-->
ಪ್ರಧಾನಿ ಮೋದಿ ಜನ್ಮದಿನಾಚರಣೆಗೆ 20 ದಿನಗಳ ಮೆಗಾ ಕಾರ್ಯಕ್ರಮ: ಬಿಜೆಪಿ-PM_Modi

ಪ್ರಧಾನಿ ಮೋದಿ ಜನ್ಮದಿನಾಚರಣೆಗೆ 20 ದಿನಗಳ ಮೆಗಾ ಕಾರ್ಯಕ್ರಮ: ಬಿಜೆಪಿ-PM_Modi

ಪ್ರಧಾನಿ ಮೋದಿ ಜನ್ಮದಿನಾಚರಣೆಗೆ 20 ದಿನಗಳ ಮೆಗಾ ಕಾರ್ಯಕ್ರಮ: ಬಿಜೆಪಿ

 *ಸೆ.17ರಿಂದ ʻಸೇವಾ ಮತ್ತು ಸಮರ್ಪಣ ಅಭಿಯಾನʼ* 


 *ಹೊಸದಿಲ್ಲಿ:*
ಪ್ರಧಾನಿ ನರೇಂದ್ರ ಮೋದಿ ಅವರ 71ನೇ ವರ್ಷದ ಜನ್ಮದಿನದ ಅಂಗವಾಗಿ ಇದೇ ಸೆ.17ರಿಂದ ʻಸೇವಾ ಮತ್ತು ಸಮರ್ಪಣ ಅಭಿಯಾನ’ ಹೆಸರಿನಲ್ಲಿ 20 ದಿನಗಳ ಮೆಗಾ ಕಾರ್ಯಕ್ರಮ ನಡೆಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಅವರು ಜನಸೇವೆಗೆ ಪಾದಾರ್ಪಣೆ ಮಾಡಿ ಇಲ್ಲಿಗೆ 20 ವರ್ಷಗಳು ತುಂಬಿವೆ. ಹೀಗಾಗಿ, 20 ದಿನಗಳ ಬೃಹತ್‌ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

20 ದಿನಗಳ ಕಾರ್ಯಕ್ರಮದಲ್ಲಿ ಸ್ವಚ್ಛತೆ, ರಕ್ತದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಎಲ್ಲಾ ರಾಜ್ಯ ಘಟಕಗಳಿಗೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಸಂಬಂಧ ದೇಶಾದ್ಯಂತ ಬಿಜೆಪಿ ಬೂತ್‌ಗಳಿಂದ ಪ್ರಧಾನಿ ಮೋದಿ ಅವರಿಗೆ 5 ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ʻದೇಶದ ಬಡವರಿಗೆ ಉಚಿತ ಪಡಿತರ ಹಾಗೂ ಕೋವಿಡ್‌ ಲಸಿಕೆ ವಿತರಿಸಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದʼ ಎಂಬುದು ಸಹ ಅಭಿಯಾನದ ಭಾಗವಾಗಲಿದೆ ಎನ್ನಲಾಗಿದೆ.
 
ಪ್ರಧಾನಿ ಮೋದಿ ಅವರ ಜೀವನ ಕುರಿತು ವಸ್ತುಪ್ರದರ್ಶನ ಏರ್ಪಡಿಸಲಾಗುವುದು. ನಮೋ ಆಪ್‌ನಲ್ಲಿ ವರ್ಚುಯಲ್‌ ಕಾರ್ಯಕ್ರಮಗಳನ್ನೂ ನಡೆಸಲಾಗುವುದು.


ಎಲ್ಲಾ ಜನಪ್ರತಿನಿಧಿಗಳು ಪಡಿತರ ವಿತರಣಾ ಕೇಂದ್ರಗಳಿಗೆ ತೆರಳಿ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಿ ವಿಡಿಯೊ ಮಾಡಿಕೊಳ್ಳಬೇಕು. ಅಂತೆಯೇ ಯುವ ಘಟಕ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಲಾಗಿದೆ.

0 Response to "ಪ್ರಧಾನಿ ಮೋದಿ ಜನ್ಮದಿನಾಚರಣೆಗೆ 20 ದಿನಗಳ ಮೆಗಾ ಕಾರ್ಯಕ್ರಮ: ಬಿಜೆಪಿ-PM_Modi"

Post a Comment

Article Top Ads

Central Ads Article 1

Middle Ads Article 2

Article Bottom Ads