
ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ! ವಾಯು ವಿಹಾರ ನಿಷೇಧಿಸಿದ ಅರಣ್ಯ ಇಲಾಖೆ-hubli
Thursday, September 16, 2021
Comment
*ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ! ವಾಯು ವಿಹಾರ ನಿಷೇಧಿಸಿದ ಅರಣ್ಯ ಇಲಾಖೆ*
ಹುಬ್ಬಳ್ಳಿ- ಚಿರತೆಯೊಂದು ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಬುಧವಾರ ರಾತ್ರಿ ಕಾಣಿಸಿಕೊಂಡಿರುವ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದೆ.
ಸಾರ್ವಜನಿಕರಿಗೆ ಬೆಟ್ಟದ ಬಳಿ ವಾಯು ವಿಹಾರಕ್ಕೆ ಹೋದ ಸಂದರ್ಭದಲ್ಲಿ ಚಿರತೆ ಕಂಡಿದೆ ಎಂದು ಹೇಳಲಾಗುತ್ತಿದ್ದು, ಜನದಟ್ಟಣ ಪ್ರದೇಶ ದಾಟಿಕೊಂಡು ನೃಪತುಂಗ ಬೆಟ್ಟಕ್ಕೆ ಚಿರತೆ ಕಾಲಿಟ್ಟಿರುವುದು ಅಚ್ಚರಿಯ ವಿಷಯವಾಗಿದೆ. ಒಂದುವೇಳೆ ಬೆಟ್ಟಕ್ಕೆ ಚಿರತೆ ಬಂದಿದ್ದಲ್ಲಿ ಗಿಡ-ಮರ, ಪೂನೆಗಳು ಇರುವುದರಿಂದ ಅಲ್ಲಿ ಅಹಾರಕ್ಕಾಗಿ ಹುಡುಕಾಡಿರುವ ಸಾಧ್ಯತೆ ಇದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚೆತ್ತುಕೊಂಡು ನೃಪತುಂಗ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಿದ್ದಾರೆ.
0 Response to "ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ! ವಾಯು ವಿಹಾರ ನಿಷೇಧಿಸಿದ ಅರಣ್ಯ ಇಲಾಖೆ-hubli"
Post a Comment