
ವಿವಿಧೆಡೆ ವಿಶ್ವ ಆಲ್ಜೈಮರ್ ಕಾಯಿಲೆ ಜಾಗೃತಿ ಕಾರ್ಯಕ್ರಮ-Dharwad
Thursday, September 23, 2021
Comment
ವಿವಿಧೆಡೆ ವಿಶ್ವ ಆಲ್ಜೈಮರ್ ಕಾಯಿಲೆ ಜಾಗೃತಿ ಕಾರ್ಯಕ್ರಮ
ಧಾರವಾಡ (ಕರ್ನಾಟಕ ವಾರ್ತೆ) ಸೆ.23: ಇಲ್ಲಿನ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) “ವಿಶ್ವ ಆಲ್ಜೈಮರ್ ಕಾಯಿಲೆ ದಿನಾಚರಣೆ” ಅಂಗವಾಗಿ ಧಾರವಾಡ ಹಾಗೂ ನವಲಗುಂದದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತು.
ಡಿಮ್ಹಾನ್ಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರರೋಗ ತಜ್ಞ ಡಾ. ಪ್ರದೀಪ ಕಲ್ಲೋಳಿಮಠ ಮಾತನಾಡಿ, ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಹೃದಯದ ಆರೋಗ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಮಿದುಳಿನ ಆರೋಗ್ಯಕ್ಕೂ ನೀಡಬೇಕು. ಆಗ ಮಾತ್ರ ಆಲ್ಜೈಮರ್ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿ ತಡೆಯಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಮಾತನಾಡಿ, ಡಿಮ್ಹಾನ್ಸ್ನಲ್ಲಿ ಈವರೆಗೆ ನರರೋಗದ ಚಿಕಿತ್ಸೆ ಕೇವಲ ಹೊರರೋಗಿ ವಿಭಾಗದಲ್ಲಿ ಮಾತ್ರ ದೊರೆಯುತ್ತಿತ್ತು. ಇನ್ನು ಮುಂದೆ ಒಳರೋಗಿ ವಿಭಾಗದಲ್ಲಿ 10 ಹಾಸಿಗೆಗಳನ್ನು ಮೀಸಲಿಡಲಾಗುವುದು ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ ಕೋಸಗಿ, ಸೀನಿಯರ್ ರೆಸಿಡೆಂಟ್ ಡಾ.ರಾಘವೇಂದ್ರ ಪಾಟೀಲ, ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಹಾಯ ಪ್ರಾಧ್ಯಾಪಕ ಬಿ.ಜಿ.ಅನಂತರಾಮು ವೇದಿಕೆಯಲ್ಲಿದ್ದರು.
ಮಹಿಷಿ ಟ್ರಸ್ಟ್, ವೃದ್ಧಾಶ್ರಮ, ರೋಟರಿ ಕ್ಲಬ್ ಹಾಗೂ ಡಿಮ್ಹಾನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಜಾಗೃತಿ ಕಾರ್ಯಕ್ರಮ ಹಾಗೂ ಡಾ.ಸುನಂದಾ ಜಿ.ಟಿ.ಅವರಿಂದ ಉಪನ್ಯಾಸ ಜರುಗಿದವು. ಡಾ.ಸತೀಶ ಕೌಜಲಗಿ ಕಾರ್ಯಕ್ರಮ ನಿರೂಪಿಸಿದರು.
ನವಲಗುಂದ ಕಾರ್ಯಕ್ರಮ: ಡಿಮ್ಹಾನ್ಸ್ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ ಭಜಂತ್ರಿ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಅಶೋಕ ಕೋರಿ, ನಸಿರ್ಂಗ್ ವಿದ್ಯಾರ್ಥಿ ಪ್ರಶಾಂತ ಬೇವೂರು, ಮನಃಶಾಸ್ತ್ರ ವಿದ್ಯಾರ್ಥಿನಿ ಸಿಂಧು ಇವರು ನವಲಗುಂದ ಸರಕಾರಿ ಆಸ್ಪತ್ರೆಗೆ ತೆರಳಿ ಮಾನಸಿಕ ರೋಗಿಗಳಿಗೆ ಮಾನಸಿಕ ವೈದ್ಯಕೀಯ ತಪಾಸಣೆ ಯನ್ನು ಮಾಡಿದರು. ಕೆಲವು ರೋಗಿಗಳಿಗೆ ಆಪ್ತಸಮಾಲೋಚನೆ ನಡೆಸಿದರು. ತದನಂತರದಲ್ಲಿ ನವಲಗುಂದ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡದವರೊಂದಿಗೆ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ರೇಖಾ,ಡಾ.ಕೃತಿಕಾ, ಡಾ.ದಿಕ್ಷೀತ್, ಡಾ.ಪ್ರಭಾ, ಡಾ.ಜ್ಯೋತಿ, ಡಾ.ರೂಪಾ, ಡಾ.ಕಶ್ಯಪ್, ಕುಮಾರಿ ಸಿಂಧು, ಹಿರಿಯ ಶೂಶ್ರೂಷಕ ಸಿಬ್ಬಂದಿಯವರು, ನಸಿರ್ಂಗ್ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು. ಕಾರ್ಯಕ್ರಮವನ್ನು ಅಶೋಕ ಕೋರಿ ನಿರೂಪಿಸಿದರು. ಪ್ರಶಾಂತ ಬೇವೂರು ವಂದಿಸಿದರು.
DIPR Dharwad
0 Response to "ವಿವಿಧೆಡೆ ವಿಶ್ವ ಆಲ್ಜೈಮರ್ ಕಾಯಿಲೆ ಜಾಗೃತಿ ಕಾರ್ಯಕ್ರಮ-Dharwad"
Post a Comment