-->
ಉಪರಾಷ್ಟ್ರಪತಿಗಳ ಹಂಪಿ ಪ್ರವಾಸ,ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ-Hubli

ಉಪರಾಷ್ಟ್ರಪತಿಗಳ ಹಂಪಿ ಪ್ರವಾಸ,ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ-Hubli

ಉಪರಾಷ್ಟ್ರಪತಿಗಳ ಹಂಪಿ ಪ್ರವಾಸ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ

ಹುಬ್ಬಳ್ಳಿ

  ಹೊಸಪೇಟೆ ಮತ್ತು ಐತಿಹಾಸಿಕ ಹಂಪಿ ಪ್ರವಾಸಕ್ಕೆ ಕೈಗೊಂಡಿರುವ ಗೌರವಾನ್ವಿತ ಉಪರಾಷ್ಟ್ರಪತಿಯವರಾದ ಶ್ರೀ ಎಂ.ವೆಂಕಯ್ಯನಾಯ್ಡು ಅವರು   ಪತ್ನಿ ಶ್ರೀಮತಿ ಎಂ.ಉಷಾ ಅವರೊಂದಿಗೆ ಇಂದು ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಆಗಮಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ , ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ್ ಶೆಟ್ಟರ್ ಅವರು ಶಾಲು ಹಾಕಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್  ಅವರು ಪುಸ್ತಕಗಳನ್ನು ನೀಡಿ ಬರಮಾಡಿಕೊಂಡರು..

ಭಾರತೀಯ ವಾಯುಸೇನೆಯ ವಿಶೇಷ ಹೆಲಿಕಾಪಟ್ಟರ್ ಮೂಲಕ ಹೊಸಪೇಟೆಗೆ ತೆರಳಿದರು.


ವರದಿ:
ರಘು ನರಗುಂದ

0 Response to "ಉಪರಾಷ್ಟ್ರಪತಿಗಳ ಹಂಪಿ ಪ್ರವಾಸ,ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ-Hubli"

Post a Comment

Article Top Ads

Central Ads Article 1

Middle Ads Article 2

Article Bottom Ads