-->
ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನೂ ಕೊಡಲು ಕರವೇ ಆಗ್ರಹ-dharwad

ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನೂ ಕೊಡಲು ಕರವೇ ಆಗ್ರಹ-dharwad


ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ
ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನೂ ಕೊಡಲು ಒತ್ತಾಯಿಸುವ ಅಗ್ರಹಪತ್ರ.

ಭಾರತ ಒಕ್ಕೂಟ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ 14 ರಂದು ನಮ್ಮ ತೆರಿಗೆ ಹಣದಲ್ಲಿ 'ಹಿಂದಿ ದಿವಸ'
ಆಚರಣೆ ನಡೆಸುತ್ತ ಬಂದಿದೆ. ಕೇವಲ ಹಿಂದಿ ದಿವಸವೊಂದನ್ನು ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಆಡೆಗಣಿಸಿ, ಹಿಂದಿಯೊಂದನ್ನೇ ಪ್ರತಿವರ್ಷ ಮೆರೆಸುತ್ತಿದೆ.
ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಇದನ್ನು
ಕಳೆದ ಇಪ್ಪತ್ತು ವರ್ಷಗಳಿಂದ ತೀವ್ರವಾಗಿ ವಿರೋಧಿಸುತ್ತ ಬಂದಿದೆ. ಈ ವರ್ಷವೂ ಸಹ ಸೆಪ್ಟೆಂಬರ್ 14 ರಂದು ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಹಳ್ಳಿಗಳಲ್ಲಿ ಎಲ್ಲ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮುಂಭಾಗ ಸಾವಿರಾರು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ತಮ್ಮ ಬ್ಯಾಂಕ್ ಮುಂದೆಯೂ ಪ್ರತಿಭಟನೆ ನಡೆಸುತ್ತಿದ್ದೆವು. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕ ಪ್ರಕರಣಗಳು ಇತ್ತೀಚಿನ ದಿನದಲ್ಲಿ ಅನೇಕ ಕಡೆಗಳಲ್ಲಿ ಕೇಳಿಬರುತ್ತಿದೆ.
ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತಿದೆ. 'ಹಿಂದಿ ಹೇರಿಕೆ'ಯ
ಅನ್ಯಾಯಗಳನ್ನು, ಗ್ರಾಹಕರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿತು.

 ಹಕ್ಕೊತ್ತಾಯಗಳು:
ಬ್ಯಾಂಕಿನ ಎಲ್ಲಾ ಸೇವೆಗಳನ್ನೂ ಕನ್ನಡದಲ್ಲೇ ನೀಡಬೇಕು. ಕನ್ನಡದಲ್ಲೇ ಬ್ಯಾಂಕಿನಲ್ಲಿ ವ್ಯವಹಾರ
ನಡೆಸಲು ಸುಲಭವಾಗುವಂತೆ ಕರ್ನಾಟಕದವರನ್ನೇ ಬ್ಯಾಂಕಿನ ಉದ್ಯೋಗಿಗಳನ್ನಾಗಿ ನೇಮಿಸಬೇಕು.
2. ಕನ್ನಡ ಬಾರದ ಸಿಬ್ಬಂದಿಗಳನ್ನು ಈ ಕೂಡಲೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು.
ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಲಭಿಸಬೇಕು.
3, ಜೇನ್ ಗಳು, ಖಾತೆ ಪುಸ್ತಕ, ಚೆಕ್ ಮತ್ತು ಎಲ್ಲಾ ಅರ್ಜಿ ನಮೂನೆಗಳೂ ಕನ್ನಡದಲ್ಲಿ ಲಭ್ಯವಿರುವಂತೆ
ನೋತಿ ಶಿಕೊಳ್ಳಬೇಕು.
ಆವಕ ಗುಮಾಸ್ತ ಹಿಂದಿ ವಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಭಾಷಾ ಒಕ್ಕೂಟ ವಿರೋಧಿ ಆಚರಣೆಗಳನ್ನು
ಇಲ್ಲಾಧಿಕಾರಿಗಳ ಕಚೇರಿ ಕೂಡಲೇ ನಿಲ್ಲಿಸಬೇಕು. ಇನ್ನು ಮುಂದೆ ಈ ಆಚರಣೆಗಳು ನಮ್ಮ ಬ್ಯಾಂಕ್ ನಲ್ಲಿ ನಡೆಯಬಾರದು.
ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ. 60 ರಷ್ಟು ಭಾಗ ಕನ್ನಡ ಭಾಷೆಯನ್ನೇ
ಬಳಸಲಿ). ಎಂದು ಮನವಿ ಸಲ್ಲಿಸಿದರು.
ರುದ್ರೇಶ್ ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ..ರೆಹಮಾನ ಹೊಳೆ,ರಾಜ್ಯ ಸಂಘಟನಾ ಕಾರ್ಯದರ್ಶಿ
ಘಟಕ,ಪಾಪು ಧಾರೆ ರೈತ ಘಟಕ ಜಿಲ್ಲಾಧ್ಯಕ್ಷರು,
ಸೈಯದ್ ಎ.ಎಂ.ಸಂಸ್ಕೃತಿ ಘಟಕ. ಜಿಲ್ಲಾಧ್ಯಕ್ಷರು,
ಧಾರವಾಡ,ಪ್ರಭು ಕುಂಬಾರ ತಾಲೂಕಾ ಅಧ್ಯಕ್ಷರು ಅಳ್ಳಾವರಿ ಭೀಮಶಿ ಸೋಗಲದ,ತಾಲೂಕಾ ಅಧ್ಯಕ್ಷರು ರೈತ ಘಟಕ,ಗಾಂವಾಡಿ ,ಮಹಿಳಾ ತಾಲೂಕಾ ಅಧ್ಯಕ್ಷರು,ಧಾರವಾಡ, ಮಲ್ಲಿಕಲಿಯಾದ ಕಂಬಾರಗಣವಿ ಕರವೇ ಮುಖಂಡರು, ಧಾರವಾಡ
ಹನುಮಂತ ಸತ್ಯಣ್ಣವರ,ಯುವ ಘಟಕ ಅಧ್ಯಕ್ಷರು ಅಳ್ಳಾವರ ಅಬ್ಬಾಕೆ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.


ವರದಿ: ರಘು ನರಗುಂದ

0 Response to "ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನೂ ಕೊಡಲು ಕರವೇ ಆಗ್ರಹ-dharwad"

Post a Comment

Article Top Ads

Central Ads Article 1

Middle Ads Article 2

Article Bottom Ads