-->
ರೋಗಗಳನ್ನು ನಿರ್ಲಕ್ಷಿಸದೆ ಆರೋಗ್ಯ ಕಾಳಜಿವಹಿಸಿ*-*ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ-dwd

ರೋಗಗಳನ್ನು ನಿರ್ಲಕ್ಷಿಸದೆ ಆರೋಗ್ಯ ಕಾಳಜಿವಹಿಸಿ*-*ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ-dwd

ರೋಗಗಳನ್ನು ನಿರ್ಲಕ್ಷಿಸದೆ ಆರೋಗ್ಯ ಕಾಳಜಿವಹಿಸಿ*-*ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ

ಧಾರವಾಡ ( ಕರ್ನಾಟಕ ಪೊಲೀಸ ಇಲಾಖೆಯು ಸಮಯವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವುದರಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣೆ‌ಮಾಡಿ‌ಸಿ‌ ಆರೋಗ್ಯ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
 
ಶ್ರೀ ಎನ್. ಎ. ಮುತ್ತಣ್ಣ ಮೆಮೋರಿಯಲ್‌ ಪೊಲೀಸ್ ಮಕ್ಕಳ‌ ವಸತಿ ಶಾಲೆಯಲ್ಲಿ ಇಂದು (19) ಭಾರತೀಯ ರಡ್ ಕ್ರಾಸ್ ಸೊಸೈಟಿ  ಪ್ರಾಯೋಜಕತ್ವದಲ್ಲಿ‌‌ ರೋಟರಿ ಕ್ಲಬ್ ಆಪ್ ಸೆವೆನ್ ಹಿಲ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಪ್ಯಾಮೀಲಿ ಪ್ಲಾನಿಂಗ್ ಅಸೋಶಿಯೇಸನ ಸಹಯೋಗದಲ್ಲಿ  ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬಗಳಿಗೆ ಮೆಗಾ ಹೆಲ್ತ್ ಚಕಪ್ ಕ್ಯಾಂಪ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,

ಪೊಲೀಸ್ ಸಿಬ್ಬಂದಿಗಳು ತಮ್ಮ ಆರೋಗ್ಯದ ಜೊತೆಗೆ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ರೋಗಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರ ಚಿಕಿತ್ಸೆ ಪಡೆಯಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಈ ರೀತಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಮನವಿ‌ ಮಾಡಿದರು.
ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ.ಪಿ.ಮಾತನಾಡಿ, ಈ ಹಿಂದೆ ಕೋವಿಡ್ 2ನೇ ಅಲೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. 3ನೇ ಅಲೆಯು ಹೆಚ್ಚು ಮಕ್ಕಳಿಗೆ ಭಾದಿಸುವುದರಿಂದ ಮಕ್ಕಳನ್ನು ಜಾಗೃತಿ ವಹಿಸಬೇಕು. ರೋಗಗಳನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿ, ದುಷ್ಟಚಟಗಳಿಂದ ದೂರವಿದ್ದು
ಉತ್ತಮ‌ ಜೀವನ ಶೈಲಿ ರೋಪಿಸಿಕೊಳ್ಳವುದರಿಂದ ಅಸಾಂಕ್ರಾಮಿಕ ರೋಗಗಳಾ ಬಿಪಿ, ಶುಗರ್ ನಂತಹ ರೋಗದಿಂದ ದೂರವಿರಬಹುದು. ಕಾಲಮೀತಿಯೋಳಗೆ ರೋಗಕ್ಕೆ ಚಿಕಿತ್ಸೆ ದೊರೆತರೆ ರೋಗ ಗುಣಪಡಿಸಬಹುದು ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಡಾ.ಕವನ‌ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿ ಅಧಿಕಾರಿ‌ ಯಶಪಾಲ ಕ್ಷೀರಸಾಗರ , ಸಹಾಯಕ ಅರಣ್ಯ ಅಧಿಕಾರಿ ಸೌರಭ ಕುಮಾರ, ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಡಾ.ಪಲ್ಲವಿ ದೇಶಪಾಂಡೆ, ಕಾರ್ಯದರ್ಶಿ ಗೌರಿ ಮಾಧನಭಾವಿ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ವ್ಯವಸ್ಥಾಪಕಿ ಡಾ.ಸುಜಾತಾ ಅನಿಶೆಟ್ಟರ, ರೆಡ್ ಕ್ರಾಸ್ ಸಂಸ್ಥೆಯ ಸದ್ಯರಾದ ಸುನೀಲ ಭಾಗೇವಾಡೆ, ಮಾರ್ತಾಂಡಪ್ಪಾ ಕತ್ತಿ, ಬಸವರಾಜ ಬಡಿಗೇರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ‌ ಪೊಲೀಸ್ ಇಲಾಖೆಯ ಕುಟುಂಬದವರು ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕಬ್ಲ ಆಫ್ ಸೇವನ ಹಿಲ್ಸ್, ಧಾರವಾಡ ಪೋಲಿಸ ಇಲಾಖೆ ವತಿಯಿಂದ ಹಮ್ಮಿಕೊಂಡ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ  ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ ಮತ್ತು ಅರಣ್ಯಾಧಿಕಾರಿ ಸೌರಭಕುಮಾರ ರಕ್ತದಾನ ಮಾಡಿ ಉಳಿದವರಿಗೆ ಮಾದರಿಯಾದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು  ನೀಡಿದ ಮಾಸ್ಕ್, ಸ್ಯಾನಿಟೈಜರ್‌ಗಳನ್ನು ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಡಾ.ಕವನ‌ ದೇಶಪಾಂಡೆ ಜಿಲ್ಲಾ ವರಿಷ್ಠಾಧಿಕಾರಿ  ಪಿ.ಕೃಷ್ಣಕಾಂತ ಅವರಿಗೆ ಹಸ್ತಾಂತರಿಸಿದರು.

0 Response to "ರೋಗಗಳನ್ನು ನಿರ್ಲಕ್ಷಿಸದೆ ಆರೋಗ್ಯ ಕಾಳಜಿವಹಿಸಿ*-*ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ-dwd"

Post a Comment

Article Top Ads

Central Ads Article 1

Middle Ads Article 2

Article Bottom Ads