
ಮಲ್ಲಿಕಾರ್ಜನ ಮನಸೂರ ಅವರ 29ನೇ ಪುಣ್ಯಸ್ಮರಣೆ ಆಚರಣೆ-dharwad
Sunday, September 12, 2021
Comment
ಮಲ್ಲಿಕಾರ್ಜನ ಮನಸೂರ ಅವರ 29ನೇ ಪುಣ್ಯಸ್ಮರಣೆ ಆಚರಣೆ
ಧಾರವಾಡ .ಸೆ.12
: ಸಂಗೀತ ಋಷಿ ಪದ್ಮಭೂಷಣ ಪಂಡಿತ ಮಲ್ಲಿಕಾರ್ಜುನ ಮನಸೂರ ಅವರ 29ನೇ ಪುಣ್ಯಸ್ಮರಣೆಯನ್ನು ಇಂದು (ಸೆ.12) ಬೆಳ್ಳಿಗ್ಗೆ ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಸ್ಮಾರಕ ಟ್ರಸ್ಟ್ (ರಿ) ನಲ್ಲಿ ಜರುಗಿತು.
ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೆದರೆ, ಪಂ.ಎಂ.ವೆಂಕಟೇಶ ಕುಮಾರ, ನೀಲಾ.ಎಂ.ಕೊಡ್ಲಿ, ಡಾ.ದೀಲಿಪ ದೇಶಪಾಂಡೆ, ಶಂಕರ ಕುಂಬಿ, ಡಾ.ಶಾಂತಾರಾಮ ಹೆಗಡೆ, ಮಲ್ಲಿಕಾರ್ಜುನ ತರ್ಲಗಟ್ಟ, ಸದಸ್ಯ ಕಾರ್ಯದರ್ಶಿ ಹಾಗೂ ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ವಿಠಲರಾವ್ ಗಿತ್ತೆ ಮುಂತಾದವರು ಮನಸೂರ ಅವರ ಗದ್ದುಗೆಗೆ ಪುಷ್ಪಾರ್ಪಣೆ ಮಾಡಿ ನಮಿಸಿದರು.
ಸಂಗೀತ ಸೇವೆ: ಅಕ್ಕಮಹಾದೇವಿ ಆಲೂರ, ಚಂದ್ರಕಾ ಕಾಮತ್, ಮಲ್ಲಿಕಾರ್ಜುನ ತರ್ಲಗಟ್ಟ, ನೀಲಾ.ಎಂ.ಕೊಡ್ಲಿ ಅವರಿಂದ ಸಂಗೀತ ಸೇವೆ ಜರುಗಿತು. ಅಲ್ಲಮಪ್ರಭು ಕಡಕೋಳ, ಪರಶುರಾಮ ಕಟ್ಟಸಂಗಾವಿ ವಾದ್ಯ ಸಹಕಾರ ನೀಡಿದರು.
0 Response to "ಮಲ್ಲಿಕಾರ್ಜನ ಮನಸೂರ ಅವರ 29ನೇ ಪುಣ್ಯಸ್ಮರಣೆ ಆಚರಣೆ-dharwad"
Post a Comment