-->
ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿ ಪ್ಲಾನ್ ಅನ್ವಯ ರೋಟರಿ ಕ್ಲಬ್ ಆಫ್‌ ಸೆವೆನ್ ಹಿಲ್ಸ್‌ ಧಾರವಾಡ ಇವರು ಕರ್ನಾಟಕ ಕಾಲೇಜ್ ಸರ್ಕಲ್ ಹತ್ತಿರ ಬಸ್ ನಿಲ್ದಾಣ ನಿರ್ಮಾಣ-dwd

ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿ ಪ್ಲಾನ್ ಅನ್ವಯ ರೋಟರಿ ಕ್ಲಬ್ ಆಫ್‌ ಸೆವೆನ್ ಹಿಲ್ಸ್‌ ಧಾರವಾಡ ಇವರು ಕರ್ನಾಟಕ ಕಾಲೇಜ್ ಸರ್ಕಲ್ ಹತ್ತಿರ ಬಸ್ ನಿಲ್ದಾಣ ನಿರ್ಮಾಣ-dwd

ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿ ಪ್ಲಾನ್ ಅನ್ವಯ ರೋಟರಿ ಕ್ಲಬ್ ಆಫ್‌ ಸೆವೆನ್ ಹಿಲ್ಸ್‌ ಧಾರವಾಡ ಇವರು ಕರ್ನಾಟಕ ಕಾಲೇಜ್ ಸರ್ಕಲ್ ಹತ್ತಿರ ಬಸ್ ನಿಲ್ದಾಣವನ್ನು ನಿರ್ಮಿಸಿದ್ದಾರೆ.

     ಈ ನಿಲ್ದಾಣವನ್ನು ದಿ:೧೫/೦೯/೨೦೨೧ ರಂದು ಜಿಲ್ಲಾಧಿಕಾರಿ ಶ್ರೀ  ನಿತೇಶ ಪಾಟೀಲ್ ಹಾಗೂ ಹುಧಾಮಪಾ ಕಮಿಷನರ್ ಶ್ರೀ ಸುರೇಶ ಇಟ್ನಾಳ ಅವರು ಉದ್ಘಾಟಿಸಿದರು. 
     ಇಲ್ಲಿ ಬಸ್ ನಿಲ್ದಾಣ ಇಲ್ಲದೇ ಮಳೆಗಾಲ  ಬಿಸಿಗಾಲದಲ್ಲಿ ಜನ ಪರದಾಡುವಂತಾಗಿತ್ತು. ಜನರಿಗೆ ಅನುಕೂಲವಾಗಲೆಂದು ಜೆಕೆ ಸಿಮೆಂಟ್ ನವರು ಇದನ್ನು ನಿರ್ಮಾಣಮಾಡಿದ್ದು ಕಂಪೆನಿಯ ಸಿ.ಎಸ್.ಆರ್ ಹಣದಿಂದ ಈ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು, ಕಂಪೆನಿಯ ರಾಜ್ಯ ಮುಖ್ಯಸ್ಥರಾಗಿರುವ ಶ್ರೀ  ಮಹೇಶ ಮದಲಭಾವಿ ಅವರು ಉಪಸ್ಥಿತರಿದ್ದರು .

     ರೋಟರಿ ಕ್ಲಬ್‌ ಆಫ್‌ ಸೆವೆನ್ ಹಿಲ್ಸ್‌ ಧಾರವಾಡದ ಅಧ್ಯಕ್ಷರಾದ ಡಾ॥ ಪಲ್ಲವಿ ದೇಶಪಾಂಡೆಯವರು ಮಾತನಾಡಿ, ಧಾರವಾಡ ದ ಸರ್ವಾಂಗೀಣ ಅಭಿವೃದ್ಧಿ ಗಾಗಿ ರೋಟರಿ ಯಾವಾಗಲೂ ಕೆಲಸಮಾಡುತ್ತಾ ಬಂದಿದೆ, ಮುಂದೆಯೂ ಮಾಡುತ್ತೇವೆ ಎಂದರು. ಇನ್ನೊಂದು ಬಸ್ ನಿಲ್ದಾಣ  ಜೆಕೆ ಸಿಮೆಂಟ್ ಅವರ ನಿರ್ಮಾಣದಲ್ಲಿ  ಜುಬಿಲಿ ಸರ್ಕಲ್ ಹತ್ತಿರ ಬರಲಿದ್ದು ಹುಧಾಮಪಾ ಯವರಿಂದ ಅನುಮೋದನೆಯೂ ದೊರಕಿದೆ. ಧಾರವಾಡದಲ್ಲಿ ಇದೊಂದು ಒಳ್ಳೆಯ ಅಭಿಯಾನವಾಗಿದ್ದು ಭವಿಷ್ಯದಲ್ಲಿ ರೋಟರಿ ಇನ್ನೂ ಒಳ್ಳೆಯ ಯೋಜನೆಗಳೊಂದಿಗೆ ಬರಲಿದೆ ಎಂದರು.

     ರೋಟರಿ ಕ್ಲಬ್‌ ಆಫ್‌  ಸೆವೆನ್ ಹಿಲ್ಸ್‌  ನ ಕಾರ್ಯದರ್ಶಿ ಗೌರಿ ಮಹೇಶ , ಅಸಿಸ್ಟೆಂಟ್ ಗವರ್ನರ್  ಡಾ ಕವನ್ ದೇಶಪಾಂಡೆ , ಪಿಡಿಜಿ ಗಳಾದ ಡಾ ರಾಜನ್ ದೇಶಪಾಂಡೆ ಹಾಗೂ ಗಣೇಶ ಭಟ್ ,ಡಿಸಿಸಿ ಕಿರಣ್ ಹಿರೇಮಠ ಹಾಗೂ ರೋಟರಿ ಕ್ಲಬ್ ಆಫ್‌ ಸೆವೆನ್ ಹಿಲ್ಸ್‌  ನ ಸದಸ್ಯರು ‍ ಉಪಸ್ಥಿತರಿದ್ದರು.ವರದಿ:ರಘು ನರಗುಂದ

0 Response to "ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿ ಪ್ಲಾನ್ ಅನ್ವಯ ರೋಟರಿ ಕ್ಲಬ್ ಆಫ್‌ ಸೆವೆನ್ ಹಿಲ್ಸ್‌ ಧಾರವಾಡ ಇವರು ಕರ್ನಾಟಕ ಕಾಲೇಜ್ ಸರ್ಕಲ್ ಹತ್ತಿರ ಬಸ್ ನಿಲ್ದಾಣ ನಿರ್ಮಾಣ-dwd"

Post a Comment

Article Top Ads

Central Ads Article 1

Middle Ads Article 2

Article Bottom Ads