
ಎಲ್ಪಿಜಿ ಬೆಲೆ ಮತ್ತೆ ಏರಿಕೆ-New Dehli
Tuesday, August 17, 2021
Comment
ನವದೆಹಲಿ : ಸಾಮಾನ್ಯ ಜನರಿಗೆ ಮತ್ತೆ ಹೊಡೆತ. ಪೆಟ್ರೋಲಿಯಂ ಕಂಪನಿಗಳು ಮತ್ತೊಮ್ಮೆ LPG ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂ. ಹೆಚ್ಚಿಸಿವೆ. ದೆಹಲಿಯಲ್ಲಿ, 14.2 ಕೆಜಿ ಎಲ್ಪಿಜಿ ಸಿಲಿಂಡರ್ ಈಗ 859.5 ರೂ. ಆದರೆ ಈ ಮೊದಲು ಇದರ ಬೆಲೆ 834.50 ಇತ್ತು. ಈ ಹಿಂದೆ ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂ. ಏರಿಕೆ ಮಾಡಲಾಗಿತ್ತು.
ಎಲ್ಪಿಜಿ ಬೆಲೆ ಮತ್ತೆ ಏರಿಕೆ
ಮುಂಬೈನಲ್ಲಿಯೂ ಸಹ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ ಈಗ 859.5 ರೂ, ಆದರೆ ಇದು ಮೊದಲು 834.50 ರೂ. ಇತ್ತು. ಕೋಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ ದರ ಪ್ರತಿ ಸಿಲಿಂಡರ್ಗೆ 861 ರಿಂದ 886 ರೂ.ಗೆ ಏರಿಕೆಯಾಗಿದೆ. ಚೆನ್ನೈನ ಎಲ್ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ 875.50 ರೂ. ಪಾವತಿಸಬೇಕಾಗುತ್ತದೆ, ಅದು ನಿನ್ನೆ 850.50 ರೂ. ಇತ್ತು. ಉತ್ತರ ಪ್ರದೇಶದ ಲಕ್ನೋದಲ್ಲಿ LPG ಸಿಲಿಂಡರ್ಗಾಗಿ ನೀವು 897.5 ರೂ. ಪಾವತಿಸಬೇಕಾಗುತ್ತದೆ. ಗುಜರಾತ್ನ ಅಹಮದಾಬಾದ್ನಲ್ಲಿ ಎಲ್ಪಿಜಿಗೆ 866.50 ರೂ. ಪಾವತಿಸಬೇಕಾಗುತ್ತದೆ.
Reported By:
ರಘು ನರಗುಂದ
0 Response to "ಎಲ್ಪಿಜಿ ಬೆಲೆ ಮತ್ತೆ ಏರಿಕೆ-New Dehli"
Post a Comment