
ಹುಬ್ಬಳ್ಳಿ ಎಪಿಎಂಸಿ ಹಮಾಲಿ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ-Hubli
Sunday, August 22, 2021
Comment
ಹುಬ್ಬಳ್ಳಿ ಎಪಿಎಂಸಿ ಹಮಾಲಿ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ....
ಹುಬ್ಬಳ್ಳಿ ಎಪಿಎಂಸಿ ಹಮಾಲಿ ಹಾಗೂ ಕೂಲಿಕಾರ್ಮಿಕರ ನಿವಾಸಿಗಳ ಬಡಾವಣೆಯಲ್ಲಿ ಕುಡಿಯುವ ನೀರಿಲ್ಲದೆ ಅಲೆದಾಡುತ್ತಿರುವ ನಿವಾಸಿಗಳು ...
ಬಡಾವಣೆಗಳು ನಿರ್ಮಾಣವಾಗಿವೆ ಮೂಲಸೌಕರ್ಯಗಳ ಕೊರತೆಯಿಂದ ಜನನಾಯಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಪ ಹಾಕುತ್ತಿರುವ ನಿವಾಸಿಗಳು....
23 ವರ್ಷಗಳಿಂದ ಕುಡಿಯುವ ನೀರು ,ಶೌಚಾಲಯ, ಮೂಲಭೂತ ಸೌಲಭ್ಯಗಳಿಲ್ಲದೆ ಒದ್ದಾಡುತ್ತಿರುವಿ ಹಮಾಲಿ ಕಾರ್ಮಿಕರ ಕುಟುಂಬದವರು ಹಾಗೂ ಕಾರ್ಮಿಕರ ಕುಟುಂಬದ ನಿವಾಸಿಗಳು.....
ನಿವಾಸಿಗಳ ಬೇಡಿಕೆ :- ಹುಬ್ಬಳ್ಳಿ ಎಪಿಎಂಸಿ ಹಮಾಲಿ ಕಾರ್ಮಿಕರು 23 ವರ್ಷಗಳಿಂದ ವಾಸಿಸುತ್ತಿದ್ದು ಇಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ ವಾರದಲ್ಲಿ ಒಂದು ಸಲ ನೀರಿನ ಟ್ಯಾಂಕರ್ ಬರುತ್ತೆ ಅದು ಸಹ ಶುದ್ಧವಾದ ಕುಡಿಯುವ ನೀರು ಇರುವುದಿಲ್ಲ ಅದರಲ್ಲಿ ಗಲೀಜು ಹುಳಗಳು ಇರುತ್ತವೆ ಅಂತಹ ನೀರನ್ನು ಕುಡಿಯಬೇಕಾಗಿದೆ. ರಾಜಕೀಯ ವ್ಯಕ್ತಿಗಳು ಚುನಾವಣೆ ಬಂದಾಗ ಮಾತ್ರ ನಮ್ಮ ಕಡೆ ಬರುತ್ತಾರೆ ಸಮಸ್ಯೆಗಳನ್ನು ಹೇಳಿದರೆ ಎಲ್ಲವನ್ನೂ ಈಡೇರಿಸುವುದಾಗಿ ಆಶ್ವಾಸನೆ ನೀಡಿ ಸರಿಪಡಿಸುತ್ತೇವೆ ಎಂದು ಹೇಳಿ ಹೊರಟು ಹೋಗುತ್ತಾರೆ....
ಈ ಬಡಾವಣೆ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಘಟಕವು ಸಹ ಇಲ್ಲ . ಜಲಮಂಡಳಿಯ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿ, ಜನ ನಾಯಕರು, ಜನಪ್ರತಿನಿಧಿಗಳು ಮೂಲಭೂತ ಸೌಕರ್ಯಕ್ಕಾಗಿ ಮತ್ತು ಸುಮಾರು ವರ್ಷಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ....
ವರದಿ:
ರಾಘವೇಂದ್ರ ನರಗುಂದ
0 Response to "ಹುಬ್ಬಳ್ಳಿ ಎಪಿಎಂಸಿ ಹಮಾಲಿ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ-Hubli"
Post a Comment