-->
ತ್ರಿಮತಸ್ಯ ಚರ್ಮಕಾರರಿಗೆ ಪ್ರತ್ಯೇಕಅಭಿವೃದ್ಧಿ ನಿಗಮಕ್ಕೆ ಮನವಿ-dwd

ತ್ರಿಮತಸ್ಯ ಚರ್ಮಕಾರರಿಗೆ ಪ್ರತ್ಯೇಕಅಭಿವೃದ್ಧಿ ನಿಗಮಕ್ಕೆ ಮನವಿ-dwd

ತ್ರಿಮತಸ್ಯ ಚರ್ಮಕಾರರಿಗೆ ಪ್ರತ್ಯೇಕ
ಅಭಿವೃದ್ಧಿ ನಿಗಮಕ್ಕೆ ಮನವಿ

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ 101 ಜಾತಿಗಳಲ್ಲಿ ಹಾಗೂ ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಸೂಚಿಸಿರುವ ಮಾದಿಗ ಸಂಬಂಧಿತ 54 ಜಾತಿಗಳಲ್ಲಿ ಆಯೋಗದ ಇಚ್ಛಾನುಸಾರ ಸೇರಿಸಲಾಗಿರುವ ಮೋಚಿ, ಮಚಗಾರ,ಕಮತೆಮೋಚಿ, ಮಚಗಾರ, ಚಮ್ಮರ್, ಚಮ್ರಗಾರ, ಸಮಗಾರ, ಡೋಹರ, ಡೋರ,
ಕಂಕಯ್ಯ, ಕಕ್ಕಯ್ಯ, ಹರಳಯ್ಯ, ಚಮಾಡಿಯ, ಹಾಗೂ ರೋಹಿದಾಸ್ ಎಂಬ 19ಜಾತಿಗಳು ತ್ರಿಮತಸ್ಯ ಚರ್ಮಕಾರ ಜಾತಿಗಳಾಗಿವೆ. ಲಭ್ಯ ಅಂಕಿಅಂಶಗಳ ಪ್ರಕಾರ ಮೇಲ್ಕಂಡ 19 ಜಾತಿಗಳನ್ನೊಳಗೊಂಡು, ತ್ರಿಮಸ್ತ ಚರ್ಮಕಾರರ ಒಟ್ಟು
ಜನಸಂಖ್ಯೆಯು 18 ಲಕ್ಷಕ್ಕೂ ಅಧಿಕವಿರುವ ಒಂದು ಪ್ರತ್ಯೇಕ ಜಾತಿಯಾಗಿರುತ್ತದೆ.
ಈ 19 ಜಾತಿಗಳು "ಬಲ"ವೂ ಅಲ್ಲ, "ಎಡ"ವೂ ಅಲ್ಲ. ಚರ್ಮಕಾರರು.
ಎಂಬುದು ತನ್ನದೇ ಆದ ವಿವಿಧ ಹೆಸರುಗಳುಳ್ಳ ಸ್ವತಂತ್ರ ಜಾತಿಯಾಗಿದೆ. ಇದು ಬಸವಪೂರ್ವ ಯುಗದಿಂದಲೂ ಕರ್ನಾಟಕದಲ್ಲಿ ಚಾರಿತ್ರಿಕ ಮಹತ್ವ ಪಡೆದ ಕರಕುಶಲಿಗಳ ವೃತ್ತಿವರ್ಗಕ್ಕೆ ಸೇರಿದ ಒಂದು ಪ್ರತ್ಯೇಕ ಹಾಗೂ ಸ್ವತಂತ್ರ ಸಮುದಾಯವಾಗಿದೆ. ಶತಮಾನಗಳಿಂದ ದೇಶದ ಎಲ್ಲ ರಾಜ್ಯಗಳಲ್ಲಿಯೂ ನೆಲೆಸಿರುವ ರಾಷ್ಟ್ರೀಯ ಸಮುದಾಯವೂ ಆಗಿದೆ. ಇವರು ಎಂದೂ ಎಲ್ಲಿಯೂ ಪ್ರತಿಭಟನೆ, ಬಂಡಾಯ, ದಂಗೆ, ಹರತಾಳ ಮುಂತಾದವುಗಳಲ್ಲಿ ತೊಡಗಿದವರಲ್ಲ.
ಚರ್ಮಕಾರರು ಭಕ್ತಿಭಂಡಾರಿ ಬಸವಣ್ಣ, ಮಹಾಸಂತ ರವಿದಾಸರು, ಮಹಾಶರಣ
ಕಕ್ಕಯ್ಯ ಹಾಗೂ ಮಹಾಶರಣ ಹರಳಯ್ಯರವರ ಅನುಯಾಯಿಗಳಾಗಿದ್ದು, ಭೀಮ
ತತ್ಯಾನುಷ್ಠಾನ ಮಾಡುವ ಸಂಯುಕ್ತ ಧಾರ್ಮಿಕ ಪ್ರವೃತ್ತಿಯವರಾಗಿದ್ದಾರೆ.

1 Response to "ತ್ರಿಮತಸ್ಯ ಚರ್ಮಕಾರರಿಗೆ ಪ್ರತ್ಯೇಕಅಭಿವೃದ್ಧಿ ನಿಗಮಕ್ಕೆ ಮನವಿ-dwd"

 1. ಪರಿಶಿಷ್ಟ ಜಾತಿ ಜನಾಂಗದವರಿಗೆ ಅಂಬೇಡ್ಕರ ಅಭಿವೃದ್ಧಿ ನಿಗಮದಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡುವ ವ್ಯವಸ್ಥೆ
  ನಡಿತಾ ಇದೆ ಒಂದು ಜಾತಿ ಅಡಿ ಹಲವಾರು ಉಪಜಾತಿಗಳು
  ಉಪಸ್ಥಿತರಿರುವರು ಅವುಗಳಿಗೆ ಸೌಲಭ್ಯ ಒದಗಿಸಲು ಜಾತಿಗೆ
  ಒಂದರಂತೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಲು ಬೇಡಿಕೆಗಳುಹೆಚ್ಚಾಗಿಕೇಳಿಬರುತ್ತಿವೆ.ಮಹಾಮಾನವತಾವಾಧಿಯ
  ಕನಸು ಒಟ್ಟಾರೆ ಎಲ್ಲ ದಲಿತ ಜನಾಂಗಗಳಿಗೆ ಸೌಲಭ್ಯಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವ ಮಟ್ಟಿಗೆ
  ಸರ್ವಾಂಗೀಣ ಅಭಿವೃದ್ಧಿಗೆಪ್ರಯತ್ನಿಸುವುದಾಗಿದೆ.ಆಮಹಾತ್ಮನ ನಾಮದಡಿ ಕಾರ್ಯನಿರತ ನಿಗಮದಲ್ಲಿ ವಿಶ್ವಾಸವಿಲ್ಲದಂತೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲು ಬೇಡಿಕೆ,ಬೇಡಿಕೆಗಳಿಗೆ ಮಣೆ ಹಾಕಿ ಸರ್ಕಾರ ಸ್ಥಾಪನೆಗೆ ಮುಂದಾಗಿ ಹಾಲಿ ಇರುವ ನಿಗಮದ ಪ್ರಾಮುಖ್ಯತೆ ಕಡಿಮೆಗೊಳಿಸಿದಂತಾಗುವದರಲ್ಲಿ ಸಂಶಯವಿಲ್ಲ ಅಂಬೇಡ್ಕರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಹಾಗೂ ಗುರಿಗಳನ್ನು ಹೆಚ್ಚಿಸಿ ಎಲ್ಲ ಜನಾಂಗದ ಅಭಿವೃದ್ಧಿಗೆ ಗಮನಹರಿಸುವುದು ಸೂಕ್ತ

  ReplyDelete

Article Top Ads

Central Ads Article 1

Middle Ads Article 2

Article Bottom Ads