
ಸೆಪ್ಪೆಂಬರ್ 17 ರ ಲಸಿಕಾಕರಣ ಅಭಿಯಾನ ಕುರಿತು ಜರುಗಿದ ಪೂರ್ವಭಾವಿ ಸಭೆ-dwd
Tuesday, September 14, 2021
Comment
ಸೆಪ್ಪೆಂಬರ್ 17 ರ ಲಸಿಕಾಕರಣ ಅಭಿಯಾನ ಕುರಿತು ಜರುಗಿದ ಪೂರ್ವಭಾವಿ ಸಭೆ
ಧಾರವಾಡ ಸೆ.14: ಬರುವ ಸೆಪ್ಪೆಂಬರ್ 17 ರಂದು ಜಿಲ್ಲೆಯಲ್ಲಿ ಆಯೋಜಿಸಲಿರುವ ಬೃಹತ್ ಕೋವಿಡ್ ನಿರೋಧಕ ಲಸಿಕಾಕರಣದ ಕುರಿತು ಇಂದು (ಸೆ.14) ಸಂಜೆ ತಾಲ್ಲೂಕಾ ಪಂಚಾಯತ್ ಸಭಾಗಂಣದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ಮುಗನೂರಮಠ ಮಾತನಾಡಿ, ಧಾರವಾಡ ಹಾಗೂ ಅಳ್ನಾವರ ತಾಲ್ಲೂಕಿನ ಎಲ್ಲ ಗ್ರಾಮಗಳು ಸೇರಿದಂತೆ ನಗರ ಪ್ರದೇಶದಲ್ಲಿ ಲಸಿಕಾಕರಣವನ್ನು ವ್ಯವಸ್ಥಿತವಾಗಿ ಆಯೋಜಿಸುವ ಕುರಿತು ತಿಳಿಸಿದರು. ಗ್ರಾಮ ಮಟ್ಟದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಸಿಬ್ಬಂದಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮುಂಚಿತವಾಗಿ ಟೋಕನ್ ನೀಡಬೇಕು. ಸೆ.17 ರಂದು ಈ ಟೋಕನ್ ಪಡೆದಿರುವ ಪ್ರತಿ ವ್ಯಕ್ತಿಯು ಲಸಿಕೆ ಪಡೆಯುವಂತೆ ಕ್ರಮವಹಿಸಬೇಕೆಂದು ಹೇಳಿದರು.
ಧಾರವಾಡ ತಹಶೀಲ್ದಾರ ಡಾ.ಸಂತೋಷ ಬಿರಾದರ ಮಾತನಾಡಿ, ಕಂದಾಯ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮಾರ್ಗದರ್ಶನದಲ್ಲಿ ಆಯೋಜಿಸುತ್ತಿರುವ ಈ ಬೃಹತ್ ಲಸಿಕಾರಣದ ಅಭಿಯಾನವನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಎಚ್ಚರಿಕೆ ವಹಿಸಿವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ತಾಲ್ಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್.ತನುಜಾ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆ ಭೇಟಿ ಆಯೋಜಿಸಿ ಲಸಿಕೆ ಪಡೆಯದೆ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಲಸಿಕೆ ನೀಡಲು ವಿವರವಾದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಧಾರವಾಡ ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಜೆ., ಅಳ್ನಾವರ ತಾಲ್ಲೂಕಾ ಪಂಚಾಯತ ಇ.ಓ ಸಂತೋಷ ಟಿ. ಅವರು ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಉಮೇಶ ಬೊಮ್ಮಕ್ಕನವರ, ಧಾರವಾಡ ಗ್ರಾಮೀಣತಾಲೂಕಾ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಅನುಪಮಾ ಅಂಗಡಿ, ನಗರ ಸಿಡಿಪಿಓ ಡಾ. ಕಮಲಾ ಬೈಲೂರ, ಕಂದಾಯ ನೀರಿಕ್ಷಕರಾದ ಮಂಜುನಾಥ ಗೂಳಪ್ಪನವರ, ರಮೇಶ ಬಂಡಿ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ನವಲಗುಂದ ತಾಲ್ಲೂಕಾ ಪೂರ್ವಭಾವಿ ಸಭೆ: ನವಲಗುಂದ ತಾಲ್ಲೂಕಾ ಪಂಚಾಯತ ಸಭಾಗಂಣದಲ್ಲಿ ಇಂದು ಬೆಳಿಗ್ಗೆ ಸೆಪ್ಪೆಂಬರ್ 17 ರ ಲಸಿಕಾಕರಣದ ಅಭಿಯಾನ ಕುರಿತು ಪೂರ್ವಭಾವಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ನವೀನ ಹುಲ್ಲೂರ ಮಾತನಾಡಿ, ತಾಲ್ಲೂಕಿನ ಪ್ರತಿ ವ್ಯಕ್ತಿಯೂ ತಪ್ಪದೇ ಲಸಿಕೆಯನ್ನು ಪಡೆಯುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಗ್ರಾಮ ವ್ಯಾಪ್ತಿಯ ಲಸಿಕೆ ಪಡೆಯದ ವ್ಯಕ್ತಿಗಳ ಸಮೀಕ್ಷೆ ಮಾಡಿ ಮಾಹಿತಿ ಸಲ್ಲಿಸಬೇಕೆಂದು ಸೂಚಿಸಿದರು.
ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ಅಮಾಸಿ, ತಾಲ್ಲೂಕಾ ವೈದ್ಯಾಧಿಕಾರಿ ಡಾ.ಎಸ್.ಎಮ್.ಹೊನಕೇರಿ, ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್.ಕಾಂಬಳೆ ಸೇರಿದಂತೆ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ವರದಿ:ರಘು ನರಗುಂದ
0 Response to "ಸೆಪ್ಪೆಂಬರ್ 17 ರ ಲಸಿಕಾಕರಣ ಅಭಿಯಾನ ಕುರಿತು ಜರುಗಿದ ಪೂರ್ವಭಾವಿ ಸಭೆ-dwd"
Post a Comment