-->
ಧಾರವಾಡ ಟಾಕೀಸ್ ಗೆ ಶುಭ ಕೋರಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್-Dharwad Talkies

ಧಾರವಾಡ ಟಾಕೀಸ್ ಗೆ ಶುಭ ಕೋರಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್-Dharwad Talkies

ಧಾರವಾಡ ಟಾಕೀಸ್ ಗೆ ಶುಭ ಕೋರಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್

ಸಾವಿರಾರು ಕನಸುಗಳನ್ನು ಹೊತ್ತು ಹಲವಾರು ಪ್ರತಿಭೆಗಳು ಸಿನಿಮಾ ರಂಗದಲ್ಲಿ ಸಾಧನೆ ಮಾಡುವ ಕನಸು ಇನ್ನೇನು ನನಸಾಗುತ್ತೆ ಎಂಬ ಭರವಸೆಯಲ್ಲಿ ಕಲಾವಿದರು ಇದ್ದರು ಆದರೆ ಮಹಾ ಮಾರಿ ಕರೋನಾ ವೈರಸ್ ನಿಂದ ಇಡೀ ಚಿತ್ರರಂಗವೇ ತಲ್ಹಣಗೊಂಡಿತ್ತು, ಸಿನೆಮಾವನ್ನು ನಂಬಿದ್ದ ಹಲವಾರು ಕಲಾವಿದರ ಜೀವನ ಹೇಳತೀರದು.

ಕಲಾವಿದರ ಕೈ ಹಿಡಿದ ಕಿಶೋರ್ ಬಜಾಜ್

ಹಲವಾರು ಸಮಾಜ ಸೇವೆ ಮಾಡುತ್ತಾ ಬಂದ ಪ್ರಕೃತಿ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀ ಕಿಶೋರ್ ಬಜಾಜ್ ರವರು ಕಲಾವಿದರಿಗಾಗಿ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ , *ಧಾರವಾಡ ಟಾಕೀಸ್* ಎಂಬ  OTT ವೇದಿಕೆಯನ್ನು ನಿರ್ಮಿಸಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ.

Register


 ಉತ್ತರ ಕರ್ನಾಟಕದ ಕಲಾವಿದರ ವೇದಿಕೆ: ಧಾರವಾಡ ಟಾಕೀಸ್

ಇಂದು ಸಂಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಂಸ್ಥೆಯ ಹಣಕಾಸಿನ ಮುಖ್ಯಸ್ಥೇ ಮಮತಾ ನರಗುಂದಕರ್ ರವರು ಜಿಲ್ಲಾಧಿಕಾರಿ ಕಛೇರಿಗೆ ಭೇಟಿ ನೀಡಿ, ಧಾರವಾಡ ಟಾಕೀಸ್ ನ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಜಿಲ್ಲಾಧಿಕಾರಿಗಳು ಮಾತಾನಾಡಿ "ಕಲಾವಿದರಿಗಾಗಿ ನೀವು ಮಾಡುತ್ತಿರುವ ಕೆಲಸ ಒಳ್ಳೆಯದಾಗಿದೆ. ಧಾರವಾಡ ಟಾಕೀಸ್ ನಿಂದ ಕಲಾವಿದರ ಜೀವನ ಮತ್ತೆ ಸುಧಾರಿಸುತ್ತದೆ" ಎಂದು ಹೇಳಿದರು.

ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ರವರು ಧಾರವಾಡ ಟಾಕೀಸ್ ಗೆ ಶುಭಾಶಯ ಕೋರಿ, ಅಭಿನಂದನೆ ತಿಳಿಸಿದರು ಎಂದು ಸಂಸ್ಥೆಯ ಹಣಕಾಸಿನ ಮುಖ್ಯಸ್ಥೆ ಮಮತಾ ನರಗುಂದಕರ್ ರವರು ಮಾಹಿತಿ ನೀಡಿದ್ದಾರೆ.

0 Response to "ಧಾರವಾಡ ಟಾಕೀಸ್ ಗೆ ಶುಭ ಕೋರಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್-Dharwad Talkies"

Post a Comment

Article Top Ads

Central Ads Article 1

Middle Ads Article 2

Article Bottom Ads