-->
ಬಾಕಿ ವೇತನ ಬಿಡುಗಡೆ ಮತ್ತು ಎಲ್ಲರನ್ನು ಕೆಲಸದಲ್ಲಿ ಮುಂದುವರೆಸಲು, -ಇಎಸ್‌ಐ ಸೌಲಭ್ಯ ಒದಗಿಸಲು ಆಗ್ರಹ-AIUTUC

ಬಾಕಿ ವೇತನ ಬಿಡುಗಡೆ ಮತ್ತು ಎಲ್ಲರನ್ನು ಕೆಲಸದಲ್ಲಿ ಮುಂದುವರೆಸಲು, -ಇಎಸ್‌ಐ ಸೌಲಭ್ಯ ಒದಗಿಸಲು ಆಗ್ರಹ-AIUTUC

ಬಾಕಿ ವೇತನ ಬಿಡುಗಡೆ ಮತ್ತು ಎಲ್ಲರನ್ನು ಕೆಲಸದಲ್ಲಿ ಮುಂದುವರೆಸಲು, -ಇಎಸ್‌ಐ ಸೌಲಭ್ಯ ಒದಗಿಸಲು ಆಗ್ರಹ-AIUTUC

ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ(ರಿ)ದ ವತಿಯಿಂದ ಇಂದು ಕಾರ್ಮಿಕರನ್ನು ಕೆಲಸದಲ್ಲಿ
ಮುಂದುವರೆಸಲು,ಬಾಕಿ ವೇತನ ಪಾವತಿಸಲು, 2010ರಿಂದ ಪಿಎಫ್, ಇಎಸ್‌ಐ ಗಳ ಕಟಾವಣೆಯ ಮಾಹಿತಿ ನೀಡಲು ಸಮವಸ್ತ್ರ-ಗುರುತಿನ ಚೀಟಿ
ನೀಡಲು,ಪರಿಷ್ಕೃತ ಕನಿಷ್ಟ ವೇತನ ನೀಡಲು ಮುಂತಾದ ಸಮಸ್ಯೆಗಳನ್ನು ಈಡೇರಿಲು ಆಗ್ರಹಿಸಿ ಜಿ.ಪಂ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಗಂಗಾಗಾಧರ ಬಡಿಗೇರ,ಸಮಾಜ ಕಲ್ಯಾಣ, ಹಿಂ.ವ.ಕ ಇಲಾಖೆ ಅಲ್ಪ ಸಂಖ್ಯಾತರ ಕಲ್ಯಾಣ
ಇಲಾಖೆಗಳ ವಸತಿನಿಲಯಗಳು ಹಾಗೂ ಕ್ರೈಸ್ ನಿಂದ ನಡೆಸಲ್ಪಡುತ್ತಿರುವ ವಸತಿ ಶಾಲಾ-ಕಾಲೇಜುಗಳು ಕರೋನಾ 2ನೇ ಅಲೆಯ ನಂತರ
ಪ್ರಾರಂಭವಾದರೂ ಅಲ್ಲಿ ಕಾರ್ಮಿಕರನ್ನು ಹಾಸ್ಟೆಲ್ ಪ್ರಾರಂಭೋತ್ಸವಕ್ಕಾಗಿ ಹಾಸ್ಟೆಲ್‌ಗಳ ಎಲ್ಲ ರೀತಿಯ ಸ್ವಚ್ಚತೆ. ಅಂದ-ಓರಣಗೊಳಿಸಲು ಬಳಸಿಕೊಂಡು
ಈವರೆಗೂ ವೇತನ ಪಾವತಿ ಮಾಡಿಲ್ಲ. ಕೆಲವೆಡೆ ವಿದ್ಯಾರ್ಥಿಗಳ ಸಂಪೂರ್ಣ ಸಂಖ್ಯಾಬಲ ಬಂದಿಲ್ಲವೆಂಬ ನೆಪ ಹೇಳಿ ಕಾರ್ಮಿಕರನ್ನು ಕೆಲಸದಿಂದ
ವಂಚಿತರನ್ನಾಗಿಸಲಾಗಿದೆ. ಎಲ್ಲರಿಗೂ ಪರಿಷ್ಕೃತ ಕನಿಷ್ಟ ವೇತನವನ್ನು ಖಾತ್ರಿ ಮಾಡಬೇಕಾಗಿದೆ. ಕರೋನಾ ಮಹಾಮಾರಿಯಿಂದಾಗಿ ದುಡಿಯುವ ಜನತೆ
ತೀವ್ರ ಸಂಕಷ್ಟಕ್ಕೆ ಸಿಲುಕಿರುವ, ಬೆಲೆಗಳು ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಹೇಳಿದ್ದ ಆದರ್ಶ
ಮಾಲೀಕ ಸರ್ಕಾರ ಈಗ ತನ್ನ ಮಾತನ್ನೇ ಪಾಲಿಸುತ್ತಿಲ್ಲ. ಆದ್ದರಿಂದ ಈ ಕೂಡಲೇ ಎಲ್ಲರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಬಾಕಿ ವೇತನ
ಪಾವತಿಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮುಂದುವರೆದು ಮಾತನಾಡಿದ ಅವರು, ಇಲಾಖೆಯಲ್ಲಿ ಕಳೆದ 10-15 ವರ್ಷಗಳಿಂದಲೂ ಸೇವೆಸಲ್ಲಿಸುತ್ತಿರುವ ಕಾರ್ಮಿಕರಿಗೆ 2010ರಿಂದ ಇದುವರೆಗೂ ಸಿ.ಎಫ್ ಮತ್ತು ಇ.ಎಸ್.ಐ ಹಣವನ್ನು ನಿಯಮಿತವಾಗಿ ಪಾವತಿ ಮಾಡಿರುವುದಿಲ್ಲ. ಈ ಕುರಿತು 3 ಬಾರಿ ಅಂದಿನ ಸಿಇಓರವರ ಅಧ್ಯಕ್ಷತೆಯಲ್ಲಿ
ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಘದ ಮುಖಂಡರ ಜಂಟಿ ಸಭೆ ನಡೆಸಲಾಗಿದೆ. ಆದರೆ ಪರಿಹಾರಕ್ಕಾಗಿ ಆದೇಶಿಸಿದ ಯಾವುದೇ
ಕ್ರಮಗಳು ಜಾರಿಗೆ ಬರಲಿಲ್ಲ. ಆದ್ದರಿಂದ ಈ ಬಗ್ಗೆ ಜಿ.ಪಂ ಸಿಇಓ ರವರು ಕೂಡಲೇ ಜಂಟಿ ಸಭೆ ಕರೆದು ಈ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ
ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಿಇಓ ರವರು, ಈ ಸಮಸ್ಯೆಗಳ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಲು ಕ್ರಮ ಕೈಗೊಳ್ಳಲಾಗುವದೆಂದು
ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಗಳು,ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಕೂಡಲೇ ಕಾರ್ಮಿಕರನ್ನು
ನೇಮಕ ಮಾಡಿಕೊಳ್ಳಲಾಗುವುದು ಮತ್ತು ಬಾಕಿ ವೇತನ ಪಾವತಿಸಲಾಗುವುದು, ಪಿಎಫ್ ಮಾಹಿತಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಅಲ್ಪ ಸಂಖ್ಯಾತ ಇಲಾಖೆಯ ಅಧಿಕಾರಿಗಳು ಒಂದು ವಾರದಲ್ಲಿ ಬಾಕಿ ವೇತನ ಬಿಡುಗಡೆ ಮಾಲಾಗುವುದು.ಕ್ವಾರಂಟೈನ್ ಕೇಮದ್ರಗಳಲ್ಲಿ ದುಡಿದವರಿಗೆ ಕೂಡಲೇ ವೇತನ ಬಿಡುಗಡೆ ಮಾಡಲಾಗುವುದು, ಸಮವಸ್ತ್ರ ಗಳನ್ನು ಉಚಿತವಾಗಿ ನೀಡಲಾಗುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗೀತಾ ಬೊಮ್ಮಣ್ಣವರ್, ಕುಸುಮಾ ವೀರಕರ್,ಬಸವರಾಜ ಅಮಿನಭಾವಿಸೋಮವ್ವ ಅಣ್ಣಿಗೇರಿ.ಮುಮ್ರಾಟ ನವಲಗುಂದ, ಸುಮಿತ್ರಾ
ಧಾರವಾಡ,ಮಹಾದೇವಿ ಗಂಜಿಗಟ್ಟಿ, ಬಸಮ್ಮ ಕಿಳ್ಳೇಕೇತರ.ಲಕ್ಷ್ಮಿ ಬಾರ್ಕಿ,ಕಾವೇರಿ, ಸಂಗಪ್ಪ ಇನ್ನೂ ಮುಂತಾದವರು ಇದ್ದರು.

ಬೇಡಿಕೆಗಳು
1. ಕೂಡಲೇ ಬಾಕಿಯಿರುವ ವೇತನವನ್ನು ಕಾರ್ಮಿಕರ ಖಾತೆಗಳಿಗೆ ಬಿಡುಗಡೆ ಮಾಡಿ.
2. ಎಲ್ಲ ಇಲಾಖೆಗಳ ವಸತಿನಿಲಯಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ತಕ್ಷಣ ಮರು ನೇಮಕ ಮಾಡಿಕೊಳ್ಳಿ
3. ನೂತನ ಪರಿಷ್ಕೃತ ಕನಿಷ್ಟ ವೇತನವನ್ನು ಖಾತ್ರಿಪಡಿಸಿ,
4. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಈ ಹಿಂದಿನ ಸಭೆಯ ನಿರ್ಧರದಂತೆ 2009 ರಿಂದ ಈವರೆಗೆ ಹೊರಗುತ್ತಿಗೆ ನೌಕರರ
ಇಪಿಎಫ್ಇಎಸ್‌ಐ ಗಳ ಕಟಾವಣೆ ಮಾಹಿತಿಯನ್ನು ಒದಗಿಸಬೇಕು,
5. ಗುತ್ತಿಗೆ ನೌಕರರಿಗೆ ಕನಿಷ್ಟ ವೇತನ, ಇಪಿಎಫ್, ಇಎಸ್‌ಐ ಗಳನ್ನು ಖಾತ್ರಿಪಡಿಸಬೇಕು.
6. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕ ವಿರೋಧಿಯೂ,ವಿದ್ಯಾರ್ಥಿ ವಿರೋಧಿಯೂ ಆದ ಕ್ಯಾಟರಿಂಗ್ ಕಾಂಟ್ಯಾಂಕ್ಷನ್ನು
ಹಿಂಪಡೆಯಬೇಕು.
7, ಮಾನ್ಯ ಸುಪ್ರಿಂ ಕೋರ್ಟಿನ ಆದೇಶದಂತೆ 'ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
8. ಹೊರಗುತ್ತಿಗೆ ನೌಕರರಿಗೆ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿಸಬೇಕು.
9, ಮೊರಾರ್ಜಿ ಕಿತ್ತೂರು ಚನ್ನಮ್ಮ ಮತ್ತಿತರ ವಸತಿ ಶಾಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಡಿ ಗ್ರೂಪ್ ನೌಕರರಿಗೆ ವಸತಿ ಸೌಕರ್ಯ (ಕ್ವಾಟ್ರಸ್ )
ಕಲ್ಪಿಸಬೇಕು.
10,ಮೇಲಿನ ಎಲ್ಲ ಸಮಸ್ಯೆಗಳು-ಬೇಡಿಕೆಗಳ ಪರಿಹಾರಕ್ಕಾಗಿ ತಮ್ಮ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಅಧಿಕಾರಿಗಳು,
ಗುತ್ತಿಗೆದಾರರು ಹಾಗೂ ಸಂಘದ ಪದಾಧಿಕಾರಿಗಳನ್ನೊಳಗೊಂಡ ಜಂಟಿ ಸಭೆಯನ್ನು ಕರೆಯಬೇಕು.

0 Response to "ಬಾಕಿ ವೇತನ ಬಿಡುಗಡೆ ಮತ್ತು ಎಲ್ಲರನ್ನು ಕೆಲಸದಲ್ಲಿ ಮುಂದುವರೆಸಲು, -ಇಎಸ್‌ಐ ಸೌಲಭ್ಯ ಒದಗಿಸಲು ಆಗ್ರಹ-AIUTUC"

Post a Comment

Article Top Ads

Central Ads Article 1

Middle Ads Article 2

Article Bottom Ads