-->
ಅತ್ಯಾಚಾರ ಮಾಡಿ ಕೊಲೆಗೈದಿರುವಘಟನೆಗಳ ವಿರುದ್ಧ ಅಂಜುಮನ್-ಎ-ಇಸ್ಲಾಂ, ಧಾರವಾಡ ಸಂಸ್ಥೆ ಜಿಲ್ಲಾಧಿಕಾರಿಗಳಿಗೆ ಮನವಿ-dwd

ಅತ್ಯಾಚಾರ ಮಾಡಿ ಕೊಲೆಗೈದಿರುವಘಟನೆಗಳ ವಿರುದ್ಧ ಅಂಜುಮನ್-ಎ-ಇಸ್ಲಾಂ, ಧಾರವಾಡ ಸಂಸ್ಥೆ ಜಿಲ್ಲಾಧಿಕಾರಿಗಳಿಗೆ ಮನವಿ-dwd

 ಮೈಸೂರು, ದೆಹಲಿ, ಮುಂಬಯಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದಿರುವ
ಘಟನೆಗಳ ವಿರುದ್ಧ ಅಂಜುಮನ್-ಎ-ಇಸ್ಲಾಂ, ಧಾರವಾಡ ಸಂಸ್ಥೆ, ಸಮಸ್ತ ಮುಸ್ಲಿಂ ಸಮುದಾಯ
ಹಾಗೂ ಶಹರದ ಸರ್ವಧರ್ಮಿಯರಿಂದ ಖಂಡನೆ.

 ಮೈಸೂರಿನಲ್ಲಿ ಬಾಲಕಿಯ ಮೇಲೆ ಸಾಮೂಹಿ ಅತ್ಯಾಚಾರದಂತ ಕಹಿ
ಘಟನೆ ಇನ್ನೂ ಹಸಿಯಾಗಿರುವಾಗಲೇ ದೆಹಲಿಯಲ್ಲಿ ಮಹಿಳಾ ನಾಗರಿಕ ರಕ್ಷಣಾ ಅಧಿಕಾರಿಯ ಮೇಲೆ ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆಗೈದಿರುವಂತಹ ಘಟನೆ ನಡೆದಿದೆ. ಆ ಭೀಕರ ಘಟನೆಯ ತನಿಖೆ ನಡೆದಿರುವ ಈ ಸಮಯದಲ್ಲೇ ಮುಂಬಯಿಯಲ್ಲಿ ಮತ್ತೇ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವಿಯ ಘಟನೆ ನಡೆದಿದ್ದು, ದೇಶವನ್ನೇ ತಲ್ಲಣಗೊಳಿಸಿದೆ.ದೇಶದಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದು, ಮಹಿಳೆಯರು ಸ್ವಾತಂತ್ರವಾಗಿ ಬದುಕುವುದು ಅಸಾದ್ಯವೆಂಬ ಕಠಿಣ ಪರಿಸ್ಥಿತಿ ಉದ್ಭವವಾಗಿದೆ.
ಅಂಜುಮನ್-ಎ-ಇಸ್ಲಾಂ, ಸಂಸ್ಥೆ ಮತ್ತು ಧಾರವಾಡದ ಸಮಸ್ತ ಮುಸ್ಲಿಂ ಸಮುದಾಯ ಮಾತ್ರವಲ್ಲದೆ
ಸರ್ವಧರ್ಮೀಯರು ಅಮಾನವೀಯ ಘಟನೆಗಳನ್ನು ತೀವ್ರವಾಗಿ ಖಂಡಿಸಿ, ಇಂತಹ ಕೃತ್ಯಗೆ
ಕಾರಣರಾದವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ದೇಶದಲ್ಲಿ
ಮಹಿಳೆಯರ ಸುರಕ್ಷತೆಯು ಗಂಭೀರ ಸಮಸ್ಯೆಯಾಗಿದ್ದು ಸರಕಾರಗಳು ಮೂಕ ಪ್ರೇಕ್ಷಕರಾಗುತ್ತಿವೆ ಹಾಗೂ ಕಾನೂನು ವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗಿವೆ. ನೈಜ ಅಪರಾಧಿಗಳನ್ನು ರಕ್ಷಿಸಲು ಕೆಲವು ಕಾಣದ ಕೈಗಳು ತೀವ್ರ ಪ್ರಯತ್ನ ನಡೆಸುತ್ತಿದ್ದು, ಈ ಘಟನೆಗಳ ತನಿಖೆ ನಿಧಾನ ಗತಿಯಲ್ಲಿ ಸಾಗಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ನಾಗರಿಕ ರಕ್ಷಣಾ ಅಧಿಕಾರಿಯಾದಂತ ಮಹಿಳೆಯ ಮೇಲೆಯೇ
ಅಮಾನವೀಯ ಕೃತ್ಯ ನಡೆದಿದ್ದು, ಇನ್ನು ದೇಶದಲ್ಲಿ ಸಾಮಾನ್ಯ ಮಹಿಳೆಯರ ರಕ್ಷಣೆ ಹೇಗೆ ಎಂಬುದು ಯಕ್ಷ
ಪ್ರಶ್ನೆಯಾಗಿದೆ. ಆದ್ದರಿಂದ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ
ವಿಧಿಸಬೇಕೆಂದು ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳಕಳಿಯ ವಿನಂತಿ ಮಾಡಿದರು.ವರದಿ:
ರಘು ನರಗುಂದ

0 Response to "ಅತ್ಯಾಚಾರ ಮಾಡಿ ಕೊಲೆಗೈದಿರುವಘಟನೆಗಳ ವಿರುದ್ಧ ಅಂಜುಮನ್-ಎ-ಇಸ್ಲಾಂ, ಧಾರವಾಡ ಸಂಸ್ಥೆ ಜಿಲ್ಲಾಧಿಕಾರಿಗಳಿಗೆ ಮನವಿ-dwd"

Post a Comment

Article Top Ads

Central Ads Article 1

Middle Ads Article 2

Article Bottom Ads