-->
ಕಮಲಾಪುರ:ಧರ್ಮಸ್ಥಳ ಸಂಘದಿಂದ,ದೇವಸ್ಥಾನಗಳಲ್ಲಿ ಜಾತ್ಯಾತೀತ ಸೇವೆ-Vijayanagara

ಕಮಲಾಪುರ:ಧರ್ಮಸ್ಥಳ ಸಂಘದಿಂದ,ದೇವಸ್ಥಾನಗಳಲ್ಲಿ ಜಾತ್ಯಾತೀತ ಸೇವೆ-Vijayanagara

*ಕಾಮಲಾಪುರ:ಧರ್ಮಸ್ಥಳ ಸಂಘದಿಂದ,ದೇವಸ್ಥಾನಗಳಲ್ಲಿ ಜಾತ್ಯಾತೀತ ಸೇವೆ*-
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಕಮಲಾಪುರ ಗ್ರಾಮದ ಶ್ರೀನಿಜಲಿಂಗಮ್ಮ ದೇವಸ್ಥಾನದಲ್ಲಿ,ಕಮಲಾಪುರ ಗ್ರಾಮದ ಧರ್ಮಸ್ಥಳ ಒಕ್ಕೂಟ ದಿಂದ ಸ್ವಚ್ಚತಾ ಕಾರ್ಯಕ್ರಮ ಜರುಗಿತು.
 ಮೇಲ್ವಿಚಾರಕ ಮಲ್ಲೇಶಪ್ಪ ಮಾರ್ಗದರ್ಶನದಂತೆ,ಒಕ್ಕೂಟ ಅಧ್ಯಕ್ಷೆ ಬಾನುಬೀ, ಸೇವಾಪ್ರತಿನಿಧಿ ಕವಿತ ಸೇರಿದಂತೆ ಮತ್ತಿತರರು ಇದ್ದರು.ಈ ಸಂದರ್ಭದಲ್ಲಿ ಅಧ್ಯಕ್ಷೆ ಬಾನುಬೀ ಮಾತನಾಡಿದರು, ದರ್ಮಸ್ಥಳ ಸಂಘದಿಂದ ಕೆಲ ವರ್ಷಗಳಿಂದ ಇದೇ ರೀತಿಯಲ್ಲಿ ಹಲವು ದೇವಸ್ಥಾನಗಳಲ್ಲಿ ಸೇವೆಸಲ್ಲಿಸಿರುವುದಾಗಿ ತಿಳಿಸಿದರು.ಜಾತಿ ಮತ ಪಂಥ ವ್ಯತ್ಯಾಸವಿಲ್ಲದೇ ಎಲ್ಲರೂ ಹತ್ತಾರು ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳನ್ನು,ಸಂಘದ ಪದಾಧಿಕಾರಿಗಳು ಸದಸ್ಯರೊಡಗೂಡಿ ಸ್ವಚ್ಚಗೊಳಿಸಲಾಗುತ್ತಿದೆ.
ಈ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಸಂಘ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದು,ಸಂಘದ ಅಧಿಕಾರಿಗಳು ಸಾರ್ವಜನಿಕರು ತುಂಬಾ ಸಹಕರಿಸುತ್ತಿದ್ದಾರೆ ಇದು ನಮ್ಮೆಲ್ಲರಿಗೂ  ತೃಪ್ತಿ ತಂದಿದೆ ಎಂದು ಸಂಘದ ಅಧ್ಯಕ್ಷೆ ಬಾನುಬಿ ತಿಳಿಸಿದ್ದಾರೆ. 

Reported By:
ವೃಷಭೇಂದ್ರ

0 Response to "ಕಮಲಾಪುರ:ಧರ್ಮಸ್ಥಳ ಸಂಘದಿಂದ,ದೇವಸ್ಥಾನಗಳಲ್ಲಿ ಜಾತ್ಯಾತೀತ ಸೇವೆ-Vijayanagara"

Post a Comment

Article Top Ads

Central Ads Article 1

Middle Ads Article 2

Article Bottom Ads