
ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸಭೆ-dwd
Tuesday, September 14, 2021
Comment
ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸಭೆ
ಧಾರವಾಡ ಸೆ.14: ಭಾರತ ಸರಕಾರ ನೆಹರು ಯುವ ಕೇಂದ್ರ ಇಂದು (ಸೆ.14) ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸಭೆ ಆಯೋಜಿಸಿಲಾಗಿತ್ತು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ್ ಗಿತ್ತೆ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ಕಾರ್ಯ ಚಟುವಟಿಕೆ ಮತ್ತು ವಾರ್ಷಿಕ ಕಾರ್ಯ ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ನಿಯೋಜಿಸಿರುವ ಹಣವನ್ನು ಸವಿಸ್ತಾರವಾಗಿ ಜಿಲ್ಲಾ ಯುವ ಅಧಿಕಾರಿ ಎಮ್ ಗೌತಮ್ ರೆಡ್ಡಿ ತಿಳಿಸಿದರು.
ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸಭೆಯ ಎಲ್ಲ ಸದಸ್ಯರ ಉಪಸ್ಥಿತಿಯಲ್ಲಿ ವಾರ್ಷಿಕ ಕಾರ್ಯಕ್ರಮ ಯೋಜನೆ 2020-21 ಕ್ಕೆ ಒಪ್ಪಿಗೆ ಪಡೆಯಲಾಯಿತು. ಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸಮನ್ವಯ ಅಧಿಕಾರಿ ಡಾ.ಚಂದ್ರಪ್ಪ, ಜೆ.ಎಸ್.ಎಸ್ ಮಹಾವಿದ್ಯಾಲದ ಪ್ರಾಂಶುಪಾಲ ಡಾ.ಇಂದು ಪಂಡಿತ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಆರ್., ಕ್ಷೇತ್ರ ಜನ ಸಂಪರ್ಕ ಅಧಿಕಾರಿ ಶೃತಿ ಎಸ್.ಟಿ ಹಾಗೂ ಇತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎಂ ಗೌತಮ್ ರೆಡ್ಡಿ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಬೇಬಿ ದೊಡ್ಡಮನಿ ವಂದಿಸಿದರು.
ವರದಿ: ರಘು ನರಗುಂದ
0 Response to "ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸಭೆ-dwd"
Post a Comment