
ಜೈಲು ಸೇರಿದ್ದ ವಿನಯ ಕುಲಕರ್ಣಿ ಗೆ ಬಿಗ್ ರಿಲಿಪ್...-Dharwad
Thursday, August 19, 2021
Comment
ಧಾರವಾಡ : ಜಿಪಂ ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ವಿನಯ ಕುಲಕರ್ಣಿ ಗೆ ಬಿಗ್ ರಿಲಿಪ್....ಕಳೆದ ಒಂಬತ್ತು ವರೆ ತಿಂಗಳಿಂದ ಹಿಂಡಲಗಾ ಜೈಲಿನಲ್ಲಿದ್ದ ವಿನಯ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶರತ್ತು ಬದ್ದ ಜಾಮಿನು ಮಂಜೂರಾಗಿದೆ...ಇನ್ನು ವಿನಯ ಕುಲಕರ್ಣಿ ಅಭಿಮಾನಿಗಳಿಗೆ ಇಂದು ಕುಣಿದು ಕುಪ್ಪಳಿಸಿದ್ದಾರೆ...ವಿನಯ ಕುಲಕರ್ಣಿ ಅವರಿಗೆ ಬೆಲ್ ಸಿಗುತ್ತಿದ್ದಂತೆ ಇಡಿ ಜಿಲ್ಲೆಯಲ್ಲಿ ಅಭಿಮಾನಿಗಳ ಹಳ್ಳಿ ಹಳ್ಳಿಗಳಲ್ಲೂ ಪಟ್ಟಣದಲ್ಲೂ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ...
ಧಾರವಾಡದ ಹೆಬ್ಬಳ್ಳಿ ಅಗಸಿಯಲ್ಲಿ ಬೆಂಬಲಿಗರ ಸಂಭ್ರಮಾಚರಣೆ ಮಾಡಿ ಸಿಹಿ ಹಂಚಿ ಹಬ್ಬದ ವಾತಾವರಣವನ್ನ ಮಾಡಿದ್ರೆ...ಇತ್ತ ವಿನಯ ಕುಲಕರ್ಣಿ ನಿವಾಸದತ್ತ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಬ್ರಮಿಸಿದರು..ಇನ್ನು ಕಳೆದ ಒಂಬತ್ತು ತಿಂಗಳಿಂದ ಧಾರವಾಡದ ಗ್ರಾಮೀಣ ಕ್ಷೆತ್ರದ ಜನರು ವಿನಯ ಕುಲಕರ್ಣಿ ಅವರು ಯಾವಾಗ ಬರ್ತಾರೆ, ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸದ್ಯ ಕೋರ್ಟ ತೀರ್ಪು ಸಿಹಿ ಹಂಚಿದಂತಾಗಿದೆ....
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶ ಪ್ರಕರಣದಲ್ಲೂ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಂಗಳೂರು ಜನಪ್ರತಿನಿಧಿ ಕೋರ್ಟ್ನಲ್ಲಿ ಜಾಮೀನು ದೊರೆತಿದ್ದು ನಾಳೆ ವಿನಯ್ ಕುಲಕರ್ಣಿಯವರು ಹಿಂಡಲಗಾ ಜೈಲಿನಿಂದ ಹೊರಬರುವುದು ಬಹುತೇಕ ನಿಚ್ಚಳವಾಗಿದೆ. ನಾಳೆ ಅಣ್ಣನ ಆಗಮನ ವಿ ಕೆ ಬಾಸ್ ಹೊರ ಬರುತ್ತಾರೆ ಅದ್ಧೂರಿ ಸ್ವಾಗತದಿಂದ ಕರೆ ತರಲು ಹೋಗೋಣ ಬನ್ನಿ ಬೆಳಗಾವಿ ಚಲೋ! 10ಗಂಟೆಗೆ ಬೆಳಗಾವಿಯ ಹಿಂಡಲಗಾ ಜೈಲಿನ ಹೊರಗೆ ಜಮ ಆಗೋಣ ಬನ್ನಿ ಎಂದು ಅಭಿಮಾನಿಗಳು ಕರೆ ನೀಡಿ ಫೇಸ್ಬುಕ್ ವಾರ್ ತುಂಬಿಸುತ್ತಿದ್ದಾರೆ... ಒಂಬತ್ತು ತಿಂಗಳ ನಂತರ ಮಾಜಿ ಸಚಿವರಿಗೆ ಬಿಡುಗಡೆ ಭಾಗ್ಯ ದೊರೆತಂತಾಗಿದೆ. ಕಾರ್ಪೋರೇಷನ್ ಚುನಾವಣೆ ಸಮಯ ಈಗ ರಂಗೇರತ್ತೆ ನೋಡಿ ಎಂದು ಅಭಿಮಾನಿಗಳು ಅಲ್ಲಲ್ಲಿ ನಿಂತು ಮಾತನಾಡುತ್ತಾ ಹರುಷ ಪಡುತ್ತಿದ್ದಾರೆ.
Reported By:
ರಘು ನರಗುಂದ
ಧಾರವಾಡ
0 Response to "ಜೈಲು ಸೇರಿದ್ದ ವಿನಯ ಕುಲಕರ್ಣಿ ಗೆ ಬಿಗ್ ರಿಲಿಪ್...-Dharwad"
Post a Comment