
ಕಲಘಟಗಿ ತಾಲೂಕ ಪ್ರಥಮ ರೈತ ಕೃಷಿಕಾರ್ಮಿಕರ ಸಮ್ಮೇಳನ_Dharwad
Sunday, September 12, 2021
Comment
ರೈತ- ಕೃಷಿಕಾರ್ಮಿಕರ ಸಂಘಟನೆ
ಆರ್ ಕೆ ಎಸ್ (ಎಐಕೆಕೆಎಂಎಸ್)
ಕಲಘಟಗಿ ತಾಲೂಕ ಸಮಿತಿ.
ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಕಲಘಟಗಿ ತಾಲೂಕ ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಇಂದು ಹಿರೇಹೊನ್ನಳ್ಳಿ ಗ್ರಾಮದಲ್ಲಿ ಕಲಘಟಗಿ ತಾಲೂಕ ಪ್ರಥಮ ರೈತ ಕೃಷಿಕಾರ್ಮಿಕರ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
ಸಮ್ಮೇಳನದಲ್ಲಿ ನೂತನ ತಾಲೂಕ ಸಮಿತಿ ಆಯ್ಕೆ ಮಾಡಲಾಯಿತು.
ನೂತನ ತಾಲೂಕ ಸಮಿತಿಯ ಅಧ್ಯಕ್ಷರಾಗಿ ಅಲ್ಲಾವುದ್ದಿನ ಅಡ್ಲಿ,
ಉಪಾಧ್ಯಕ್ಷರಾಗಿ ಪುಂಡಲಿಕಪ್ಪ ರೇವಡಿಹಾಳ,
ಈಶ್ವರ್ ನಾಡಗೇರ್.
ಕಾರ್ಯದರ್ಶಿಯಾಗಿ ಕಲ್ಲಪ್ಪ ರಾಮನಾಳ
ಜಂಟಿ ಕಾರ್ಯದರ್ಶಿಯಾಗಿ ಮಹಾವೀರ ಧೂಳಿಕೊಪ್ಪ,ಶಿವಲಿಂಗಪ್ಪ ಉಣಕಲ್ ಸೇರಿದಂತೆ 40 ಜನರ ತಾಲೂಕ ಸಮಿತಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಮ್ಮೇಳನದಲ್ಲಿ ಕಲಘಟಗಿ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಕೈಬಿಡಬೇಕು,ಬಂಡಾರ ರೋಗದಿಂದ ನಾಶವಾದ ಸೋಯಾಬಿನ್ ಬೆಳೆಗೆ ಬೆಳೆ ಹಾನಿ ನೀಡಬೇಕು,ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು , ವಿಷಯಗಳ ಮೇಲೆ ಸಮ್ಮೇಳನವು ಗೊತ್ತುವಳಿಗಳನ್ನು ಅಂಗೀಕರಿಸಿತು.
ಸಮ್ಮೇಳನಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ನ ರಾಜ್ಯ ಖಜಾಂಚಿ ಗಳಾದ ವಿ ನಾಗಮ್ಮಾಳ ಮಾತನಾಡಿ ಇಂದು ದೇಶದಾದ್ಯಂತ ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ತೀವ್ರವಾಗುತ್ತಿದೆ.ಆದರೆ ಕಾರ್ಪೊರೇಟ್ ಪರವಾದ ಸರ್ಕಾರಗಳು,ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು,ಕಾರ್ಪೋರೇಟ್ ಕಂಪನಿಗಳ ಹಿತಾಹಸಕ್ತಿಯನ್ನು ಕಾಪಾಡುತ್ತೇವೆ ಎಂದು ಆರೋಪಿಸಿದರು.ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತರು ಒಂದಾಗಿ ಹೋರಾಟ ಮಾಡುವುದು ಒಂದೇ ನಿಜವಾದ ದಾರಿ,ಎಲ್ಲಾ ಪಕ್ಷಗಳು ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದು ರೈತರಿಗೆ ಬೆನ್ನಿಗೆ ಚೂರಿ ಹಾಕಿವೆ ಇದನ್ನು ಅರಿತು ರೈತರು ತಮ್ಮ ಸಂಘಟನೆಯನ್ನು ಬಲಗೊಳಿಸಲು ಕರೆ ನೀಡಿದರು.
ಇದೇ ತಿಂಗಳು 27ರಂದು ಅಖಿಲ ಭಾರತ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿವೆ,ನಮ್ಮ ಸಂಘಟನೆಯೂ ಮುಂಚೂಣಿಯಲ್ಲಿ ಬಂದ್ ಯಶಸ್ವಿಗೊಳಿಸಲು ಸನ್ನದ್ಧವಾಗಿದೆ ಎಂದರು.
ಕಲಘಟಗಿ ತಾಲೂಕಿನ ಪ್ರಥಮ ರೈತ ಕೃಷಿ ಕಾರ್ಮಿಕರ ಸಮ್ಮೇಳನವು ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಕೈಬಿಡಲು,ಸೋಯಾಬಿನ್ ಬೆಳೆಗೆ ಬೆಳೆನಷ್ಟ ನೀಡಲು ಒತ್ತಾಯಿಸಿ ರೈತ ಹೋರಾಟವನ್ನು ಮುನ್ನಡೆಸುವ ದಾಗಿ ಸಮ್ಮೇಳನವು ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಸಮ್ಮೇಳನಕ್ಕೆ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗಣ್ಣ ನವರ ,ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಉಪಸ್ಥಿತರಿದ್ದರು.
ವರದಿ:
ರಘು ನರಗುಂದ
0 Response to "ಕಲಘಟಗಿ ತಾಲೂಕ ಪ್ರಥಮ ರೈತ ಕೃಷಿಕಾರ್ಮಿಕರ ಸಮ್ಮೇಳನ_Dharwad"
Post a Comment