-->
ಗ್ರಾಮಪಂಚಾಯತ ಸದಸ್ಯರೊಡನೆ ವಾರ್ಡ್ ವಾರು ಮನೆಮನೆ ಭೇಟಿ ; ಪಲಾನುಭವಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಿ, ಲಸಿಕೆ ದಿನ ನೆನಪಿಸಿ: ಸಿಇಓ ಡಾ.ಸುಶೀಲಾ ಬಿ.-dwd

ಗ್ರಾಮಪಂಚಾಯತ ಸದಸ್ಯರೊಡನೆ ವಾರ್ಡ್ ವಾರು ಮನೆಮನೆ ಭೇಟಿ ; ಪಲಾನುಭವಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಿ, ಲಸಿಕೆ ದಿನ ನೆನಪಿಸಿ: ಸಿಇಓ ಡಾ.ಸುಶೀಲಾ ಬಿ.-dwd

ಗ್ರಾಮಪಂಚಾಯತ ಸದಸ್ಯರೊಡನೆ ವಾರ್ಡ್ ವಾರು ಮನೆಮನೆ ಭೇಟಿ ; ಪಲಾನುಭವಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಿ, ಲಸಿಕೆ ದಿನ ನೆನಪಿಸಿ: ಸಿಇಓ ಡಾ.ಸುಶೀಲಾ ಬಿ.

ಧಾರವಾಡ: ಸೆಪ್ಟೆಂಬರ್ 17 ರಂದು ಆಯೋಜಿಸುವ ಕೋವಿಡ್ ಬೃಹತ ಲಸಿಕಾ ಅಭಿಯಾನವು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಯಶಸ್ವಿಗೊಳಿಸಲು ಗ್ರಾಮೀಣ ಸಮುದಾಯ ಹಾಗೂ ಗ್ರಾಮ ಪಂಚಾಯತ ಸದಸ್ಯರನ್ನು ಸಕ್ರಿಯವಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.

ಅವರು ಇಂದು ಮಧ್ಯಾಹ್ನ ಧಾರವಾಡ ಜಿಲ್ಲೆಯ ಎಲ್ಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಂಚಾತಯ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ
 ಆನ್ ಲೈನ್ ಮೂಲಕ ಸಭೆ ಜರುಗಿಸಿ, ಮಾತನಾಡಿದರು.

ಕೋವಿಡ್ ಲಸಿಕಾ ಅಭಿಯಾನದ ಕುರಿತು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. 
ಲಸಿಕಾ ದಿನದವರೆಗೆ ಪ್ರತಿದಿನ ಮೂರು ಬಾರಿ ಪ್ರತಿ ಗ್ರಾಮದಲ್ಲಿ ಲಸಿಕಾರಣದ ಮಾಹಿತಿ ನೀಡಲು ಡಂಗುರ ಸಾರಬೇಕು. ದೊಡ್ಡ ಹಳ್ಳಿಗಳಲ್ಲಿ ಹಾಗೂ ವಾಹನ ಸೌಲಭ್ಯವಿರುವ ಗ್ರಾಮ ಪಂಚಾಯತಗಳು ಧ್ವನಿವರ್ಧಕ ಬಳಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪ್ರತಿ ಗ್ರಾಮ ಪಂಚಾಯತ ವಾರ್ಡ್ ಗಳಲ್ಲಿ ಮನೆಗಳಿಗೆ ಅಲ್ಲಿನ ಪಂಚಾಯತ ಸದಸ್ಯರೊಂದಿಗೆ, ಪ್ರಮುಖರೊಂದಿಗೆ ಭೇಟಿ ನೀಡಿ, ಲಸಿಕೆ ಪಡೆಯಲು ತಿಳಿಸಬೇಕು. ಮತ್ತು ಲಸಿಕೆ ಪಡೆಯದಿರುವ ಅರ್ಹ ಪಲಾನುಭವಿಗಳಿಗೆ ಸ್ಲೀಪ್ ನೀಡಿ, ಅವರ ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ಲಸಿಕಾ ದಿನವಾದ ಸೆ.17 ರಂದು ಅವರಿಗೆ ಕರೆ ಮಾಡಿ ಲಸಿಕೆ ಪಡೆಯುವದನ್ನು ನೆನಪಿಸಬೇಕು ಎಂದು ತಿಳಿಸಿದರು. 

  ಬೃಹತ್‌ ಲಸಿಕಾ ಮೇಳದ ಕುರಿತು ಮಾಹಿತಿ ಇರುವ  ಬ್ಯಾನರ್ ಗಳನ್ನು ತಯಾರಿಸಿ ಗ್ರಾಮದಲ್ಲಿ  ಹೆಚ್ಚುಹೆಚ್ಚು ಜನರು ಸೇರುವ ಬಸ್ ನಿಲ್ದಾಣ, ದೇವಸ್ಥಾನ, ಚಾವಡಿ, ಪಂಚಾಯತಿ ಮುಂತಾದ ಸ್ಥಳಗಳಲ್ಲಿ  ಅಳವಡಿಸಬೇಕೆಂದು ಸೂಚಿಸಿದರು.

ಪಿಡಿಓ ಮತ್ತು ಕಾರ್ಯದರ್ಶಿಗಳು ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಬೇಟಿ ನೀಡುವ ಜನರು ಲಸಿಕೆ ಹಾಕಿಸಿಕೊಂಡಿರುವ ಕುರಿತು ಮಾಹಿತಿ ಸಂಗ್ರಹಿಸಬೇಕು ಎಂದರು.

ಆನ್ ಲೈನ್ ಸಭೆಯಲ್ಲಿ ಎಲ್ಲ ತಾ.ಪಂ.ಇಓ, ಪಿಡಿಓ ಹಾಗೂ ಪಂಚಾಯತ ಸಿಬ್ಬಂದಿಗಳು, ವಿವಿಧ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಕೆಲವು ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.


Report: Raghu Naragunda

0 Response to "ಗ್ರಾಮಪಂಚಾಯತ ಸದಸ್ಯರೊಡನೆ ವಾರ್ಡ್ ವಾರು ಮನೆಮನೆ ಭೇಟಿ ; ಪಲಾನುಭವಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಿ, ಲಸಿಕೆ ದಿನ ನೆನಪಿಸಿ: ಸಿಇಓ ಡಾ.ಸುಶೀಲಾ ಬಿ.-dwd"

Post a Comment

Article Top Ads

Central Ads Article 1

Middle Ads Article 2

Article Bottom Ads