-->
ಸಂತೋಷ್ ಲಾಡ್ ಅವರಿಂದ ಮೂರು ಉಚಿತ ಅಂಬುಲೆನ್ಸ್ ಸೇವೆ-Santosh Lad

ಸಂತೋಷ್ ಲಾಡ್ ಅವರಿಂದ ಮೂರು ಉಚಿತ ಅಂಬುಲೆನ್ಸ್ ಸೇವೆ-Santosh Lad

ಸಂತೋಷ್ ಲಾಡ್ ಅವರಿಂದ ಮೂರು ಉಚಿತ ಅಂಬುಲೆನ್ಸ್ ಸೇವೆ

ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ರಾಜೀವ್ ಗಾಂಧಿ ಹಾಗೂ ಡಿ ದೇವರಾಜ ಅರಸು ಅವರ ಜನ್ಮದಿನದ ಪ್ರಯುಕ್ತ ಕಲಘಟಗಿಯ ಅಮೃತ ನಿವಾಸದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅವರು ಜನ್ಮದಿನೋತ್ಸವವನ್ನು ಆಚರಿಸಿದರು.

ಈ ಕಾರ್ಯಕ್ರಮಕ್ಕೆ ಗೋವಾ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಗಿರೀಶ ಚೋಡಾಂಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಈ ಸುಸಂದರ್ಭದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿದಂತೆ ಶ್ರೀಮತಿ ನಾಡೋಜ ಸುಕ್ರಿ ಬೊಮ್ಮನಗೌಡ ಅವರು ಆಗಮಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂತೋಷ್ ಲಾಡ್ ಅವರು ಒಬ್ಬ ಒಳ್ಳೆಯ ವ್ಯಕ್ತಿ ಅವರು ಜನರಿಗೋಸ್ಕರ ಮಾಡದ ಕಾರ್ಯಗಳಿಲ್ಲ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ಪ್ರತಿ ಹಳ್ಳಿಯಲ್ಲೂ ಯಾರು ರೋಗದಿಂದ ನರಳಿ ಬಾರದೆಂದು ತಾಲೂಕಿನ ತುಂಬಾ ಮೂರು ಆಂಬುಲೆನ್ಸ್ ಸೇವೆಯನ್ನು ಆರಂಭ ಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಂಬುಲೆನ್ಸ್ ಸೇವೆಯಲ್ಲಿ ಯಾವುದೇ ಜಾತಿ ಭೇದ ಭಾವ ಯಾವುದೇ ಪಕ್ಷಾತೀತ ಇರುವುದಿಲ್ಲ ಎಲ್ಲರೂ ನಮ್ಮವರೇ ಎಲ್ಲರೂ ಆರೋಗ್ಯ ವಾಗಿರಲೆಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ ಹಾಗೂ ಆಂಬುಲೆನ್ಸ್ ನಲ್ಲಿ ಒಬ್ಬ ಎಂಬಿಬಿಎಸ್ ಡಾಕ್ಟರ್ ಕೂಡ ನಿಮ್ಮ ಸೇವೆ ಮಾಡಲು ಏರ್ಪಡಿಸಲಾಗಿದೆ ಎಂದರು.


Reported By:
V.G.Vrushabhendra

0 Response to "ಸಂತೋಷ್ ಲಾಡ್ ಅವರಿಂದ ಮೂರು ಉಚಿತ ಅಂಬುಲೆನ್ಸ್ ಸೇವೆ-Santosh Lad"

Post a Comment

Article Top Ads

Central Ads Article 1

Middle Ads Article 2

Article Bottom Ads