-->
ದೇಶದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ದಿನದಂದು 'ಕಾರ್ಪೋರೇಟ್ ಕಂಪನಿಗಳಿಂದ ಭಾರತ ರಕ್ಷಿಸಿ' ಪ್ರತಿಭಟನೆ-Dharwad

ದೇಶದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ದಿನದಂದು 'ಕಾರ್ಪೋರೇಟ್ ಕಂಪನಿಗಳಿಂದ ಭಾರತ ರಕ್ಷಿಸಿ' ಪ್ರತಿಭಟನೆ-Dharwad

ದೇಶದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ದಿನದಂದು ಕಾರ್ಪೋರೇಟ್ ಕಂಪನಿಗಳಿಂದ ಭಾರತ ರಕ್ಷಿಸಿ' ಎಂದು ಆಗ್ರಹಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕಳೆದ 9 ತಿಂಗಳುಗಳಿಂದ ದಹಲಿಯ ಗಡಿಗಳಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರಾಜೀರಹಿತವಾದ
ಹೋರಾಟವು ಬಲಗೊಳ್ಳುತ್ತಾ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಸುಮಾರು 700 ಕ್ಕೂ ಹೆಚ್ಚು ರೈತರು ಹೋರಾಡುತ್ತಲೇ
ಪ್ರಾಣವನ್ನು ಕಳೆದುಕೊಂಡಿದ್ದಾರೆ. ಒಬ್ಬೊಬ್ಬ ರೈತನ ಸಾವು ನಮ್ಮ ಆಳ್ವಿಕರ ದುಷ್ಟ ಪ್ರಯತ್ನಗಳನ್ನು ವಿಫಲಗೊಳಿಸುವತ್ತ
ಸಾವಿರಾರು ಹೋರಾಟಗಾರರನ್ನು ಸೃಷ್ಟಿಸುತ್ತಿವೆ. ಲಾಭದ ದುರಾಸೆಯನ್ನು ಹೊತ್ತ, ದೇಶದ ಕೃಷಿಭೂಮಿ ಮತ್ತು
ಸಾರ್ವಜನಿಕ ಸೇವಾಕ್ಷೇತ್ರಗಳನ್ನು ಕಬಳಿಸುವ ಕನಸು ಕಾಣುತ್ತಿದ್ದ ಬಂಡವಾಳಗಾರರಿಗೆ ಇದು ಸಿಂಹಸ್ವಪ್ನವಾಗಿದೆ. ಆಳ್ವಿಕರು
ಭಯದಿಂದ ನಡಗುವಂತೆ ಮಾಡಿದೆ. ಹೋರಾಟವನ್ನು ಮುರಿಯಲು ಅವರು ಮಾಡುತ್ತಿರುವ ಎಲ್ಲಾ ದುಷ್ಟಯತ್ನಗಳು
ದೇಶದ ಜನತೆಯ ಒಗ್ಗಟ್ಟು ಹಾಗೂ ಹೊರಾಟಗಳ ಮುಂದೆ ಕೂಚ್ಚಿಕೊಂಡು ಹೋಗುತ್ತಿವೆ. ಅವರ ವಿಕೃತ ದುರಾಸೆಯ
ನಯವಾದ ಮುಖವಾಡವನ್ನು ಜನರು ಗುರುತಿಸತೊಡಗಿದ್ದಾರೆ. ಇಂದು ಈ 'ಕಾರ್ಪೋರೇಟ್ ಕಂಪನಿಗಳೇ, ಭಾರತ ಬಿಟ್ಟು
ತೋಲಗಿ". ಹೋರಾಟದ ಸಂದರ್ಭದಲ್ಲಿ
ಜನತೆ ಬಂಡವಾಳಶಾಹಿ ವ್ಯವಸ್ಥೆಯ ನಿಜಬಣ್ಣವನ್ನು
ಅರ್ಥಮಾಡಿಕೊಂಡಿದ್ದಾರೆ. ಅವರ ವಿರುದ್ಧ ಹೋರಾಡುತ್ತಿದ್ದಾರೆ.
ಕಳೆದ ವರ್ಷ ಕರೋನಾ ಮಹಾಮಾರಿಯ ವ್ಯಾಪಕವಾದ ಹರಡುವಿಕೆಯ ಸಂದರ್ಭದಲ್ಲಿ ಜನತೆಗೆ ಭಾರಿ ಭಯವನ್ನು ಹುಟ್ಟಿಸಿ ಅತ್ಯಂತ ಅಪ್ರಜಾತಾಂತ್ರಿಕವಾಗಿ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಆಗತ್ಯ ವಸ್ತುಗಳ ಸರಕು
ಸೇವಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆ 2020 ನ್ನು ತಂದು ಇಡೀ ರೈತಾಪಿ ವರ್ಗದ ಮರಣಶಾಸನವನ್ನು ಕೇಂದ್ರದ ಬಿಜೆಪಿ ಸರ್ಕಾರವು ಬರೆಯಿತು. ಅಲ್ಲದೇ ಕಂಪನಿಗಳ ಲಾಭಕ್ಕಾಗಿ ಪೆಟ್ರೋಲ್,ಡಿಸೇಲ್, ಅಡುಗೆ ಅನಿಲ, ಹೀಗೆ ಅಗತ್ಯ ವಸ್ತುಗಳ ದರಗಳು ಗಗನಕ್ಕೆ ಏರಿಸುತ್ತಿದೆ. 1991 ರಲ್ಲಿ ಅಂದಿನ ಕಾಂಗ್ರೆಸ್ಸ್ ಸರ್ಕಾರವು ಜಾರಿಗೊಳಿಸಿದ ಜಾಗತೀಕರಣ ನೀತಿಗಳ ಆಧಾರದಲ್ಲಿಯೇ ಈ ನೀತಿಗಳನ್ನು ತರಲಾಗಿದೆ ಎಂದು ಹೇಳುತ್ತಾ ಬಿಜೆಪಿ ಸರ್ಕಾರವು ತಾನು ಕಾಂಗ್ರೆಸ್‌ಗಿಂತ ಹೆಚ್ಚು ಬಂಡವಾಳಶಾಹಿಗಳಿಗೆ ನಿಷ್ಟಾವಂತನಾಗಿರುವದನ್ನು ತೋರಿಸಿಕೊಟ್ಟಿದೆ.
ಉಳಿದ ರಾಜಕೀಯ ಪಕ್ಷಗಳೂ ಸಹ ಈ ನೀತಿಗಳ ವಿರುದ್ಧ ಕೇವಲ ತಮ್ಮ ರಾಜಕೀಯ ಪ್ರಚಾರಕ್ಕಾಗಿ ಮಾತ್ರ ವಿರೋಧಿಸುತ್ತಿವೆ. ಆದ್ದರಿಂದ ಇಂದು ದೇಶವ್ಯಾಪಿ ನಡೆಯುತ್ತಿರುವ ಅಭೂತಪೂರ್ವ ಹೋರಾಟವು ಯಾವುದೇ ರಾಜಕೀಯ ಪಕ್ಷದ ನೇತೃತ್ವದಲ್ಲಿ ನಡೆಯದೇ ರೈತರು ಹಾಗೂ ಸಾಮಾನ್ಯ ಜನರ ನೇತೃತ್ವದಲ್ಲಿ ನಡೆಯುತ್ತಿರುವುದು
ವಿರೋಚಿತವಾಗಿದೆ.
ಈ ಸಂದರ್ಭದಲ್ಲಿ ಆಳ್ವಿಕರು ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ರೈತವಿರೋಧಿ ಕಾಯ್ದೆಗಳನ್ನು
ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಾ ಅದೇ ಸಂದರ್ಭದಲ್ಲಿ ಕನಿಷ್ಠ ಬೆಂಬಲಬೆಲೆಯನ್ನು ನಿಗಧಿಪಡಿಸಬೇಕೆಂದು ಆಗ್ರಹಿಸಿ ಈ ಹೋರಾಟವನ್ನು ಮುನ್ನಡೆಸಲಾಗುತ್ತಿದೆ. ಈ ಕಾಯ್ದೆಗಳಿಂದ ಇಡೀ ದೇಶದ ಜನಜೀವನವೇ ಆಸ್ಥವ್ಯಸ್ಥವಾಗುತ್ತಿರುವ ಈ ಘಳಿಗೆಯಲ್ಲಿ ಸಮಸ್ಯ ದೇಶದ ಜನತೆ ಅಖಂಡವಾಗಿ ಎದ್ದು ನಿಂತು
ಬಂಡವಾಳಶಾಹಿಗಳನ್ನು ಮತ್ತು ಅವರ ಸೇವೆ ಮಾಡುತ್ತಿರುವ ಬಾಲಬಡುಕ ರಾಜಕೀಯ ಪಕ್ಷಗಳನ್ನು ಸೋಲಿಸಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕವು ಕರೆ ನೀಡುತ್ತದೆ. ಈ ಸಂದರ್ಭದಲ್ಲಿ ಜೆಸಿಟಿಯು ನ ಮುಖಂಡರಾದ ಬಿ ಎನ್
ಪೂಜಾರ, ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್ ಕೆ ಎಸ್) ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ, ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷರಾದ ಗಂಗಾಧರ ಬಡಿಗರ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರದ ಕಲ್ಲೇಶ ಲಿಗಾಡಿಸಿಐಟಿಯುನ ಜಿಲ್ಲಾ ಅಧ್ಯಕ್ಷರಾದ ಬಿ ಐ ಈಳಗೇರ, ಮಹಾದಾಯಿ ಕಳಸ ಬಂಡೂರಿ ಹೋರಾಟ ಸಮಿತಿಯ ಲಕ್ಷ್ಮಣ ಬಕ್ಕಾಯಿ,ಯುವಜನ ಸಂಘಟನೆಯ ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಭವಾನಿಶಂಕರ ಗೌಡರ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮುಂತಾದವರು ಇದ್ದರು.


Reported By: 
ರಘು ನರಗುಂದ, ಧಾರವಾಡ

0 Response to "ದೇಶದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ದಿನದಂದು 'ಕಾರ್ಪೋರೇಟ್ ಕಂಪನಿಗಳಿಂದ ಭಾರತ ರಕ್ಷಿಸಿ' ಪ್ರತಿಭಟನೆ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads