
ಚೈತನ್ಯ ಸೇವಾ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ-Shiggavi
Sunday, August 22, 2021
Comment
ಶಿಗ್ಗಾವಿ : ಸಾವಿನ ನಂತರವೂ ಬದುಕಿರುವರೇ ಸಾಧಕರು, ಸಾಧನೆಗೆ ಗೌರವ ದೊರೆತಾಗ ಆ ಗೌರವದಿಂದ ಇನ್ನೂ ಹೆಚ್ಚಿನ ಮಟ್ಟದ ಸಾಧನೆ ಮಾಡಲು ಸಾದ್ಯವಿದ್ದು ಆ ನಿಟ್ಟಿನಲ್ಲಿ ಶಿಗ್ಗಾವಿಯ ಚೈತನ್ಯ ಸೇವಾ ಸಂಸ್ಥೆಯು ಸಾಧಕರನ್ನು ಗೌರವಿಸುವ ಕಾರ್ಯಕ್ಕೆ ಮುಂದಾಗಿರುವುದು ತಾಲೂಕಿನ ಸಾಧಕರಿಗೆ ಹೊಸ ಹುರುಪನ್ನು ತಂದಿದೆ ಎಂದು ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ರವಿವಾರ ಪಟ್ಟಣದ ಅಂಬೇಡ್ಕರ್ ನಗರದಲ್ಲಿಯ ಅಂಬೇಡ್ಕರ್ ಸಭಾಭವನದಲ್ಲಿ ಚೈತನ್ಯ ಸೇವಾ ಸಂಸ್ಥೆ ಶಿಗ್ಗಾವಿ ಮತ್ತು ಚೈತನ್ಯ ಕರಿಯರ್ ಅಕಾಡೆಮಿ ಶಿಗ್ಗಾವಿ ವತಿಯಿಂದ ಸಾಧಕರಿಗೋಂದು ಸಲಾಮ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಧನೆಗೆ ಯಾವುದೇ ಕ್ಷೇತ್ರದ ಕಟ್ಟಳೆಗಳಿಲ್ಲ, ಅವರದೇ ಸಾಧನೆಯ ಮೂಲಕ ಇಂದಿನ ಸಮಾಜಕ್ಕೆ ಮಾದರಿ ಕಾರ್ಯ ಮಾಡುವಂತಹ ಸಾಧಕರು ನಮ್ಮ ತಾಲೂಕಿನಲ್ಲಿದ್ದು ಅವರನ್ನು ಗುರುತಿಸುವ ಕಾರ್ಯವನ್ನು ಈ ಚೈತನ್ಯ ಸೇವಾ ಸಂಸ್ಥೆ ಮಾಡಿದೆ, ಇದು ನಮ್ಮ ಹೆಮ್ಮೆ ಎಂದರು.
ಗಂಗೇಬಾವಿ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅದ್ಯಕ್ಷ ಶಶಿಧರ ಯಲಿಗಾರ ಮಾತನಾಡಿ ಚೈತನ್ಯ ಸೇವಾ ಸಂಸ್ಥೆಯ ಸಮಾಜಿಕ ಕಳಕಳಿಯ ಕಾರ್ಯಗಳಿಗೆ ಸಹಕಾರ ನೀಡುವ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ಆಯೋಜನೆ ಮಾಡಿ ಹೆಮ್ಮೆಯ ಸಾಧಕರನ್ನು ಸ್ಫೂರ್ತಿದಾಯಕ ಗಮನ ಸೆಳೆದು ಇನ್ನು ಹೆಚ್ಚಿನ ಸಾಧನೆಗೆ ಪ್ರೇರಣೆ ಮಾಡೋಣ ಎಂದರು.
ವರದಿ:
ವಿಶ್ವನಾಥ ಬಂಡಿವಡ್ಡರ
0 Response to "ಚೈತನ್ಯ ಸೇವಾ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ-Shiggavi"
Post a Comment