-->
ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಮಾನುಷವಾಗಿ ಲಾಠಿಛಾರ್ಜ್ ನಡೆಸಿರುವ ಹರಿಯಾಣ ರಾಜ್ಯದ ಸರ್ಕಾರದ ಹೇಡಿತನವನ್ನು ಖಂಡಿಸಿ ಪ್ರತಿಭಟನೆ-Dharwad

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಮಾನುಷವಾಗಿ ಲಾಠಿಛಾರ್ಜ್ ನಡೆಸಿರುವ ಹರಿಯಾಣ ರಾಜ್ಯದ ಸರ್ಕಾರದ ಹೇಡಿತನವನ್ನು ಖಂಡಿಸಿ ಪ್ರತಿಭಟನೆ-Dharwad

ಹರಿಯಾಣ ರಾಜ್ಯದ ಕಟ್ಟರ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಮಾನುಷವಾಗಿ ಲಾಠಿಛಾರ್ಜ್ ನಡೆಸಿರುವ ಹರಿಯಾಣ ರಾಜ್ಯದ ಸರ್ಕಾರದ ಹೇಡಿತನವನ್ನು ಖಂಡಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಸೆಂಟರ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಕಮ್ಯುನಿಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
  ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಮಸೂದೆಗಳು ಹಾಗೂ ವಿದ್ಯುತ್ ಚ್ಛಕ್ತಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋದಾಗ ರೈತರ ಮೇಲೆ ಸರ್ಕಾರ ತನ್ನ ದೌರ್ಜನ್ಯವೆಸಗಿದೆ . ಈ ಕೂಡಲೇ ಈ ಘಟನೆಯಲ್ಲಿ ನೊಂದ ಗಾಯಾಳುಗಳಿಗೆ ಸೂಕ್ತ ಪರಿಹಾರ ನೋಡಬೇಕು . ಘಟನೆಯಲ್ಲಿ ನೋದ ರೈತರಿಗೆ ಕೂಡಲೇ ಉಚಿತ ಔಷಧೋಪಚಾರಗಳನ್ನು ಒದಗಿಸಬೇಕು . ಇಡೀ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡು ಶಿಕ್ಷೆ ವಿಧಿಸಬೇಕೆಂದು ರೈತ - ಕೃಷಿಕಾರ್ಮಿಕರ ಸಂಘಟನೆ ( ಆರ್.ಕೆ.ಎಸ್ . ) ಕರ್ನಾಟಕ ರಾಜ್ಯ ಸಮಿತಿಯು ಈ ಮೂಲಕ ಹರಿಯಾಣ ಸರ್ಕಾರವನ್ನು ಒತ್ತಾಯಿಸುತ್ತದೆ . ಕೇಂದ್ರ ಬಿಜೆಪಿ ಸರ್ಕಾರವು ರೈತರ ಪ್ರತಿಭಟನೆಯನ್ನು ಮನಗಂಡು ಎಚ್ಚೆತ್ತುಕೊಂಡು ತನ್ನ ಕಾರ್ಪೋರೇಟ್ ಪರ ನೀತಿಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆರ್.ಕೆ.ಎಸ್ . ಮತ್ತು ಎಸ್ ಯು ಸಿ ಐ ಕಮ್ಯುನಿಸ್ಟ್ ಒತ್ತಾಯಿಸುತ್ತದೆ . ಅಲ್ಲಿಯವರೆಗೆ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕೆಂದು ಕರೆ ನೀಡುತ್ತದೆ . ಈ ಸಂದರ್ಭದಲ್ಲಿ ಗಂಗಾಧರ್ ಬಡಿಗೇರ್, ದೀಪಾ ವಿ, ಹನುಮೇಶ್ ಹುಡೇದ,ಶರಣು ಗೋನ್ವಾರ, ರಮೇಶ್ ಹೊಸಮನಿ, ಮುಂತಾದವರು ಇದ್ದರು.

0 Response to "ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಮಾನುಷವಾಗಿ ಲಾಠಿಛಾರ್ಜ್ ನಡೆಸಿರುವ ಹರಿಯಾಣ ರಾಜ್ಯದ ಸರ್ಕಾರದ ಹೇಡಿತನವನ್ನು ಖಂಡಿಸಿ ಪ್ರತಿಭಟನೆ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads