
ಕೋಟಿ ವೃಕ್ಷ ಅಭಿಯಾನದ ಕಾರ್ಯಾಗಾರ-Savadatti
Wednesday, August 18, 2021
Comment
ಕೋಟಿ ವೃಕ್ಷ ಅಭಿಯಾನದ ಕಾರ್ಯಾಗಾರ
ಸವದತ್ತಿ: ಸ್ಥಳೀಯ ತಾಲೂಕ ಪಂಚಾಯತ ಸಭಾಭವನದಲ್ಲಿ ಕೋಟಿ ವೃಕ್ಷ ಅಭಿಯಾನದ ಕಾರ್ಯಾಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಸಭೆ ಉದ್ದೇಶಿಸಿ ಮಾತನಾಡಿದ ಸಾಮಾಜಿಕ ವಲಯ ಅರಣ್ಯಾಧಿಕಾರಿಯಾದ ಶಂಕರ ಅಂತರಗಟ್ಟಿ ಸವದತ್ತಿ ತಾಲೂಕಿನ 44 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಆಶ್ರಯದಲ್ಲಿ ಕೋಟಿ ವೃಕ್ಷ ಅಭಿಯಾನದ ಹಮ್ಮಿಕೊಳ್ಳಲಾಗಿದೆ.
ನಂತರ ಮಾತನಾಡಿದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾದ ಯಶವಂತಕುಮಾರ್ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಂದರ ಮತ್ತು ಸ್ವಚ ಪರಿಸರ ನಿರ್ಮಾಣಮಾಡಲು ಪಂಚಾಯತ ರಾಜ್ ಇಲಾಖೆ ತಿಳಿಸಿದೆ ಆದರಿಂದ ನಮ್ಮ ತಾಲೂಕ ಪಂಚಾಯತ ವ್ಯಾಪ್ತಿಯಲ್ಲಿ ಬರುವ 44 ಗ್ರಾಮ ಪಂಚಾಯತಯಲ್ಲಿ ಕೋಟಿ ವೃಕ್ಷ ಅಭಿಯಾನದ ಕಾರ್ಯಾಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರ ಪ್ರಾತ್ಯಕ್ಷಿಕೆಯನ್ನು 44 ಗ್ರಾಮ ಪಂಚಾಯತ ಅಭಿವೃದ್ಧಿಅಧಿಕಾರಿಗಳಿಗೆ ಅರಣ್ಯ ಇಲಾಖೆಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಎಡಿ ಸಂಗನಗೌಡ ಹಂದ್ರಾಳ, ಸಾಮಾಜಿಕ ವಲಯ ಉಪ ಅರಣ್ಯ ಅಧಿಕಾರಿಗಳಾದ ಎಸ್. ಬಿ. ಪಾವಟೆ, ಈರಣ್ಣಾ ಇಟ್ನಾಳ, ಅರಣ್ಯ ಇಲಾಖೆ ಸಿಬ್ಬಂದಿಯಾದ ರಮೇಶ ಸೊನೆರ, ಎಚ್. ಬಿ. ಪನಾಲಗಡ, ಸಿದ್ದರಡ್ಡಿ ಸೋಮರಡ್ಡಿ, ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:
ವಿ.ಜಿ.ವೃಷಭೇಂದ್ರ
0 Response to "ಕೋಟಿ ವೃಕ್ಷ ಅಭಿಯಾನದ ಕಾರ್ಯಾಗಾರ-Savadatti"
Post a Comment