-->
ಸರ್ಕಾರಿ ಜಾಗದ ಉಳುವಿಗಾಗಿ 25  ಕಿಲೋಮೀಟರ್ ಪಾದಯಾತ್ರೆ-Harappanahalli

ಸರ್ಕಾರಿ ಜಾಗದ ಉಳುವಿಗಾಗಿ 25 ಕಿಲೋಮೀಟರ್ ಪಾದಯಾತ್ರೆ-Harappanahalli

ಸರ್ಕಾರಿ ಜಾಗದ ಉಳುವಿಗಾಗಿ 25  ಕಿಲೋಮೀಟರ್ ಪಾದಯಾತ್ರೆಯಲ್ಲಿ ಸಾವಿರಾರು ಹೋರಾಟಗಾರರೊಂದಿಗೆ ಆಗಮಿಸಿ ತಹಸೀಲ್ದಾರ ಮೂಲಕ ಸರಕಾರ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ  ಎಂ.ಪಿ.ವೀಣಾ ಮಹಾಂತೇಶ್


ಹರಪನಹಳ್ಳಿ : ಕರೆಕಾನಹಳ್ಳಿ ಎಂಬ ಕುಗ್ರಾಮದ ಕೆರೆಯ ಜಾಗವನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿ ಕೊಂಡು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಆ ಜಮೀನನ್ನು ಬೇರೆಯವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡು ತ್ತಿರುವುದನ್ನು ಖಂಡಿಸಿ ಇಂದು ಕರೆಕಾನಹಳ್ಳಿ ಗ್ರಾಮಸ್ಥರೊಂ ದಿಗೆ ಕೆರೆಯ ದಡದಿಂದ ಹರಪನಹಳ್ಳಿಯ ತಹಶೀಲ್ದಾರ್ ಅವರ ಕಛೇರಿಯ ವರೆಗೆ ಎರಡು ದಿನದ  25 ಕಿಲೋಮೀ ಟರ್ ದೂರದ ಪ್ರತಿಭಟನಾ ಪಾದಯಾತ್ರೆ ಕೈಗೊಂಡು ಸಾವಿ ರಾರು ಹೋರಾಟಗಾರರೊಂದಿಗೆ ಹರಪನಹಳ್ಳಿಯ ತಹಶೀ ಲ್ದಾರ್ ಅವರ ಕಛೇರಿಗೆ ಆಗಮಿಸಿ ಕೆರೆಯ ಒತ್ತುವರಿ ಜಾಗವನ್ನು ಉಳಿಸಲು ಮನವಿ ಸಲ್ಲಿಸಿದರು. ನಿನ್ನೆ ವಾಸ್ತವ್ಯ ಹೂಡಿದ ತೊಗರಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಆವರಣ ದಿಂದ ಇವತ್ತು ಬೆಳಿಗ್ಗೆ ಎರಡನೇ ದಿನದ ಪಾದಯಾತ್ರೆ ಪ್ರಾರಂಭಿಸಿ ಮಧ್ಯಾಹ್ನ 1 ಗಂಟೆಗೆ ಹರಪನಹಳ್ಳಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾಯ್ದು ತಹಶೀಲ್ದಾರ್ ಅವರ ಕಛೇರಿ ಆವರಣ ತಲುಪಿ ಪಾದಯಾತ್ರೆ ಮನವಿ ಸಲ್ಲಿಸುವದರೊಂದಿಗೆ ಮುಕ್ತಾಯಗೊಂಡಿತು.

ಈ ಕುರಿತು ಮಾತನಾಡಿದ ಎಂ.ಪಿ.ವೀಣಾ ಮಹಾಂತೇಶ್ ಅವರು ಇಂದಿನ ದಿನಮಾನಗಳಲ್ಲಿ ಸರ್ಕಾರಿ ಜಾಗ, ಕಂದಾ ಯ ಜಮೀನು, ಕೆರೆಯ ಜಾಗದಂತಹ ಸರ್ಕಾರಿ ಸ್ವಾಮ್ಯದ ಜಮೀನುಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸಿ ಅವು ಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾ ರದ ಆಸ್ತಿಯನ್ನು ಉಳಿಸುವ ಅಧಿಕಾರಿಗಳು ಎಲ್ಲ ವಿಷಯ ಗಳು ಗೊತ್ತಿದ್ದರು ಏನೂ ಗೊತ್ತಿಲ್ಲದ ಹಾಗೆ ಕಣ್ಮುಚ್ಚಿ ಕುಳಿತಿ ರುವುದು ಆಶ್ಚರ್ಯದಾಯಕ ಪ್ರಸ್ತುತ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಪರಿಸರ ಜಲಸಂಮರಕ್ಷಣೆ , ಕೆರೆ , ನೀರಾವರಿ ಯೋಜನೆ , ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮ ಯಾವುದೇ ಜನಪರ ಕಾರ್ಯಕ್ರಮ ಕ್ಷೇತ್ರದಲ್ಲಿ ರೂಪಿಸದೇ ನಿಸರ್ಗದತ್ತವಾದ ಕೆರೆಗಳನ್ನು ಪಟ್ಟಭದ್ರ ಹಿತಾಶಕ್ತಿಗಳಿಗೆ ಪರಭಾರೆ ಮಾಡುತ್ತಿರುವುದು ಕ್ಷೇತ್ರದ ದುರಾದೃಷ್ಟ ಎಂದು ಖೇದ ವ್ಯಕ್ತ ಪಡಿಸಿದರು . ಈ ಸಂದರ್ಭದಲ್ಲಿ ಎಂಪಿ ವೀಣಾ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹೇರಿದ ಉಪ್ಪಿನ ಮೇಲಿನ ತೆರಿಗೆ ವಿರುದ್ಧ ಗಾಂಧೀಜಿಯವರು ಕೈಗೊಂಡ ಉಪ್ಪಿನ ಸತ್ಯಾಗ್ರಹ ದಂಡಿ  ಪಾದಯಾತ್ರೆ  ಬಗ್ಗೆ ನೆನಪಿಸಿ ಕೊಂಡರು.  ಚಿಕ್ಕ ಮಟ್ಟದಲ್ಲಿ ಸಬರಮತಿ ಆಶ್ರಮದಿಂದ ಕೇವಲ 70 ಅನುಯಾಯಿಗಳೊಂದಿಗೆ ಪ್ರಾರಂಭವಾದ ಈ ಪಾದಯಾತ್ರೆ ದೇಶದ ಉದ್ದಗಲಕ್ಕೂ ವ್ಯಾಪಿಸಿ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿದಿದೆ . 

ನಮ್ಮ ಈ ಮನವಿಗೂ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಜನತೆಯೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗು ವುದು ಎಂದು ಎಚ್ಚರಿಸಿದರು.

ದಾರಿಯುದ್ದಕ್ಕೂ  ಸತ್ಯಾಗ್ರಹಿಗಳಿಗೆ ಅಭೂತಪೂರ್ವ ಬೆಂಬಲವನ್ನು ವಿವಿಧ ಗ್ರಾಮಗಳ ಜನರು ವ್ಯಕ್ತ ಪಡಿಸಿದರು. ಈ ಹೋರಾಟಕ್ಕೆ ತಾವು ಕೂಡ ಧುಮುಕುವದಾಗಿ ಹೇಳಿದರು ಮತ್ತು ನೂರಾರು ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ದರು. 

ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ  ಮಾದಾಪುರ ಗ್ರಾಮದ  ಮಾಜಿ ಗ್ರಾಮಪಂಚಾಯತಿ ಸದಸ್ಯರಾದ ಶ್ರೀ ನೀಲಪ್ಪ ಹಾಗೂ ಕಾಂಗ್ರೆಸ್ ಮುಖಂಡರಾದ ಬಸವರಾಜ,  ರಾಮಪ್ಪ  ,ಗುರಪ್ಪ ಇವರು ಹಾಲಮತ ಸಂಪ್ರದಾಯದ ಸಂಕೇತವಾದ ಕುರಿಮರಿ ಕಂಬಳಿ ಭಂಡಾರ ಅರ್ಪಿಸುವದರ ಮೂಲಕ ಎಂಪಿ ವೀಣಾ ಅವರನ್ನು ಭರಮಾಡಿ ಕೊಂಡರು .

ಹರಪನಹಳ್ಳಿಯಲ್ಲಿ ನೂರಾರು ಸುಮಂಗಲೆಯರು ಆರತಿ ಪುಷ್ಪಕುಂಕುಮದೊಂದಿಗೆ ಎಂಪಿ ವೀಣಾ ಅವರಿಗೆ ಸ್ವಾಗತ ಕೋರಿದರು.

0 Response to "ಸರ್ಕಾರಿ ಜಾಗದ ಉಳುವಿಗಾಗಿ 25 ಕಿಲೋಮೀಟರ್ ಪಾದಯಾತ್ರೆ-Harappanahalli"

Post a Comment

Article Top Ads

Central Ads Article 1

Middle Ads Article 2

Article Bottom Ads