-->
ಅಣ್ಣಿಗೇರಿ ಪುರಸಭೆಗೆ ಕರಡು ವಾರ್ಡ್‍ವಾರು ಮೀಸಲಾತಿ ಪ್ರಕಟ-Dharwad

ಅಣ್ಣಿಗೇರಿ ಪುರಸಭೆಗೆ ಕರಡು ವಾರ್ಡ್‍ವಾರು ಮೀಸಲಾತಿ ಪ್ರಕಟ-Dharwad

ಅಣ್ಣಿಗೇರಿ ಪುರಸಭೆಗೆ ಕರಡು ವಾರ್ಡ್‍ವಾರು ಮೀಸಲಾತಿ ಪ್ರಕಟ

ಧಾರವಾಡ  ಸೆ.07: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆಗೆ ಸರ್ಕಾರವು 2011 ರ ಜನಗಣತಿಯನ್ನಾಧರಿಸಿ ವಾರ್ಡ್‍ಗಳಿಗೆ ಮಿಸಲಾತಿಯನ್ನು ನಿಗದಿಪಡಿಸಿ ಕರಡು ವಾರ್ಡ್‍ವಾರು ಮೀಸಲಾತಿಯ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.

 ಈ ಅಧಿಸೂಚನೆ ಕುರಿತು 07 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ಸೆಪ್ಟೆಂಬರ್ 13, 2021 ರೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಧಾರವಾಡ ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ. 

ಕರಡು ವಾರ್ಡ್‍ವಾರು ಮೀಸಲಾತಿಯ ವಿವರ: ವಾರ್ಡ್ 1-ಸಾಮಾನ್ಯ, ವಾರ್ಡ್ 2-ಹಿಂದುಳಿದ ವರ್ಗ ‘ಎ’ (ಮಹಿಳೆ), ವಾರ್ಡ್ 3- ಹಿಂದುಳಿದ ವರ್ಗ ‘ಬಿ’ (ಮಹಿಳೆ), ವಾರ್ಡ್ 4-ಸಾಮಾನ್ಯ, ವಾರ್ಡ್ 5- ಹಿಂದುಳಿದ ವರ್ಗ ‘ಎ’, ವಾರ್ಡ್ 6 - ಸಾಮಾನ್ಯ (ಮಹಿಳೆ), ವಾರ್ಡ್ 7-ಹಿಂದುಳಿದ ವರ್ಗ ಬಿ, ವಾರ್ಡ್ 8- ಹಿಂದುಳಿದ ವರ್ಗ ‘ಎ’ (ಮಹಿಳೆ), ವಾರ್ಡ್ 9- ಸಾಮಾನ್ಯ, ವಾರ್ಡ್ 10 -ಸಾಮಾನ್ಯ (ಮಹಿಳೆ), ವಾರ್ಡ್ 11- ಹಿಂದುಳಿದ ವರ್ಗ ‘ಎ’, ವಾರ್ಡ್ 12- ಸಾಮಾನ್ಯ ಮಹಿಳೆ, ವಾರ್ಡ್ 13- ಹಿಂದುಳಿದ ವರ್ಗ ‘ಎ’ (ಮಹಿಳೆ), ವಾರ್ಡ್ 14-ಸಾಮಾನ್ಯ, ವಾರ್ಡ್ 15-ಸಾಮಾನ್ಯ, ವಾರ್ಡ್ 16-ಪರಿಶಿಷ್ಟ ಪಂಗಡ, ವಾರ್ಡ್ 17- ಹಿಂದುಳಿದ ವರ್ಗ ‘ಎ’, ವಾರ್ಡ್ 18 -ಸಾಮಾನ್ಯ, ವಾರ್ಡ್ 19- ಪರಿಶಿಷ್ಟ ಜಾತಿ, ವಾರ್ಡ್ 20-ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 21- ಸಾಮಾನ್ಯ (ಮಹಿಳೆ), ವಾರ್ಡ್ 22- ಸಾಮಾನ್ಯ (ಮಹಿಳೆ), ವಾರ್ಡ್ 23- ಸಾಮಾನ್ಯ (ಮಹಿಳೆ).ವರದಿ:
ರಘು ನರಗುಂದ

0 Response to "ಅಣ್ಣಿಗೇರಿ ಪುರಸಭೆಗೆ ಕರಡು ವಾರ್ಡ್‍ವಾರು ಮೀಸಲಾತಿ ಪ್ರಕಟ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads