-->
ವಿಕಲ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ : ಎನ್.ಕೆ ಸಾವಕಾರ-Dharwad

ವಿಕಲ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ : ಎನ್.ಕೆ ಸಾವಕಾರ-Dharwad

ವಿಕಲ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ : ಎನ್.ಕೆ ಸಾವಕಾರ

ಧಾರವಾಡ  ಸೆ.09: ಸುಸ್ಥಿರ ಭಾರತ ನಿರ್ಮಾಣದಲ್ಲಿ ವಿಕಲ ಚೇತನರಿಗಾಗಿ ಕಾರ್ಯ ಮಾಡುತ್ತಿರುವವರು ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಅವರ ಕೆಲಸ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎನ್.ಕೆ.ಸಾವಕಾರ ತಿಳಿಸಿದರು. 
 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಮಾನಸಿಕ ಮತ್ತು ನರ ವಿಜ್ಞಾನ ಸಂಸ್ಥೆ, ಜನಮುಖಿ ಸ್ವಯಂ ಸೇವಾ ಸಂಸ್ಥೆ, ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ ಒಂದು ದಿನದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 ವಿಕಲಚೇತನ ಮಕ್ಕಳ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಲು ಅವರ ಕುಟುಂಬ ಸದಸ್ಯರೊಂದಿಗೆ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ. ವಿಕಲಚೇತನರ ಶ್ರೆಯೋಭಿವೃದ್ಧಿಗಾಗಿ ಸರ್ಕಾರ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
         ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಮಹೇಶ ದೇಸಾಯಿ ಅವರು ಮಾತನಾಡಿದರು. ಇಂಡಸ್ ಇಂಡ್ ಬ್ಯಾಂಕಿನವರು ನೀಡಿದ ಆಹಾರದ ದಿನಸಿ ಕಿಟ್‍ಗಳನ್ನು ವಿಕಲಚೇತನ ಮಕ್ಕಳಿಗೆ ವಿತರಣೆ ಮಾಡಲಾಯಿತು. ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
  ಜನಮುಖಿ ಸಂಸ್ಥೆಯ ಬಸವರಾಜ ಮ್ಯಾಗೇರಿ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಕೀರ್ತಿವತಿ ಪ್ರಾಸ್ತವಿಕವಾಗಿ ಮಾತನಾಡಿದರು. ಲಲಿತಾ ಹೊನವಾಡ ಸ್ವಾಗತಿಸಿದರು. ಸಿದ್ದು ವಾರದ ಕಾರ್ಯಕ್ರಮ ನಿರೂಪಿಸಿದರು.


ವರದಿ:
ರಘು ನರಗುಂದ

0 Response to "ವಿಕಲ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ : ಎನ್.ಕೆ ಸಾವಕಾರ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads