
ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳಿಂದ ಹಕ್ಕೊತ್ತಾಯ-Kudligi
Monday, August 9, 2021
Comment
*ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳಿಂದ ಹಕ್ಕೊತ್ತಾಯ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಚೇರಿ ಆವರಣದಲ್ಲಿ,ಆಗಸ್ಟ್ 9ರಂದು ಐತಿಹಾಸಿಕ ಕಗವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ,ಸಿಐಟಿಯು ಹಾಗೂ ಎಐಟಿಯುಸಿ,ಎಎಸ್ಎಫ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ. ಖಾಸಗೀ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಗಳೊಂದಿಗೆ,ವಿವಿದ ಕಾರ್ಮಿಕರು ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದರು.
ತಮ್ಮ ವಿವಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಖಾಸಗೀಕರಣ ವಿರೋಧಿಸಲಾಯಿತು.
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಕಾಯ್ದೆಗಳನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಭಟನಾಕಾರರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ ಹಾಗೂ ಹೋರಾಟಗಾರರಾದ ಹೆಚ್.ವೀರಣ್ಣ ಮತ್ತು ಗುನ್ನಳ್ಳಿ ರಾಘವೇಂದ್ರ ಮಾತನಾಡಿದರು,ವಿಪ್ಟ ಕಲಾವಿದ ಭಿಷ್ಣಳ್ಳಿ ದಳವಾಯಿರವರು ಕ್ರಾಂತಿಗೀತೆ ಹಾಡಿದರು.ಕಾರ್ಮಿಕರು ತಮ್ಮ ಹಕ್ಕೊತ್ತಾಯದ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡೋ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು. ಉಪತಹಶಿಲ್ದಾರರಾದ ಅರುಂಧತಿ ನಾಗವಿ ರವರಿಗೆ ಹಕ್ಕೊತ್ತಾಯದ ಪತ್ರ ನೀಡಲಾಯಿತು, ಮುಖಂಡರಾದ ಪೆನ್ನಪ್ಪ,ಸಾಲುಮನಿ ರಾಘವೇಂದ್ರ,ಕರಿಯಪ್ಪ,ದೇವದಾಸಿ ವಿಮೋಚನ ಸಂಘದ ಪದಾಧಿಕಾರಿಗಳು,ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಕಡೆಗಳಿಂದ ಆಗಮಿಸಿದ್ದ ನೂರಾರು ಸಂಘಟನಾ ಕಾರ್ಯಕರ್ತರು ಭಾಗವಹಿಸಿದ್ದರು.
Reported By:
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
0 Response to "ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳಿಂದ ಹಕ್ಕೊತ್ತಾಯ-Kudligi"
Post a Comment