋಲಾರಮ್ಮ ಕೆರೆಗೆ  ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರಿಂದ  ಬಾಗಿನ ಅರ್ಪಣೆ-kolar

ಕೋಡಿ ಹರಿದಿರುವ ಕೋಲಾರಮ್ಮ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರಿಂದ ಬಾಗಿನ ಅರ್ಪಣೆ-kolar

*ಕೋಡಿ ಹರಿದಿರುವ ಕೋಲಾರಮ್ಮ ಕೆರೆಗೆ  ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರಿಂದ  ಬಾಗಿನ ಅರ್ಪಣೆ*
ಕೋಲಾರ. ಒಂದೆಡೆ ತುಂಬಿ ಹರಿಯುತ್ತಿರುವ ಬೃಹತ್ತಾದ ಕೆರೆ, ಮತ್ತೊಂದೆಡೆ ಕೋಡಿ ಹರಿಯುತ್ತಿರುವ  ನೀರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಿರುವ  ಜನಪ್ರತಿನಿಧಿಗಳು ಇದು ಇಂದು ಕೆರೆಯ ಬಳಿ ಕಂಡು ಬಂದ ದೈಶ್ಯ.
ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಇಪ್ಪತ್ತು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಈ  ಕೆರೆಗೆ ಜೀವ ಬಂದಿದೆ,  ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದ್ದು  ಇತ್ತೀಚೆಗೆ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಾದ ಸುಮಾರು 800 ಎಕರೆಯಷ್ಟು ವಿಸ್ತೀರ್ಣದ ಕೋಲಾರಮ್ಮ ಕೆರೆ ತುಂಬಿ ಕೋಡಿ ಹರಿಯುತ್ತಿದೆ. 
ಹರಿಯುತ್ತಿದ್ದ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹಾಗೂ ಸಂಸದ ಎಸ್ ಮುನಿಸ್ವಾಮಿ  ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಕಳಶ ಹಿಡಿದು  ಡೋಲು ವಾದ್ಯ ಸಮೇತ  ಸಚಿವರು ಸಂಸದರನ್ನು ಸ್ವಾಗತಿಸಿದರು.

0 Response to "ಕೋಡಿ ಹರಿದಿರುವ ಕೋಲಾರಮ್ಮ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರಿಂದ ಬಾಗಿನ ಅರ್ಪಣೆ-kolar"

Post a Comment

Article Top Ads

Central Ads Article 1

Middle Ads Article 2

Article Bottom Ads