-->
ನ್ಯಾಯಮೂರ್ತಿ ಎ.ಜೆ.ಸದಾಶಿವ ರವರ ವರದಿನ್ನು ಅಂಗಿಕರಿಸಲು ಸರ್ಕಾರಕ್ಕೆ ಸಲಹೆ ನೀಡಿ-dwd

ನ್ಯಾಯಮೂರ್ತಿ ಎ.ಜೆ.ಸದಾಶಿವ ರವರ ವರದಿನ್ನು ಅಂಗಿಕರಿಸಲು ಸರ್ಕಾರಕ್ಕೆ ಸಲಹೆ ನೀಡಿ-dwd

ವಿಷಯ:- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ೨೦೧೨ರಲ್ಲಿ ಸಲ್ಲಿಸಿದ ವರದಿಯು
ಇಲ್ಲಿಯವರೆಗೂ ಆಳುವ ಸರ್ಕಾರಗಳು ಅಂಗಿಕರಿಸಿರುವುದಿಲ್ಲ. (ಸ್ವೀಕರಿಸಿರುವುದಿಲ್ಲ) ಆದಾಗ್ಯೂ ಸಹ ಪ.ಜಾತಿಯ ಒಂದೆರಡು ಜಾತಿಯ ಅದರಲ್ಲಿಯೂ ಭಾರತೀಯ ಜನಾತ ಪಕ್ಷ ಸರ್ಕಾರದ ಆಡಳಿತ ಭಾಗವಾಗಿರುವ ಪಶುಸಂಗೋಪನಾ ಇಲಾಖೆ ಸಚಿವರಾದ ಶ್ರೀ ಪ್ರಭು ಚವ್ಹಾಣ್ ರವರ ಸರ್ಕಾರದ ಮತ್ತು ಪಕ್ಷದ ನಿಲುವಿಗೆ ವಿರುದ್ಧವಾಗಿ ಅಸಂವಿಧಾನಾತ್ಮಕವಾಗಿ ವರದಿ ವಿರುದ್ಧ ಮಾತನಾಡುತ್ತಿರುವುದರಿಂದ ಅವರನ್ನು ಸಂಪುಟದಿಂದ ಕೈಬಿಟ್ಟು ನ್ಯಾಯಮೂರ್ತಿ ಎ.ಜೆ.ಸದಾಶಿವ ರವರ ವರದಿನ್ನು ಅಂಗಿಕರಿಸಲು ಸರ್ಕಾರಕ್ಕೆ ಸಲಹೆ ನೀಡಲು ಕೋರಿ ಮನವಿ.
 ಕರ್ನಾಟಕ ಭೀಮಸೇನೆ ಸಮಿತಿ ಬೆಂಗಳೂರು ಹಾಗೂ
ಮಾದಿಗರ ಮಹಾಸಭಾ ಮಾದಿಗ ದಂಡೂರು ಸಮಿತಿಗಳ ಮುಖಂಡರು ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ಕರ್ನಾಟಕ
ಸರ್ಕಾರದಲ್ಲಿ ಪಶುಸಂಗೋಪನಾ ಇಲಾಖೆ ಸಚಿವರಾದ ಶ್ರೀ ಪ್ರಭುಚವ್ಹಾಣ್ ರವರು ಕಳೆದ ಎರಡು ವರ್ಷಗಳಿಂದಲೂ ನ್ಯಾಯಮುರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಲು ಬಿಡುವುದಿಲ್ಲ ಇದಕ್ಕೆ ನನ್ನ ವಿರೋಧವಿದೆಯೆಂದು ಮಾದ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದು ಇವರ ಇಂತಹ ನಡೆಯಿಂದ ಸಾರ್ವಜನಿಕವಾಗಿ ಹಾಗೂ ಪಕ್ಷದ ನಿಲೂವಿಗೆ ಮತ್ತು ಸರ್ಕಾರದ ಇಚ್ಚಾಶಕ್ತಿ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ನಮ್ಮಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ಬೇಕೆಂದರೆ ಸಂವಿಧಾನಾತ್ಮಕ ಮೂಲಕವೆ ಮಾಡಿಕೊಳ್ಳಬೇಕೆ ಹೊರತು ಯಾವುದೇ ಕಾರಣಕ್ಕು ಅಸಂವಿಧಾನಾತ್ಮಕ ಮಾರ್ಗಗಳನ್ನು ಅನುಸರಿಸಬಾರದು ಅಸಂವಿಧಾನಾತ್ಮಕ ಅಸಂವಿಧಾನಾತ್ಮಕ ಮಾರ್ಗಗಳ ಮೂಲಕ ಮಾಡುವ ಚಳುವಳಿಗಳು ಹೋರಾಟಗಳು ಪ್ರಚೋದನಾಕಾರಿ ಚಟುವಟಿಕೆಗಳಿಂದ ಆಡಳಿತಾತ್ಮಕವಾಗಿ ರಾಜ್ಯದಲ್ಲಿ ಹಾಗೂ ಸಮಾಜದಲ್ಲಿ ಅರಾಜಕತೆ ಕಥೆಯನ್ನು ಸೃಷ್ಟಿಸುತ್ತದೆ. ಇಂತಹ ಅಸಂವಿಧಾನಾತ್ಮಕ ನಡೆಯಲ್ಲಿ ನಡೆಯತ್ತಿರುವ ಶ್ರೀ ಪ್ರಭುಚವ್ಹಾಣ್ ರವರನ್ನು
ಭಾರತಿಯ ಜನತಾ ಪಾರ್ಟಿ ವರಿಷ್ಟರು ತಮ್ಮ ಸರ್ಕಾರದ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಮನವಿ ಸಲ್ಲಿಸಿದ್ದಾರೆ.

 ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವಾಗಿ ರಚಿತಗೊಂಡ ಮಾನ್ಯ ನ್ಯಾಯಮೂರ್ತಿಗಳಾದ ಎ.ಜೆ.ಸದಾಶಿವ ಆಯೋಗ ವರದಿಯನ್ನು ಎರಡನೇಯ ವಾರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸದಾಶಿವ ವರದಿಯನ್ನು ಯತಾವತ್ತಾಗಿ ಅಂಗಿಕರಿಸಿ ಕೇಂದ್ರಕ್ಕೆ ಸಿಪಾರಸ್ಸು ಮಾಡಬೇಕೆಂದು ಇಡಿ ರಾಜ್ಯದ ಪ.ಜಾತಿಯ ಮೂಲನಿವಾಸಿಗಳಾದ ಎಲ್ಲಾ
ಸಮುದಾಯದ ಕುಟುಂಬಗಳಿಂದ ಹೃದಯಪೂರ್ವಕ ಕಳಕಳಿಯಿಂದ ತಮಗೆ ವಿನಂತಿ.

0 Response to "ನ್ಯಾಯಮೂರ್ತಿ ಎ.ಜೆ.ಸದಾಶಿವ ರವರ ವರದಿನ್ನು ಅಂಗಿಕರಿಸಲು ಸರ್ಕಾರಕ್ಕೆ ಸಲಹೆ ನೀಡಿ-dwd"

Post a Comment

Article Top Ads

Central Ads Article 1

Middle Ads Article 2

Article Bottom Ads